ಶುಕ್ರವಾರ, ಮೇ 14, 2021
27 °C

ಜಿನಬಿಂಬ ಪಂಚಕಲ್ಯಾಣ ಉತ್ಸವ 22ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದಕ್ಷಿಣ ಭಾರತ ಜೈನ ಸಭೆಯ ಅಂಗಸಂಸ್ಥೆಯಾದ ದಿಗಂಬರ ಜೈನ್ ಬೋರ್ಡಿಂಗ್‌ನ ಶತಮಾನೋತ್ಸವ ಸಮಾರಂಭ ಹಾಗೂ ಭಗವಾನ್ ಚಂದ್ರಪ್ರಭ ತೀರ್ಥಂಕರ ಮತ್ತು ಚತುರ್ಮುಖ ಜಿನಬಿಂಬದ ಪಂಚಕಲ್ಯಾಣ ಮಹೋತ್ಸವ ಇದೇ 22ರಿಂದ 26ರ ವರೆಗೆ ರೈಲು ನಿಲ್ದಾಣ ರಸ್ತೆಯ ಜೈನ್ ಬೋರ್ಡಿಂಗ್ ಆವರಣದಲ್ಲಿ ನಡೆಯಲಿದೆ.`ಪಂಚಕಲ್ಯಾಣದ ಅಂಗವಾಗಿ ಜೀರ್ಣೋದ್ಧಾರಗೊಂಡ ಬಸದಿಯ ಪುರಾತನ ಪ್ರತಿಮೆಯನ್ನು ಶಿಖರದಲ್ಲಿ ಸ್ಥಾಪಿಸಲಾಗುವುದು. ಮೂಲವೇದಿಕೆಯಲ್ಲಿ ಪಂಚಲೋಹದ ಚಂದ್ರಪ್ರಭ ಜಿನಬಿಂಬ ಹಾಗೂ ಹೊಸ ಚತುರ್ಮುಖ ಜಿನಬಿಂಬದ ಪ್ರತಿಷ್ಠಾಪನೆ ನಡೆಯಲಿದೆ.ಧಾರ್ಮಿಕ ಕಾರ್ಯಕ್ರಮದ ನೆಪದಲ್ಲಿ ಸಮಾಜದ ಪ್ರಗತಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು~ ಎಂದು ಪಂಚಕಲ್ಯಾಣ ಹಾಗೂ ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ದತ್ತಾ ಸಿ. ಡೋರ್ಲೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`22ರಂದು ಮುಂಜಾನೆ 6 ಗಂಟೆಗೆ ನಾಂದಿಮಂಗಲ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಮಧ್ಯಾಹ್ನ ಧರ್ಮ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಗುಣಧರ ನಂದಿ ಮಹಾರಾಜ, ಪುಣ್ಯಸಾಗರ ಮಹಾರಾಜ ಹಾಗೂ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಮೇಯರ್ ಡಾ. ಪಾಂಡುರಂಗ ಪಾಟೀಲ ಉದ್ಘಾಟಿಸುವರು~ ಎಂದು ಅವರು ತಿಳಿಸಿದರು.23ರಂದು ಜನ್ಮ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಧಾರ್ಮಿಕ ಕಾರ್ಯಗಳು ನಡೆಯಲಿವೆ. 3 ಗಂಟೆಗೆ ನಡೆಯ ಲಿರುವ ಧರ್ಮಸಭೆಯಲ್ಲಿ ಗುಣಧರನಂದಿ ಮಹಾ ರಾಜ, ಪುಣ್ಯಸಾಗರ ಮಹಾರಾಜ ಹಾಗೂ ಚಾರು ಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾ ರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜೈನ್ ಬೋರ್ಡಿಂಗ್‌ನ ಗೌರವ ಕಾರ್ಯದರ್ಶಿ ವಿದ್ಯಾಧರ ವಿ. ಪಾಟೀಲ ಅಧ್ಯಕ್ಷತೆ ವಹಿಸುವರು.

 

ತುಮಕೂರಿನ ಡಾ. ಎಸ್.ಪಿ. ಪದ್ಮನಾಭ ಉಪನ್ಯಾಸ ನೀಡುವರು. 24ರಂದು ದೀಕ್ಷಾ ಕಲ್ಯಾಣ ಕಾರ್ಯಕ್ರಮಗಳು ಮುಂಜಾನೆ 6 ಗಂಟೆಗೆ ಧಾರ್ಮಿಕ ಕಾರ್ಯಗಳೊಂದಿಗೆ ಆರಂಭ ವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಗುಣಧರನಂದಿ ಮಹಾರಾಜ, ಪುಣ್ಯಸಾಗರ ಮಹಾರಾಜ ಹಾಗೂ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ  ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ದಕ್ಷಿಣ ಭಾರತ ಜೈನ ಸಭಾದ ಉಪಾಧ್ಯಕ್ಷ ಎಂ.ಡಿ. ದಾನೊಳ್ಳಿ ವಹಿಸಲಿದ್ದಾರೆ. ಧಾರವಾಡದ ಡಾ. ಶಾಂತಿನಾಥ ದಿಬ್ಬದ ಉಪನ್ಯಾಸ ನೀಡುವರು~ ಎಂದು ಡೋರ್ಲೆ ತಿಳಿಸಿದರು.`25ರಂದು ಕೇವಲ ಜ್ಞಾನ ಕಲ್ಯಾಣ ನಡೆಯ ಲಿದ್ದು, ಮುಂಜಾನೆ 6ಕ್ಕೆ ಮಂಗಳವಾದ್ಯ ಘೋಷ ಮತ್ತಿತರ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನ 3ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಗುಣಧರನಂದಿ ಮಹಾರಾಜ, ಪುಣ್ಯಸಾಗರ ಮಹಾರಾಜ ಹಾಗೂ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ದಕ್ಷಿಣ ಭಾರತ ಜೈನ ಸಭಾದ ಮಹಾಮಂತ್ರಿ ಜಿ.ಜಿ. ಲೋಬೊಗೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ದರ್ಪಣ ಜೈನ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.26ರಂದು ಮುಂಜಾನೆ 6 ಗಂಟೆಗೆ ಮಂಗಳ ವಾದ್ಯ ಘೋಷ ದೊಂದಿಗೆ ಮೋಕ್ಷಕಲ್ಯಾಣ ಕಾರ್ಯ ಕ್ರಮಗಳು ಆರಂಭವಾಗಲಿವೆ. ಗುಣಧರನಂದಿ ಮಹಾರಾಜ, ಪುಣ್ಯಸಾಗರ ಮಹಾರಾಜ, ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಎ.ಎ. ಮಗದುಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೊಲ್ಲಾ ಪುರದ ಡಾ. ಸುಜಾತಾ ಸುಭಾಷ ಶಾಸ್ತ್ರಿ ಹಾಗೂ ಬೆಂಗಳೂರಿನ ಡಾ. ನೀರಜಾ ಎನ್. ಕುಮಾರ ಉಪ ನ್ಯಾಸ ನೀಡುವರು~ ಎಂದು ಅವರು ವಿವರಿಸಿದರು.`ಜೈನ್ ಬೋರ್ಡಿಂಗ್‌ನ ಶತಮಾನೋತ್ಸವ ಸಮಾರಂಭವನ್ನು 27ರಂದು ಬೆಳಿಗ್ಗೆ 10.30ಕ್ಕೆ ಸಚಿವ ಜಗದೀಶ ಶೆಟ್ಟರ ಉದ್ಘಾಟಿಸುವರು~ ಎಂದು ಅವರು ತಿಳಿಸಿದರು.  ವಿದ್ಯಾಧರ ಪಿ. ಪಾಟೀಲ, ವಿಮಲ ತಾಳಿಕೋಟಿ, ಆರ್.ಟಿ. ತವನಪ್ಪನವರ, ಶಾಂತಿನಾಥ ಹೋತ ಪೇಟಿ, ಜಿ.ಜಿ. ಲೋಬೊಗೋಳ  ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.