ಜಿಪಂ: ಶಂಕ್ರಣ್ಣ ಅಧ್ಯಕ್ಷ, ಗೀತಾ ಉಪಾಧ್ಯಕ್ಷೆ

7

ಜಿಪಂ: ಶಂಕ್ರಣ್ಣ ಅಧ್ಯಕ್ಷ, ಗೀತಾ ಉಪಾಧ್ಯಕ್ಷೆ

Published:
Updated:

ಹಾವೇರಿ: ಜಿಲ್ಲಾ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಜಿ.ಪಂ.ಕ್ಷೇತ್ರದ ಬಿಜೆಪಿ ಸದಸ್ಯ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆಯಾಗಿ ಅಕ್ಕಿಆಲೂರ ಜಿ.ಪಂ.ಮತಕ್ಷೇತ್ರದ ಬಿಜೆಪಿ ಸದಸ್ಯೆ ಗೀತಾ ಅಂಕಸಖಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಜಿ.ಪಂ.ಸಭಾಭವನದಲ್ಲಿ ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಂಕ್ರಣ್ಣ ಮಾತನವರ ಎರಡು ನಾಮಪತ್ರ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಗೀತಾ ಅಂಕಸಖಾನಿ ಅವರು ಒಂದು ನಾಮಪತ್ರ ಸಲ್ಲಿಸಿದ್ದರು.ಇಬ್ಬರು ಸಲ್ಲಿಸಿದ ಮೂರು ನಾಮ ಪತ್ರಗಳು ಕ್ರಮಬದ್ಧವಾಗಿದ್ದರಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಂಕ್ರಣ್ಣ ಮಾತನವರ ಎರಡರಲ್ಲಿ ಒಂದು  ನಾಮಪತ್ರವನ್ನು ವಾಪಸ್ಸು  ಪಡೆದರು.ಬೇರೆ ಯಾವ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಶಂಕ್ರಣ್ಣ ಮಾತನವರ, ಉಪಾ ಧ್ಯಕ್ಷ ಸ್ಥಾನಕ್ಕೆ ಗೀತಾ ಅಂಕಸಖಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾ ರೆಂದು ಚುನಾವಣಾ ಅಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಘೋಷಿಸಿದರು.

32 ಜನ ಸದಸ್ಯ ಬಲದ ಹಾವೇರಿ ಜಿಲ್ಲಾ ಪಂಚಾಯಿತಿಯಲ್ಲಿ 27 ಬಿಜೆಪಿ, ನಾಲ್ಕು ಕಾಂಗ್ರೆಸ್ ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry