ಶುಕ್ರವಾರ, ಮೇ 20, 2022
21 °C

ಜಿಡಿಪಿ ಪ್ರಗತಿ ಶೇ 6.5ಕ್ಕಿಂತ ಕಡಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ(ಐಎಎನ್‌ಎಸ್): ದೇಶದಲ್ಲಿನ ಒಟ್ಟಾರೆ ಆಂತರಿಕ ಉತ್ಪಾದನೆ(ಜಿಡಿಪಿ) ಪ್ರಗತಿ 2012-13ರಲ್ಲಿ ಶೇ 6.5ಕ್ಕಿಂತಲೂ ಕಡಿಮೆ ಇರಲಿದೆ ಎಂದು ಉದ್ದಿಮೆಗಳ ಪ್ರಾತಿನಿಧಿಕ ಸಂಸ್ಥೆ ಭಾನುವಾರ ಕಳವಳ ವ್ಯಕ್ತಪಡಿಸಿದೆ. ಅದರ ಬೆನ್ನಲ್ಲೇ, `ಕೇಂದ್ರ ಸರ್ಕಾರ ಇನ್ನೂ 50 ದೊಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಶೀಘ್ರ ಪ್ರಕಟಿಸಲಿ~ ಎಂದು ಭಾನುವಾರ ಒತ್ತಾಯಿಸಿದೆ.ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ) ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ, ವಾಣಿಜ್ಯೋದ್ಯಮ ಕ್ಷೇತ್ರದ ಭಾವನೆಗಳು ಮತ್ತು ನಿರೀಕ್ಷೆಗಳು ಹಾಳಾಗಿವೆ ಎಂಬುದನ್ನು ಇತ್ತೀಚಿನ ಚುನಾವಣೆ ಫಲಿತಾಂಶಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಹಾಗಾಗಿ ಉದ್ದಿಮೆ ಕ್ಷೇತ್ರದಲ್ಲಿ ವಿಶ್ವಾಸ ಮೂಡಿಸಲು ಕೇಂದ್ರ ಸರ್ಕಾರ ತುರ್ತಾಗಿ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

 

50 ಬೃಹತ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿ ಅನುಮತಿ,  ಮೂರನೇ ವ್ಯಕ್ತಿಯನ್ನೊಳಗೊಂಡ ನಿರ್ವಹಣಾ ವ್ಯವಸ್ಥೆಯನ್ನು ಬೇಗ  ಜಾರಿಗೆ ತರಬೇಕು ಎಂದರು.ನಾಗರಿಕ ವಿಮಾನ ಯಾನ, ರಕ್ಷಣಾ ಸಾಧನಗಳ ತಯಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ನೇರ ವಿದೇಶಿ ಹೂಡಿಕೆ ಮಿತಿಯಲ್ಲಿ ಹೆಚ್ಚಿನ ರಿಯಾಯಿತಿ ತೋರುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಇನ್ನಷ್ಟು ಮುಕ್ತಗೊಳಿಸಬೇಕಿದೆ.

 

ಜತೆಗೆ ಬಹುಬಗೆ ಬ್ರಾಂಡ್‌ನ ರಿಟೇಲ್ ಉತ್ಪನ್ನಗಳ ಮಾರುಕಟ್ಟೆ ವಲಯದಲ್ಲಿಯೂ ನೇರ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಡಬೇಕಿದೆ. ಇದರಿಂದ ಜಾಗತಿಕ ಹೂಡಿಕೆದಾರರಲ್ಲಿ ಭಾರತದೆಡೆಗಿನ ವಿಶ್ವಾಸ ಹೆಚ್ಚುತ್ತದೆ. ಈ ಎಲ್ಲ ಕ್ರಮಗಳನ್ನೂ ಕೈಗೊಂಡಲ್ಲಿ ರೂಪಾಯಿಯ ಸತತ ಅಪಮೌಲ್ಯಗೊಳ್ಳುವುದೂ ನಿಲ್ಲಲಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.