ಶನಿವಾರ, ಜನವರಿ 18, 2020
21 °C

ಜಿ.ಪಂ. ಸದಸ್ಯರ ತೆಲುಗು ಭಾಷಣ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಸರ್ಕಾರಿ ಕಾರ್ಯಕ್ರಮದಲ್ಲಿ ತೆಲುಗಿನಲ್ಲಿ ಭಾಷಣ ಮಾಡುತ್ತಿದ್ದ ಜಿಲ್ಲಾ ಪಂಚಾಯತಿ ಸದಸ್ಯ ಆರ್.ನಾರಾ­ಯಣರೆಡ್ಡಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ­ಕರ್ತರು ಅಡ್ಡಿಯನ್ನುಂಟು ಮಾಡಿದ ಘಟನೆ ಇತ್ತೀಚೆಗೆ ಪಾರಾಂಡಹಳ್ಳಿ­ಯಲ್ಲಿ ನಡೆದಿದೆ.ಗ್ರಾಮದಲ್ಲಿ ಪಿಂಚಣಿ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿ­ಕೊಂಡಿತ್ತು. ಸರ್ಕಾರದ ಹಲವಾರು ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಭಾಷಣ ಮಾಡಿದ ಪಾರಾಂಡಹಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಆರ್.­ನಾರಾ­ಯಣರೆಡ್ಡಿ ತೆಲುಗಿನಲ್ಲಿ ಮಾತ­ನಾಡತೊಡಗಿದರು.ಇದರಿಂದ ಕುಪಿತಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೇದಿಕೆಗೆ ನುಗ್ಗಿ ಭಾಷಣ ನಿಲ್ಲಿಸುವಂತೆ ಆಗ್ರಹಿಸಿದರು. ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕನ್ನಡ­ದಲ್ಲಿಯೇ ಮಾತನಾಡಬೇಕು. ಅಧಿಕಾರಿಗಳು ವೇದಿಕೆಯಲ್ಲಿ ಕುಳಿತಿ­ದ್ದಾರೆ. ಅವರ ಮುಂದೆಯೇ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಮಾತ­ನಾಡುವುದು ಸರಿಯಲ್ಲ ಎಂದರು.ಕೆಲವರಿಗೆ ಅರ್ಥವಾಗಲೆಂದು ತೆಲುಗಿ­­ನಲ್ಲಿ ಮಾತನಾಡುತ್ತಿದ್ದೇನೆ ಎಂದು ನಾರಾಯಣರೆಡ್ಡಿ ಸಮರ್ಥನೆ ನೀಡಲು ಯತ್ನಿದಾಗ, ನಮ್ಮ ಮನೆ ಭಾಷೆ ಕೂಡ ತೆಲುಗೇ. ಆದರೆ ನಾವು ಕನ್ನಡ ನಾಡಿನಲ್ಲಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಕಾರ್ಯ­ಕ­ರ್ತರು ವಾದಿಸಿದರು. ಆಗ ನಾರಾ­ಯ­ಣ­­ರೆಡ್ಡಿ ಕನ್ನಡದಲ್ಲಿ ಮಾತಾಡಿದರು.

ಪ್ರತಿಕ್ರಿಯಿಸಿ (+)