ಶನಿವಾರ, ಏಪ್ರಿಲ್ 10, 2021
32 °C

ಜಿ.ಪಂ ಅಧ್ಯಕ್ಷೆಯ ಹಸ್ತಕ್ಷೇಪ ವಿರುದ್ಧ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ನವಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆಯೂ ಆಗಿರುವ ಅಧ್ಯಕ್ಷೆ ಜ್ಯೋತಿ ಬಿಲ್ಗಾರ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ದೂರಿದರು.ಗ್ರಾಪಂ ಆಡಳಿತದಲ್ಲಿ ಜಿಪಂ ಅಧ್ಯಕ್ಷರ ಹಸ್ತಕ್ಷೇಪ ವಿರೋಧಿಸಿ ಗ್ರಾಪಂ ಕಚೇರಿ ಮುಂದೆ ಗ್ರಾಪಂ ಆಡಳಿತ ಮಂಗಳವಾರ ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.ಗ್ರಾಮಕ್ಕೆ ಬಸವ ವಸತಿ ಹಾಗೂ ಇಂದಿರಾ ಆವಾಜ್ ಯೋಜನೆಯಡಿ ಮಂಜೂರಾದ 385 ಮನೆಗಳಲ್ಲಿ ಶಾಸಕ ಶಿವರಾಜ ತಂಗಡಗಿ 80 ಹಾಗೂ ಜಿಪಂ ಅಧ್ಯಕ್ಷರು 260 ಮನೆಗಳನ್ನು ತಮ್ಮ ಬೆಂಬಲಿಗರಿಗೆ ನೀಡುವಂತೆ ತಾಕೀತು ಮಾಡುತ್ತಿದ್ದಾರೆ, 303 ಮನೆಗಳನ್ನು ಸರ್ಕಾರದ ನಿಯಮದ ಪ್ರಕಾರ ಎಲ್ಲ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸುವ ಮೂಲಕ ಹಂಚಲಾಲಾಗಿದೆ, ಉಳಿದ ಮನೆಗಳನ್ನೂ ಹಂಚಿಕೆ ಮಾಡಲಾಗುವದು. ತಾವು ಸೂಚಿಸಿದವರಿಗೆ ಮನೆಗಳನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಬಿಲ್ಗಾರ ಮನೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದಾರೆ ಎಂದು ದೂರಿದರು.ಕಾನೂನು ಪಾಲಿಸಬೇಕಾದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್.ಎನ್. ಮಠ, ಅಧ್ಯಕ್ಷೆಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ, ಕಾರ್ಯದರ್ಶಿಗಳನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ ಎಂದರು.

ಅಧ್ಯಕ್ಷೆಯ ಪತಿಯ ಬೆದರಿಕೆ ಮತ್ತು ದಬ್ಬಾಳಿಕೆಯಿಂದ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿದೆ ಎಂದು ದೂರಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಪ್ಪ ಹೂಗಾರ, ಗ್ರಾಮ ಪಂಚಾಯಿತಿ ಸದಸ್ಯ ಶಿವರೆಡ್ಡಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಜೂಲೆಪ್ಪ, ಗ್ರಾಪಂ ಉಪಾಧ್ಯಕ್ಷ ವಿರುಪಣ್ಣ ಚೆಲುವಾದಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.