ಜಿನ್ನಿಂಗ್ ಫ್ಯಾಕ್ಟರಿಗೆ ಬೆಂಕಿ: 5.5 ಕೋಟಿ ರೂ. ಹಾನಿ

7

ಜಿನ್ನಿಂಗ್ ಫ್ಯಾಕ್ಟರಿಗೆ ಬೆಂಕಿ: 5.5 ಕೋಟಿ ರೂ. ಹಾನಿ

Published:
Updated:

ರಾಣೆಬೆನ್ನೂರು:  ತಾಲ್ಲೂಕಿನ ಕಮದೋಡ ಗ್ರಾಮದಲ್ಲಿ ಸೋಹಂ ಕಾಟ್‌ಫಿನ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿ ಅಂಡಿಗೆಗಳಿಗೆ ಮಂಗಳವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ 4500ಕ್ಕೂ ಹೆಚ್ಚು ಅಂಡಿಗೆಗಳು ಹಾಗೂ ಶೆಡ್, ರಾಟಿಗಳು ಸಂಪೂರ್ಣ ಸುಟ್ಟಿವೆ.ಹತ್ತಿ ಅಂಡಿಗೆ, ಯಂತ್ರೋಪಕರಣ ಸುಟ್ಟಿದ್ದರಿಂದ ಸುಮಾರು  ರೂ.5.5 ಕೋಟಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.ನಗರದ ಭಾಗ್ಯಲಕ್ಷ್ಮಿ ಟ್ರೇಡಿಂಗ್ ಕಂಪನಿ ಮಾಲೀಕರಾದ ಎಲ್.ಬಿ. ಪಾಟೀಲ ಅವರಿಗೆ ಸೇರಿದ ಹತ್ತಿ ಅಂಡಿಗೆಗಳು ಸುಟ್ಟುಹೋಗಿವೆ.ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕುಮಾರಪಟ್ಟಣ, ಹಿರೆಕೆರೂರು, ಹಾವೇರಿಯಿಂದ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಶ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry