ಜಿಪಂ: ಬಿಜೆಪಿಗೆ ಮತ್ತೆ ಹಿನ್ನಡೆ– ಅವಿಶ್ವಾಸಕ್ಕೆ ಮೇಲುಗೈ

7

ಜಿಪಂ: ಬಿಜೆಪಿಗೆ ಮತ್ತೆ ಹಿನ್ನಡೆ– ಅವಿಶ್ವಾಸಕ್ಕೆ ಮೇಲುಗೈ

Published:
Updated:

ಗುಲ್ಬರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ವಿರುದ್ಧದ ಅವಿಶ್ವಾಸ ಗೊತ್ತುವಳಿ ನಿರ್ಣಯವು 23–0 ಮತಗಳಿಂದ ಸೋಮವಾರ ಅಂಗೀಕೃತಗೊಂಡಿದೆ.ಅಧ್ಯಕ್ಷ  ಶರಣಪ್ಪ ವಿ. ಪೊಲೀಸ್‌ ಪಾಟೀಲ ಹಾಗೂ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ ಅವರನ್ನು ಕೆಳಗಿಳಿಸುವ ಮೂಲಕ ಕಾಂಗ್ರೆಸ್‌ ಮತ್ತೆ ಮೇಲುಗೈ ಸಾಧಿಸಿದೆ.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ಅವಿಶ್ವಾಸ ಗೊತ್ತು­ವಳಿ ಸಭೆ ನಡೆಯಿತು. ಅಧಕ್ಷ ಹಾಗೂ ಉಪಾಧ್ಯಕ್ಷೆ  ಅವರ ಅನುಪ­ಸ್ಥಿತಿಯಲ್ಲಿ ಶಂಭುಲಿಂಗ ಗುಂಡಗರ್ತಿ ಸಭೆಯ ಅಧ್ಯಕ್ಷತೆ ವಹಿಸಿ­ದರು. ಒಟ್ಟು 43 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಹಾಗೂ ಬಂಡಾಯ ಬಿಜೆಪಿ ಸದಸ್ಯರು ಮಂಡಿಸಿದ ಅವಿಶ್ವಾಸವು 23 ಮತಗಳಿಂದ ಅಂಗೀಕೃತಗೊಂಡಿತು.  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣಾ­ಧಿಕಾರಿ ಪಲ್ಲವಿ ಆಕುರಾತಿ ಸಭೆಯ ಬಳಿಕ ಈ ವಿಷಯ ತಿಳಿಸಿದರು. ಮತದಾನ: ಅವಿಶ್ವಾಸದ ಪರ ಕಾಂಗ್ರೆ­ಸ್‌ನ 18, ಜೆಡಿಎಸ್‌ನ 2 ಹಾಗೂ ಬಂಡಾಯ ಬಿಜೆಪಿಯ 3 ಮತಗಳು ಬಿದ್ದವು. ಬಿಜೆಪಿಯ ಉಳಿದ 17 ಸದಸ್ಯರು, ಪಕ್ಷೇತರ ಸದಸ್ಯೆ ಶೋಭಾ ಬಾಣಿ ಹಾಗೂ ಜೆಡಿಎಸ್‌ನ ಒಬ್ಬರು ಗೈರಾ­ಗಿದ್ದರು. ಹಿಂದಿನ ಬಾರಿ ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದಿದ್ದ ಸದಸ್ಯ ಸಾಯಿಬಣ್ಣ ಅಡ್ಡೇಶಿ ತಡವಾಗಿ ಬಂದು ಮತದಾನ ಮಾಡದೇ ವಾಪಾಸಾದರು. ಆದರೆ ಈ ಹಿಂದೆ ಕಾಂಗ್ರೆಸ್‌ನಲ್ಲಿ ಬಂಡಾಯವೆದ್ದಿದ್ದ ಪುಷ್ಪಾವತಿ ರೆಡ್ಡಿ  ಅವಧಿಗೂ ಮೊದಲೇ ಸಭೆಯಲ್ಲಿ ಹಾಜರಿದ್ದು, ಅವಿಶ್ವಾಸ ಪರ ಕಾಂಗ್ರೆಸ್‌ ಸದಸ್ಯರೊಂದಿಗೆ ಮತದಾನ ಮಾಡಿದರು. ಬಿಜೆಪಿ ಬಂಡಾಯ: ಬಿಜೆಪಿ ವಿರುದ್ಧ ಬಂಡಾಯವೆದು್ದ ಕರ್ನಾಟಕ ಅಭಿವೃದ್ಧಿ ರಂಗ ರಚಿಸಿಕೊಂಡಿದ್ದ ಚಿಂಚೋಳಿ ತಾಲ್ಲೂಕಿನ ಜಗಜೀವನ ರೆಡ್ಡಿ (ಕೊಂಚಾವರಂ), ಸುನಂದಾರಾಜಾ­ರಾಮ ಕೊರವಿ (ಚಿಮ್ಮನಸೂರ) ಹಾಗೂ ರೇಣುಕಾ ಗಂಗಾರಾಮ (ಕೋಡ್ಲಿ) ಸಭೆಯಲ್ಲಿ ಹಾಜರಿದ್ದು ಅವಿಶ್ವಾಸ ಗೊತ್ತುವಳಿ ಬೆಂಬಲಿಸಿದರು.

ಈ ಹಿಂದೆ ಮೊದಲ 20 ತಿಂಗಳ ಅವಧಿಯಲ್ಲಿ ಬಿಜೆಪಿ ಬೆಂಬಲಿಸಿ ಉಪಾಧ್ಯಕ್ಷರಾಗಿದ್ದ ಜೆಡಿಎಸ್‌ನ ಹರ್ಷಾನಂದ ಗುತ್ತೇದಾರ್‌ ಹಾಗೂ ಜಯಶ್ರೀ ಸಾವಳೇಶ್ವರ ಈ ಬಾರಿ ಕಾಂಗ್ರೆಸ್‌ ಬೆಂಬಲಿಸಿದರು. ಇದಕ್ಕೂ ಮೊದಲು ಕಾಂಗ್ರೆಸ್‌ನ ಬಹುತೇಕ ಸದಸ್ಯರು ಹೈದರಾಬಾದ್‌ನಿಂದ ನೇರ­ವಾಗಿ ಗುಲ್ಬರ್ಗ ಕಾಂಗ್ರೆಸ್‌ ಕಚೇರಿಗೆ ಆಗ­ಮಿ­ಸಿ­ದರು. ಬಳಿಕ ಜಿಲಾ್ಲ ಪಂಚಾಯಿತಿ ಸಭಾಂಗಣಕ್ಕೆ ಬಂದರು. ಬಳಿಕ ಮತ ಚಲಾಯಿಸಿದರು.  33 ತಿಂಗಳ ಜಿಪಂಗೆ ನಾಲ್ಕನೇ ಅಧ್ಯಕ್ಷ:

ಅಭಿವೃದ್ಧಿಗಿಂತ ಹೆಚ್ಚಾಗಿ ಅವಿಶ್ವಾಸದ ಮೂಲಕವೇ ಸುದ್ದಿ ಮಾಡಿದ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯು ಕೇವಲ 33 ತಿಂಗಳಲ್ಲಿ ಮೂರು ಅಧ್ಯಕ್ಷ–ಉಪಾಧ್ಯಕ್ಷ­ರನ್ನು ಕಂಡಿದೆ. ಈಗ ನಾಲ್ಕನೇ ಚುನಾ­ವಣೆಯ ಚಟುವಟಿಕೆ ಗರಿಗೆದರಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಗುರುಲಿಂಗಗೌಡ ಜೇವರ್ಗಿ, ವೀರಾರೆಡ್ಡಿ ಹಾಗೂ ರಮೇಶ ಮರಗೋಳ

ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಅನಿತಾ ಪವನಕುಮಾರ ವಳಕೇರಿ ಹಾಗೂ ರೇಣುಕಾ ಹೇಮಲತಾ ನಾಯಕ ಆಕಾಂಕ್ಷಿಗಳಾಗಿದ್ದಾರೆ.ಈ ನಡುವೆ ಕಾಂಗ್ರೆಸ್‌ ಬೆಂಬಲಿಸಿದ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡುವ ಭರವಸೆಯನ್ನು ಕಾಂಗ್ರೆಸ್‌ ಮುಖಂಡರು ನೀಡಿದ್ದಾರೆ. ಹೀಗಾಗಿ ಮುಂದಿನ 8 ತಿಂಗಳ ಅವಧಿಗೆ ನಡೆಯುವ ಚುನಾವಣೆ ಕುತೂಲಹ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry