ಜಿನಾ ರಿನ್ಹರ್ಟ್: ಪ್ರಪಂಚದ ಅತಿ ಶ್ರೀಮಂತ ಮಹಿಳೆ ?

7

ಜಿನಾ ರಿನ್ಹರ್ಟ್: ಪ್ರಪಂಚದ ಅತಿ ಶ್ರೀಮಂತ ಮಹಿಳೆ ?

Published:
Updated:
ಜಿನಾ ರಿನ್ಹರ್ಟ್: ಪ್ರಪಂಚದ ಅತಿ ಶ್ರೀಮಂತ ಮಹಿಳೆ ?

ಲಂಡನ್ (ಐಎಎನ್‌ಎಸ್): ಆಸ್ಟ್ರೇಲಿಯಾ ಮೂಲದ ಗಣಿ ಉದ್ಯಮಿ ಜಿನಾ ರಿನ್ಹರ್ಟ್ ಅವರು ಪ್ರಪಂಚದ  ಅತಿ ಶ್ರೀಮಂತ ವ್ಯಕ್ತಿಯಾಗುವ ಸಾಧ್ಯತೆಗಳಿವೆ ಎಂದು `ಡೈಲಿ ಟೆಲಿಗ್ರಾಫ್~  ಪತ್ರಿಕೆ ವರದಿ ಮಾಡಿದೆ.ಕಳೆದ 20 ವರ್ಷಗಳ ಹಿಂದೆ ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ನಷ್ಟಪೀಡಿತ ಗಣಿ ಉದ್ಯಮವನ್ನು ಜಿನಾ ಲಾಭದಾಯಕವಾಗಿ ನಿರ್ವಹಿಸಿಕೊಂಡು ಬರುತ್ತ್ದ್ದಿದಾರೆ. ಕಂಪೆನಿಯ ಸಂಪೂರ್ಣ ಒಡೆತನವನ್ನು ಜಿನಾ ಒಬ್ಬರೇ ಹೊಂದ್ದ್ದಿದು, ಬೇರೆ ಯಾರೊಬ್ಬರೂ ಷೇರುದಾರರಿಲ್ಲ ಎಂದು ಪತ್ರಿಕೆ ಹೇಳಿದೆ.ಸದ್ಯ ಜಗತ್ತಿನ ಶ್ರೀಮಂತರ ಸಾಲಿನಲ್ಲಿ  73 ಶತಕೋಟಿ ಡಾಲರ್ (ರೂ.3,28,500 ಕೋಟಿ) ಸಂಪತ್ತಿನ ಒಡೆಯ ಮೆಕ್ಸಿನ್ ಮೂಲದ ಕಾರ್ಲೊಸ್ ಸ್ಲಿಮ್ ಮೊದಲ ಸ್ಥಾನದಲ್ಲಿದ್ದಾರೆ. 55 ಶತಕೋಟಿ ಡಾಲರ್ (ರೂ.2,47,500 ಕೋಟಿ) ಆಸ್ತಿಯೊಂದಿಗೆ  ಮೈಕ್ರೊಸಾಫ್ಟ್  ಅಧ್ಯಕ್ಷ ಬಿಲ್‌ಗೇಟ್ಸ್ ಎರಡನೆಯ ಸ್ಥಾನದಲ್ಲಿದ್ದಾರೆ.ಇವರಿಬ್ಬರನ್ನೂ ಜಿನಾ ಹಿಂದಿಕ್ಕುವ ಸಾಧ್ಯತೆಗಳು ಹೆಚ್ಚಿವೆ. ತಮ್ಮ ಒಡೆತನಕ್ಕೆ ಸೇರಿದ ಕಬ್ಬಿಣ ಅದಿರುವ ಮತ್ತು ಕಲ್ಲಿದ್ದಲು ವಹಿವಾಟಿನ ಮೂಲಕ ಜಿನಾ ವಾರ್ಷಿಕ 10 ಶತಕೋಟಿ ಡಾಲರ್ (ರೂ.45,000 ಕೋಟಿ) ಲಾಭ ಪಡೆಯುತ್ತ್ದ್ದಿದಾರೆ. ಈ ಮೂಲಕ ಅವರ ಒಟ್ಟು  ಸಂಪತ್ತು 100 ಶತಕೋಟಿ  ಡಾಲರ್ ( ರೂ.4,50,000 ಕೋಟಿ) ಮೀರಬಹುದು ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry