ಜಿಪಂ ಮಾಜಿ ಸದಸ್ಯನ ಬರ್ಬರ ಕೊಲೆ

7

ಜಿಪಂ ಮಾಜಿ ಸದಸ್ಯನ ಬರ್ಬರ ಕೊಲೆ

Published:
Updated:

ಕಮಲನಗರ: ಕಮಲನಗರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಗಣಪತರಾವ್‌ ಕದಮ್‌ (60) ಅವರನ್ನು ಮದನೂರ್‌ ರಸ್ತೆಯಲ್ಲಿರುವ ಅವರ ತೋಟದ ಮನೆಯಲ್ಲಿ ಭಾನುವಾರ ರಾತ್ರಿ ತಲೆ ಹಾಗೂ ಮುಖದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ರಾತ್ರಿ ಸುಮಾರು 10 ರಿಂದ 11 ಗಂಟೆ  ನಡುವೆ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದು, ಕೃತ್ಯವನ್ನು ಯಾರು ಎಸಗಿದ್ದಾರೆ ಹಾಗೂ ಕಾರಣವೇನು ಎಂಬುದು ನಿಗೂಢವಾಗಿದೆ. ಭಾನುವಾರ ರಾತ್ರಿ ಸುಮಾರು 11.15 ಗಂಟೆಗೆ ತೋಟದ ಮನೆಯಲ್ಲಿ ಕೆಲಸ ಮಾಡುವ ವ್ಯಕಿ್ತ ಊಟ ಮಾಡಿ ತೋಟದ ಮನೆಗೆ ಹಿಂದಿರುಗಿದಾಗ ಗಣಪತರಾವ್‌ ಕದಮ್‌ ರಕ್ತಸಿಕ್ತರಾಗಿ ಬಿದ್ದಿರುವುದನ್ನು ಗಮನಿಸಿದ್ದಾನೆ.ಕೂಡಲೇ ಅವರು ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಕದಮ್‌ ಅವರನ್ನು ಸಮೀಪದ ಉದಗೀರ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಇವರು ಮೃತಪಟ್ಟಿದ್ದಾರೆ ಎಂಬುದನ್ನು ವೈದ್ಯರು ಘೋಷಿಸಿದರು ಎಂದು ಕುಟುಂಬ ಸದಸ್ಯರೊಬ್ಬರು ವಿವರಿಸಿದರು.ಕದಮ್‌ ಅವರ ಕೊಲೆಯ ಸುದ್ದಿ ಕಮಲನಗರದಲ್ಲಿ ಭಾನುವಾರ ರಾತ್ರಿ ಹರಡುತ್ತಿದ್ದಂತೆ ಕೆರಳಿದ ಅವರ ಅಭಿಮಾನಿಗಳು, ಬೀದರ್‌–ನಾಂದೇಡ್‌ ಅಂತರರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಪ್ರತಿಭಟಿಸಿದರು. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಆಗ್ರಹಿಸಿದರು.ಭೇಟಿ: ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ.ತ್ಯಾಗರಾಜನ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ, ಡಿವೈಎಸ್‌ಪಿ ಮಾಲಗತ್ತಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಬಿ.ಪಿ.ಚಂದ್ರಶೇಖರ್‌, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಬಿ.ಡಿ.ಬುರಲಿ, ಪಿ.ಆರ್‌.ಧಬಾಲಿ ಭೇಟಿ ನೀಡಿದದರು. ಶ್ವಾನದಳವನ್ನು ಕರೆಸಲಾಗಿತ್ತು.ಗಣಪತರಾವ್‌ ಕದಮ್‌ ಅವರು 2005 ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತ­ರಾಗಿದ್ದರು. ಅವರು ಮಹಾತ್ಮ ಫುಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕದಮ್‌ ಅವರಿಗೆ ಪತ್ನಿ, ನಾಲ್ವರು ಪುತ್ರರು, ಒಬ್ಬ ಪುತಿ್ರ ಇದಾ್ದಳೆ.ಶಾಸಕ ಚವ್ಹಾಣ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಶಾಸಕ ಪ್ರಭು ಚವ್ಹಾಣ ಸೋಮವಾರ ಕದಮ್‌ ಅವರ ತೋಟದ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರು ಒತ್ತು ನೀಡಬೇಕು ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry