ಜಿಮ್ನಾಸ್ಟಿಕ್ಸ್ ಸ್ಪರ್ಧಿಗೆ ತಾತ್ಕಾಲಿಕ ನಿಷೇಧ

7

ಜಿಮ್ನಾಸ್ಟಿಕ್ಸ್ ಸ್ಪರ್ಧಿಗೆ ತಾತ್ಕಾಲಿಕ ನಿಷೇಧ

Published:
Updated:
ಜಿಮ್ನಾಸ್ಟಿಕ್ಸ್ ಸ್ಪರ್ಧಿಗೆ ತಾತ್ಕಾಲಿಕ ನಿಷೇಧ

ಲಂಡನ್ (ಪಿಟಿಐ): ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಉಜ್ಬೇಕಿಸ್ತಾನದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧಿ ಲುಯಿಜಾ ಗಾಲಿಯುಲಿನಾ ಅವರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.ಇಪ್ಪತ್ತು ವರ್ಷ ವಯಸ್ಸಿನ ಲುಯಿಜಾ ಅವರು ನಿಷೇಧಿತ ಮದ್ದು ತೆಗೆದುಕೊಂಡಿದ್ದು ಖಚಿತವಾಗಿರುವ ಕಾರಣ ತಕ್ಷಣದ ಕ್ರಮ ಕೈಗೊಳ್ಳಲಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಬುಧವಾರ ಸ್ಯಾಂಪಲ್ ಪಡೆಯಲಾಗಿತ್ತು. ಅದರಲ್ಲಿ ಮದ್ದಿನ ಅಂಶ ಪತ್ತೆಯಾಗಿದೆ ಎಂದು ಕೂಡ ವಿವರಿಸಲಾಗಿದೆ.ಈ ಕೂಟದಲ್ಲಿ ಉದ್ದೀಪನ ಮದ್ದು ತೆಗೆದುಕೊಂಡು ಸಿಕ್ಕಿಬಿದ್ದ ಎರಡನೇ ಕ್ರೀಡಾಪಟುವಾಗಿದ್ದಾರೆ ಲುಯಿಜಾ. ಇದಕ್ಕೂ ಮುನ್ನ ಶನಿವಾರದಂದು ಅಲ್ಬೇನಿಯಾದ ವೇಟ್‌ಲಿಫ್ಟರ್ ಹಿಸೆನ್ ಪುಲಾಕು ಸ್ಟೀರಾಯ್ಡ ತೆಗೆದುಕೊಂಡಿದ್ದು ಪತ್ತೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry