ಜಿಪಂ ಅಧ್ಯಕ್ಷೆ ದಿಢೀರ್ ಭೇಟಿ

7

ಜಿಪಂ ಅಧ್ಯಕ್ಷೆ ದಿಢೀರ್ ಭೇಟಿ

Published:
Updated:

ಕಾರಟಗಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ದಾಖಲೆ ಒದಗಿಸುವಂತೆ ಮೌಖಿಕ ಆದೇಶ ನೀಡಿದ್ದರಿಂದ ಸಾರ್ವಜನಿಕರ ಕೆಲಸಗಳಿಗೆ ವಿರಾಮ ನೀಡಿ, ದಾಖಲೆ ಸಿದ್ಧ ಮಾಡುವ ಕಾರ್ಯದಲ್ಲಿ ಗ್ರಾಪಂನ ಅಧಿಕಾರಿ ಹಾಗೂ ಸಿಬ್ಬಂದಿ ನಿರತರಾಗಿರುವುದು ಶುಕ್ರವಾರ ಇಲ್ಲಿ ಕಂಡುಬಂತು.ಕಳೆದ ಮಂಗಳವಾರ ಜಿಪಂ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ದಿಢೀರ್ ಭೇಟಿ ನೀಡಿ ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಗುರುವಾರ ದಾಖಲೆಗಳ ಸಮೇತ ಕೊಪ್ಪಳಕ್ಕೆ ಬರುವಂತೆ ಮೇಲಾಧಿಕಾರಿಗಳ ಮೂಲಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ತಾಕೀತು ಮಾಡಿದ್ದರು. ತಾಪಂ ಇಓ ಮೌಖಿಕ ಆದೇಶದಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಓ) ವಿದ್ಯಾವತಿ ತಮ್ಮ 4 ತಿಂಗಳ ಅನಾರೋಗ್ಯದ ಮಗುವಿನೊಂದಿಗೆ ಗ್ರಾಪಂ ಸಿಬ್ಬಂದಿಯೊಂದಿಗೆ ದಾಖಲೆ ಸಮೇತ ತೆರಳಿದ್ದರು. ಆದರೆ ಅಧ್ಯಕ್ಷರ ಕಛೇರಿಗೆ ಬೀಗ ಹಾಕಿದ್ದರಿಂದ, ದೂರವಾಣಿಯಲ್ಲಿ ಸಂಪರ್ಕದ ಯತ್ನ ವಿಫಲವಾಗಿದ್ದರಿಂದ ವಾಪಸ್ಸಾಗಿದ್ದರು.- ಇಂದು ಇಲ್ಲಿಯ ಗ್ರಾಪಂ ಕಛೇರಿಗೆ ಜಿಪಂ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಎರಡನೇಯ ದಿಢೀರ್ ಭೇಟಿಯನ್ನು ತಾಪಂ ಇಓರೊಂದಿಗೆ ನೀಡಿದಾಗ ಇಡೀ ಘಟನೆ ಎಲ್ಲರ ಸಮ್ಮುಖದಲ್ಲಿಯೆ ಬಹಿರಂಗಗೊಂಡಿತು.ಜಿಪಂ ಅಧ್ಯಕ್ಷರು ದಾಖಲೆಗಳನ್ನು ಪರಿಶೀಲಿಸುವ ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿ ಅಭಿವೃದ್ಧಿ ಮಾಡಬೇಕೆಂಬ ಕಳಕಳಿಯಿಂದ, ಗ್ರಾಪಂ ಸದಸ್ಯರ ದೂರಿನಿಂದ ದಾಖಲೆ ಪರಿಶೀಲಿಸಲಾಗುತ್ತಿದೆ. ಕಾರಟಗಿ ಗ್ರಾಪಂ ಬಗ್ಗೆ ಮಾತ್ರ ತಮ್ಮ ಗಮನ ಕೇಂದ್ರೀಕರಿಸಿದ್ದಕ್ಕೆ ಬೇರಾವ ಕಾರಣವಿಲ್ಲ. ಹಣ ದುರುಪಯೋಗ, ಅಪವ್ಯಯ ಆಗಿರುವ ಬಗ್ಗೆಯೂ ದೂರಿಲ್ಲ. ದಾಖಲೆ ಪರಿಶೀಲಿಸಿದ್ದು, ಇನ್ನುಳಿದ ದಾಖಲೆ ಪರಿಶೀಲಿಸಬೇಕಾಗಿದೆ. ಅವನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ಕೈಗೊಳ್ಳಲಾಗುವುದು, ಇನ್ನಿತರ ಅವಶ್ಯಕ ಕಾರ್ಯದ ಬಗ್ಗೆ ಗಮನಹರಿಸಲಾಗುವುದು ಎಂದರು. ಉಪಸ್ಥಿತರಿದ್ದ ಅನೇಕ ಸದಸ್ಯರು ಪಿಡಿಓ ಕೆಲಸದ ಬಗ್ಗೆ ನಾವು ಯಾರೂ ದೂರಿಲ್ಲ, ನಿಮ್ಮ ಭೇಟಿಗೆ ನಮ್ಮ ಸ್ವಾಗತವಿದೆ ಎಂದರು. ಒಬ್ಬಿಬ್ಬ ಸದಸ್ಯರು ಮಾತ್ರ ಪಿಡಿಓ ಬಗ್ಗೆ ದೂರಿದರು.‘ಉಪಸ್ಥಿತರಿದ್ದ ತಾಪಂ ಇಓ ಎನ್‌ಆರ್‌ಇಜಿಯಡಿ ಬಹಳಷ್ಟು ಕಾಮಗಾರಿ ಕೈಗೊಳ್ಳಬೇಕಿದೆ. ಸದಸ್ಯರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಗ್ರಾಪಂ ಕಾರ್ಯದರ್ಶಿಯನ್ನಾಗಿ ಪ್ರಕಾಶ್ ಹಿರೇಮಠರನ್ನು ನೇಮಿಸಿದ್ದು, ಇಂದು ಶೋಕಾಸ್ ನೋಟೀಸ್ ನೀಡಿ ಸೋಮವಾರ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಲಾಗಿದೆ. ಪಿಡಿಓ ಅವರಿಗೆ ಮಾನಸಿಕ ಒತ್ತಡ, ತೊಂದರೆ ನೀಡುತ್ತಿಲ್ಲ. ಹಿರಿಯ ಅಧಿಕಾರಿಗಳ ಆದೇಶವನ್ನು ಗುರುವಾರ ಪಾಲಿಸಿರುವೆ. ಇದರ ಹಿಂದೆ ಯಾರ ಒತ್ತಡ, ಪ್ರಭಾವ ಇಲ್ಲ’ ಎಂದು ನುಣುಚಿಕೊಂಡರು.ಇದಕ್ಕೂ ಮೊದಲು ಪಿಡಿಓ ವಿದ್ಯಾವತಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಮಗೆ ಯಾರೂ ಕಿರಿಕಿರಿ ಮಾಡಿಲ್ಲ. ಜಿಪಂ ಅಧ್ಯಕ್ಷರ ಸೂಚನೆಯ ಮೇರೆಗೆ ದಾಖಲೆ ಸಿದ್ಧಪಡಿಸಲಾಗುತ್ತಿದೆ, ಜಿಪಂ ಅಧ್ಯಕ್ಷರ ಪತಿಯೊಂದಿಗೆ ಸೌಜನ್ಯಮರೆತು ಮಾತನಾಡಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry