ಜಿಡಿಪಿ ಮುನ್ನೋಟ ತಗ್ಗಿಸಿದ ‘ಫಿಚ್‌’

6

ಜಿಡಿಪಿ ಮುನ್ನೋಟ ತಗ್ಗಿಸಿದ ‘ಫಿಚ್‌’

Published:
Updated:

ನವದೆಹಲಿ(ಪಿಟಿಐ): ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ‘ಫಿಚ್‌’ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ‘ಜಿಡಿಪಿ’ ಪ್ರಗತಿ ಮುನ್ನೋಟ­ವನ್ನು ಶೇ 4.8ಕ್ಕೆ ತಗ್ಗಿಸಿದೆ.ಡಾಲರ್‌ ವಿರುದ್ಧ ರೂಪಾಯಿ ಅಪ ಮೌಲ್ಯ, ಹಣದುಬ್ಬರ, ಹೆಚ್ಚುತ್ತಿ­ರುವ ‘ಚಾಲ್ತಿ ಖಾತೆ ಕೊರತೆ’(ಸಿಎಡಿ) ಮೊದ ಲಾದ ಕಾರಣಗಳಿಂದ ಭಾರತದ ರೇಟಿಂಗ್ ತಗ್ಗಿಸಲಾಗಿದೆ ಎಂದು ‘ಫಿಚ್‌’ ಗುರುವಾರ ಬಿಡುಗಡೆ ಮಾಡಿರುವ ‘ಜಾಗತಿಕ ಆರ್ಥಿಕ ಮುನ್ನೋಟ’ ವರದಿ ಯಲ್ಲಿ ಸ್ಪಷ್ಟಪಡಿಸಿದೆ.ಡಾಲರ್‌ ವಿರುದ್ಧ ರೂಪಾಯಿ ವಿನಿ ಮಯ ಮೌಲ್ಯ ಮೇ ತಿಂಗಳಿಂದ ಇಲ್ಲಿಯ ವರೆಗೆ ಶೇ 20ರಷ್ಟು ಕುಸಿದಿದೆ. ಇದರಿಂದ ‘ಸಿಎಡಿ’ ದಾಖಲೆ ಪ್ರಮಾಣ ದಲ್ಲಿ ಹೆಚ್ಚಿದೆ. ಮುನ್ನೋಟ ತಗ್ಗಿಸಲು ಇದು ಪ್ರಮುಖ ಕಾರಣ ಎಂದು ಎಂದಿ ರುವ ‘ಫಿಚ್‌’, 2014–15ನೇ ಸಾಲಿನಲ್ಲಿ ‘ಜಿಡಿಪಿ’ ಶೇ 5.8ರಷ್ಟು ಪ್ರಗತಿ ಕಾಣಬಹುದು ಎಂದೂ ಭವಿಷ್ಯ ನುಡಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry