ಜಿಪಿಎಲ್ನಿಂದ ಗೋಲ್ಡ್ ಕೌಂಟಿ ವಿಲ್ಲಾ

7

ಜಿಪಿಎಲ್ನಿಂದ ಗೋಲ್ಡ್ ಕೌಂಟಿ ವಿಲ್ಲಾ

Published:
Updated:

ಬೆಂಗಳೂರು: ಗೋದ್ರೆಜ್ ಸಮೂಹದ ರಿಯಲ್ ಎಸ್ಟೇಟ್ ಕಂಪೆನಿ, `ಗೋದ್ರೆಜ್ ಪ್ರಾಪರ್ಟೀಸ್ ಲಿ.~(ಜಿಪಿಎಲ್),    ಬಾಲಿವುಡ್ ತಾರೆ ಫರ್ದೀನ್ ಖಾನ್ ಕುಟುಂಬದ ಜತೆಗೂಡಿ ನಗರದ ಹೊರವಲಯದಲ್ಲಿ ಅತ್ಯಾಧುನಿಕ ಮತ್ತು ಅದ್ದೂರಿ ಸೌಲಭ್ಯಗಳ ವಿಲ್ಲಾಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ.ನೆಲಮಂಗಲ ಸಮೀಪದಲ್ಲಿ ದಿ. ಫಿರೋಜ್ ಖಾನ್ ಅವರ ಒಡೆತನದಲ್ಲಿದ್ದ ತೋಟದ ಮನೆಯ 12 ಎಕರೆ ಭೂಮಿಯಲ್ಲಿ 87 ಅದ್ದೂರಿ ವಿಲ್ಲಾಗಳನ್ನು ನಿರ್ಮಿಸುವ `ಗೋದ್ರೆಜ್ ಗೋಲ್ಡ್ ಕೌಂಟಿ~ ಯೋಜನೆ ಇದಾಗಿದೆ. ಇದು ಬೆಂಗಳೂರಿನಲ್ಲಿ ಜಿಪಿಎಲ್‌ನ 4ನೇ ಯೋಜನೆಯಾಗಿದೆ.ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ `ಜಿಪಿಎಲ್~ನ ವ್ಯವಸ್ಥಾಪಕ ನಿರ್ದೇಶಕ ಪಿರೋಜ್‌ಷಾ ಗೋದ್ರೆಜ್, `3303ರಿಂದ 4113 ಚದರಡಿ ವಿಸ್ತಾರದ ವಿಲ್ಲಾಗಳನ್ನು ನಿರ್ಮಿಸಲಾಗುತ್ತಿದ್ದು, ಕನಿಷ್ಠ ಬೆಲೆ ರೂ. 2 ಕೋಟಿ ಇರಲಿದೆ. ಒಟ್ಟು ರೂ. 100 ಕೋಟಿ ಮೊತ್ತದ ಯೋಜನೆ ಇದಾಗಿದ್ದು, 3-4 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.ಈ ಯೋಜನೆಯಲ್ಲಿ ಫರ್ದೀನ್ ಖಾನ್ ಮತ್ತು ಅವರ ಸೋದರಿ ಲೈಲಾ ಖಾನ್ ಅವರದ್ದು ಶೇ 37ರಷ್ಟು ಪಾಲುದಾರಿಕೆ ಇದ್ದರೆ, `ಜಿಪಿಎಲ್~ನದು ಶೇ 63ರಷ್ಟಿದೆ ಎಂದು ಪ್ರಶ್ನೆಯೊಂದಕ್ಕೆ ಗೋದ್ರೆಜ್ ಉತ್ತರಿಸಿದರು.ನಂತರ ಮಾತನಾಡಿದ ನಟ ಫರ್ದೀನ್ ಖಾನ್, `ನಮ್ಮ ತಂದೆಗೆ ಬಹಳ ಇಷ್ಟವಾದ ಸ್ಥಳದಲ್ಲಿ ಅವರ ಕನಸಿನ ಯೋಜನೆ ಜಾರಿಗೆ ತರಲು ಬಹಳ ಹರ್ಷವೆನಿಸಿದೆ. ಗೋದ್ರೆಜ್ ಕಂಪೆನಿ ಜತೆಗಿನ ಪಾಲುದಾರಿಕೆಯೂ ನಮ್ಮ ಕುಟುಂಬದ ಅತ್ಯುತ್ತಮ ನಿರ್ಧಾರಗಳಲ್ಲೊಂದಾಗಿದೆ~ ಎಂದರು. ಲೈಲಾಖಾನ್, ಅವರ ಚಿಕ್ಕಪ್ಪ ಸಂಜಯ್ ಖಾನ್ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry