ಸೋಮವಾರ, ಮಾರ್ಚ್ 8, 2021
19 °C
ಗುಡ್ಡದ ರಂಗವ್ವನಹಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಕಣಕ್ಕೆ

ಜಿ.ಪಂ ಕಣದಲ್ಲಿ ಲೈಂಗಿಕ ಅಲ್ಪಸಂಖ್ಯಾತೆ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಜಿ.ಪಂ ಕಣದಲ್ಲಿ ಲೈಂಗಿಕ ಅಲ್ಪಸಂಖ್ಯಾತೆ

ಚಿತ್ರದುರ್ಗ: ‘ಚುನಾವಣೆ ಆಡಿ, ಆಡಿಸಿ ಅನುಭವ ಇದೆ. ದೇಶಗಳನ್ನು ಸುತ್ತಿ ದ್ದೇನೆ, ಒಂಬತ್ತು ಭಾಷೆ ಕಲಿತಿದ್ದೇನೆ.. ಹುಟ್ಟಿದ ಊರಿಗೆ, ಬಡವರಿಗೆ  ಹಾಗೂ ನಮ್ಮ ಹಾಗೆ ಅತಂತ್ರರಾಗಿರುವವರಿಗೆ ಏನಾದರೂ ಸೌಲಭ್ಯ ಕಲ್ಪಿಸಿಕೊಡುವ ಮನಸ್ಸಿದೆ. ಅದಕ್ಕಾಗಿಯೇ ಚುನಾವಣಾ ಹೋರಾಟಕ್ಕೆ ಇಳಿಯುತ್ತಿದ್ದೇನೆ...’ಇದು ಜಿ.ಆರ್‌. ಹಳ್ಳಿ (ಗುಡ್ಡದರಂಗವ್ವನ ಹಳ್ಳಿ) ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ ಲೈಂಗಿಕ ಅಲ್ಪಸಂಖ್ಯಾತೆ ಕುಮಾರಿ ಅವರ ಆತ್ಮವಿಶ್ವಾಸದ ನುಡಿಗಳು.ನಗರದ ಹೆದ್ದಾರಿ ಬಳಿ ಡಾಬಾ ನಡೆಸುತ್ತಿರುವ ಕುಮಾರಿ, ಮೂಲತಃ ತಾಲ್ಲೂಕಿನ ಆಯಿತೋಳು ಗ್ರಾಮದ ವರು. ಇದು ಜಿ.ಆರ್‌.ಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಯಾಗಿದೆ. ಕುಮಾರನಾಗಿದ್ದ ಇವರು 14ನೇ ವಯಸ್ಸಿನಲ್ಲಿ ‘ಕುಮಾರಿ’ಯಾಗಿ ಪರಿವರ್ತನೆಗೊಂಡರು. ಬಳಿಕ ಮನೆಯಿಂದ ಹೊರಗುಳಿದರು.‘ಬದುಕಿಗಾಗಿ ಪುಣೆ, ಮುಂಬೈ ಸೇರಿದಂತೆ ದೇಶದ ವಿವಿಧ ಮಹಾನಗರ ಗಳನ್ನು ಸುತ್ತಾಡಿದ್ದಾರೆ. ಸಿಂಗಪುರ, ಹಾಂಕಾಂಗ್, ನೇಪಾಳ, ಮಲೇಷಿಯಾ ಮೊದಲಾದ  ದೇಶಗಳನ್ನು ತಿರುಗಾಡಿ ದ್ದಾರೆ. 25 ವರ್ಷಗಳ ‘ಸಂಚಾರ’ದ ನಂತರ ಪುಣೆಯಲ್ಲಿ ನೆಲೆಸಿ, ಅಲ್ಲಿ ಮನೆ ಕಟ್ಟಿದೆ.ಊರೂರು ಸುತ್ತಾಡಿದ್ದರಿಂದ ಕನ್ನಡ, ತೆಲುಗು, ತಮಿಳು, ಮಲಯಾಳಿ, ಕೊಂಕಣಿ, ತುಳು, ಹಿಂದಿ, ಮರಾಠಿ, ಉರ್ದು ಭಾಷೆಗಳನ್ನು ಕಲಿತಿದ್ದೇನೆ’ ಎನ್ನುತ್ತಾ ಚುನಾವಣೆಗೆ ಸ್ಪರ್ಧಿಸಲು ತಮಗಿರುವ ‘ಅರ್ಹತೆ’ಯನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.‘ಚುನಾವಣೆಗೆ ಹಣ, ರಾಜಕೀಯ ಅನುಭವ ಬೇಕಲ್ಲವೇ’ ಎಂಬ ಪ್ರಶ್ನೆಗೆ ಅವರು ಮೂರು ದಶಕಗಳ ಹಿಂದೆ ಪುಣೆಯಲ್ಲಿದ್ದಾಗ ತಮ್ಮ ರಾಜಕೀಯ ಪರ್ವವನ್ನು ನೆನಪಿಸಿಕೊಂಡರು. ‘ಪುಣೆ ಯಲ್ಲಿದ್ದಾಗ ಮಂಡಲ್‌ ಪಂಚಾಯ್ತಿಗೆ ಸ್ಪರ್ಧಿಸಿದ್ದೆ. ಕೆಲವು ರಾಜಕಾರಣಿಗಳ ಪರವಾಗಿ ಪ್ರಚಾರ ಮಾಡಿದ್ದೆ. ಈಗಲೂ ಪುಣೆಯಲ್ಲಿ ಸ್ವಂತ ಮನೆ ಇದೆ. ಅದನ್ನು ಬಾಡಿಗೆಗೆ ನೀಡಿದ್ದೇನೆ’ ಎಂದು ಹೇಳಿದರು.‘ಚುನಾವಣೆಗೆ ಅನುಭವ ಸಾಕು. ಇದರ ಜತೆಗೆ ಹುಟ್ಟಿದ ಊರಿನ ಜನರ ಪ್ರೀತಿಯಿದೆ. ಹಣವಿಲ್ಲದೇ ಚುನಾವಣೆ ಪ್ರಚಾರ ಮಾಡುತ್ತೇನೆ. ನಾನು ವೈಯ­ಕ್ತಿಕ ಲಾಭಕ್ಕಾಗಿ ಸ್ಪರ್ಧಿಸುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಪರ್ಧಿಸುತ್ತಿದ್ದೇನೆ.ಗೆಲ್ಲಿಸಿದರೆ ಹಗಲು ರಾತ್ರಿ ಜನರ ಸೇವೆ ಮಾಡುತ್ತೇನೆ’ ಎನ್ನುವ ಕುಮಾರಿ, ನಾಮಪತ್ರ ಸಲ್ಲಿಸುವ ಮೊದಲೇ ತನ್ನ ಆತ್ಮೀಯರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಹುಡುಗರ ನೆರವಿನೊಂದಿಗೆ ಡಾಬಾ ನಡೆಸುತ್ತಿರುವ ಕುಮಾರಿ, ಬಿಡುವಿನ ವೇಳೆ, ಡಾಬಾ ಹಿಂದಿನ ಜಮೀನಿನಲ್ಲಿ ಕೃಷಿ ಮಾಡು ತ್ತಾರೆ. ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ತರಕಾರಿ ಬೆಳೆಯುತ್ತಿದ್ದಾರೆ.ಕಳೆದ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಕುಮಾರಿ ಸ್ನೇಹಿತೆ ಭಾವನ ಸ್ಪರ್ಧಿಸಿ, ದುರ್ಗದಲ್ಲಿ ಇತಿಹಾಸ ನಿರ್ಮಿಸಿದ್ದರು. ಈಗ ಅದೇ ಭಾವನ, ಕುಮಾರಿ ಅವರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.