ಜಿಮ್‌ನಲ್ಲಿ ದೋಸೆ ಪ್ರಿಯ ಅಶ್ಮಿತ್

7

ಜಿಮ್‌ನಲ್ಲಿ ದೋಸೆ ಪ್ರಿಯ ಅಶ್ಮಿತ್

Published:
Updated:
ಜಿಮ್‌ನಲ್ಲಿ ದೋಸೆ ಪ್ರಿಯ ಅಶ್ಮಿತ್

ಸುಂದರಿಯರ ಮನಗೆಲ್ಲುವ ಸಿಕ್ಸ್ ಪ್ಯಾಕ್ ಮೈಕಟ್ಟು ಯುವಕರಿಗೆ ಇಷ್ಟವಾದರೆ, ತೆಳ್ಳಗೆ ಬಳುಕುವ ನೀಳಕಾಯ ಯುವತಿಯರಿಗೆ ಅಚ್ಚುಮೆಚ್ಚು. ಇದಕ್ಕಾಗಿ ಜಿಮ್‌ನಲ್ಲಿ ಪ್ರತಿ ನಿತ್ಯ ಕಸರತ್ತು ಮಾಡುವವರೂ ಇದ್ದಾರೆ. ಇಂತಹ ಯುವಕ ಯುವತಿಯರಿಗೆ ದೇಹದಾರ್ಢ್ಯದ ಪಾಠವನ್ನು ಗೋಲ್ಡ್ ಜಿಮ್ ಹೇಳಿಕೊಡುತ್ತಿದೆ.ಮುಂಬೈಯಲ್ಲಿ ಬಾಲಿವುಡ್ ತಾರೆಗಳಿಗೆಲ್ಲ ಫಿಟ್‌ನೆಸ್ ಕಲಿಸುತ್ತಿದೆ. ಇದೇ ಸಿಕ್ಸ್ ಪ್ಯಾಕ್ ಮಂತ್ರದೊಂದಿಗೆ ಇಂದಿರಾ ನಗರದಲ್ಲಿ ಇತ್ತೀಚೆಗೆ ಶಾಖೆ ಪ್ರಾರಂಭಿಸಿದೆ. ಈ ಸಮಾರಂಭಕ್ಕೆ ಬಾಲಿವುಡ್ ತಾರೆ ಅಶ್ಮಿತ್‌ಪಟೇಲ್, ಕನ್ನಡದ ಐಂದ್ರಿತಾ ರೆ, ದಿಗಂತ್, ಕ್ರಿಕೆಟ್ ತಾರೆ ವೆಂಕಟೇಶ್ ಪ್ರಸಾದ್ ಮುಂತಾದವರು ಬಂದಿದ್ದರು.ಹೊರಗಡೆ ಧಾರಾಕಾರ ಮಳೆ... ಒಳ ನಡೆದರೆ ಸಂಪೂರ್ಣ ಹವಾನಿಯಂತ್ರಿತ ಕೊಠಡಿಗಳು... ಬೃಹದಕಾರವಾದ ಫಿಟ್‌ನೆಸ್ ಉಪಕರಣಗಳು...  ಇದರೊಂದಿಗೆ ಕಟ್ಟುನಿಟ್ಟಿನ ಟ್ರೈನರ್‌ಗಳು...  ಅಷ್ಟು ಹೊತ್ತಿಗೆ ನೀಲಿ ಜೀನ್ಸ್, ಹಸಿರು ಟೀ-ಶರ್ಟ್, ಕುರುಚಲು ಗಡ್ಡ ಜೊತೆಗೆ ಕೂಲಿಂಗ್ ಗ್ಲಾಸ್‌ನಲ್ಲಿದ್ದ  ಹಾಟ್ ಅಂಡ್ ಹ್ಯಾಂಡಸಮ್ ಅಸ್ಮಿತ್ ಪಟೇಲ್ ಬಂದವರೇ ಮಾಧ್ಯಮದವರ ಜೊತೆ ಹರಟಲು ಶುರು ಮಾಡಿದರು.ನಿಮ್ಮ ಫೀಟ್‌ನೆಸ್ ರಹಸ್ಯ?

 ದಿನವೊಂದಕ್ಕೆ 2 ಗಂಟೆ ಜಿಮ್‌ನಲ್ಲಿ ವರ್ಕ್ ಔಟ್ ಮಾಡ್ತೀನಿ. ಊಟ ತಿಂಡಿಯಲ್ಲೂ ನಾನು ತುಂಬಾ ಸ್ಟ್ರಿಕ್ಟ್.  ಅಲ್ಕೋಹಾಲ್‌ನಿಂದ ದೂರ~.ದಕ್ಷಿಣ ಭಾರತ, ಇಲ್ಲಿನ ಚಿತ್ರರಂಗ ಕುರಿತು ನಿಮ್ಮ ಅಭಿಪ್ರಾಯ?

ನನಗೆ ಮೊದಲಿನಿಂದಲೂ ದಕ್ಷಿಣ ರಾಜ್ಯಗಳು, ಇಲ್ಲಿನ ಜನರು, ಆಚಾರ ವಿಚಾರ ಎಂದರೆ ಅಪಾರ ಗೌರವ. ಇಲ್ಲಿರುವ ದೇವಾಲಯಗಳು, ಊಟ ತಿಂಡಿ ತಿನಿಸು ಎಂದರೆ ತುಂಬಾ ಇಷ್ಟ. ಅದರಲ್ಲೂ ದೋಸೆ ಎಂದರೆ ಫೇವರಿಟ್.ಇಲ್ಲಿ ತಯಾರಾಗುವ ತಮಿಳು, ತೆಲುಗಿನ ಸಿನಿಮಾಗಳನ್ನು ಹಿಂದಿಯಲ್ಲಿ ರೀಮೇಕ್, ಡಬ್ಬಿಂಗ್ ಮಾಡುತ್ತಿದ್ದಾರೆ. ಇಲ್ಲಿರುವ ಶಿಸ್ತು ಬಾಲಿವುಡ್ ಸಿನಿಮಾದಲ್ಲಿ ನೋಡಲು ಸಿಗುವುದಿಲ್ಲ. ನನಗೆ ಕನ್ನಡ, ತಮಿಳು, ತೆಲುಗಿನಲ್ಲಿ ನಟನೆ ಮಾಡಲು ಆಸಕ್ತಿ ಇದೆ. ನೋಡೋಣ ಒಳ್ಳೆಯ ಸಿನಿಮಾಗಳು ಬಂದರೆ ಖಂಡಿತಾ ಮಾಡ್ತೀನಿ.ಗಾಸಿಪ್ ಬಗ್ಗೆ...?


ನನ್ನ ಬದುಕಿನ  ಅಮೂಲ್ಯ ಸುಂದರವಾದ 8 ವರ್ಷಗಳು ಗಾಸಿಪ್‌ಗಳಿಂದಾಗಿ ಕಳೆದು ಹೋಗಿವೆ. ಇದು ವೃತ್ತಿ ಜೀವನದ ಮೇಲೆ ಅಡ್ಡಪರಿಣಾಮ ಬೀರಿದೆ. ಅದು ರಿಯಾ ಸೇನ್ ಜೊತೆಯ ಎಂಎಂಎಸ್ ಪ್ರಕರಣ ಇರಬಹುದು, ಹುಡುಗಿಯರ ಜೊತೆಗೆ ಫ್ಲರ್ಟ್ ಮಾಡ್ತೀನಿ ಅನ್ನುವ ವದಂತಿಗಳೇ ಇರಬಹುದು. ಇದರಿಂದಾಗಿ ನನ್ನ ಅಸಲಿ ವ್ಯಕ್ತಿತ್ವ ಕಳೆದು ಹೋಗಿತ್ತು.ಬಿಗ್ ಬಾಸ್‌ನ ಅನುಭವದ ಕುರಿತು ಹೇಳಿ?

ಬದುಕಿನಲ್ಲಿ ನಾನು ತುಂಬಾ ಕಲಿತೆ. ಆದರೆ ನನಗೆ ಹೊರಗಿನ ಪ್ರಪಂಚದ ವಿವಿಧ ಮನಸ್ಥಿತಿಯ ಜನರೊಂದಿಗೆ ಬೆರೆಯುವುದು ನಿಜವಾಗಲೂ ಕಷ್ಟಕರವಾಗಿತ್ತು. ಆದರೆ ನನಗೆ ಸಾರಾ ಮತ್ತು ಪಾಕಿಸ್ತಾನಿ ನಟಿ  ವೀಣಾ ಮಲ್ಲಿಕ್ ಜೊತೆ ಸಂಬಂಧ ಇತ್ತು ಎಂದಿದ್ದು ಶುದ್ಧ ಸುಳ್ಳು.ಸಾರಾ ನನಗೆ ಚಿಕ್ಕ ತಂಗಿ ಮತ್ತು ವೀಣಾ ಮಲ್ಲಿಕ್ ಒಳ್ಳೆಯ ಗೆಳತಿ ಅಷ್ಟೆ. ಬಹುತೇಕ ಹುಡುಗಿಯರು ನನ್ನ ಜೊತೆ ಪ್ರೊಟೆಕ್ಟಿವ್ ಆಗಿ ಇರುತ್ತಾರೆ. ಹಾಗಾಗಿ ಸುಲಭವಾಗಿ ಮಿಂಗಲ್ ಆಗುತ್ತಾರೆ, ನಾನು ಜೀವನದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಗೌರವ ಕೊಡುತ್ತೇನೆ. ಆದರೆ ಅವರಿಗೆ ಕ್ಯಾಸಿನೋ ತರಹ ಕಾಣುವುದಾದರೆ ಅದು ಅವರ ಅಭಿಪ್ರಾಯ ಅಷ್ಟೆ.ರಿಯಾಲಿಟಿ ಶೋ ಕ್ರೇಜ್ ಬಗ್ಗೆ ಏನು ಹೇಳ್ತಿರಾ?

`ಸಾಸ್-ಬಹು~ ಸಿರಿಯಲ್ ನೋಡಿ ಬೇಜಾರಾಗಿರುವ ಜನರಿಗೆ ರಿಯಾಲಿಟಿ ಶೋಗಳು ಇಷ್ಟವಾಗುತ್ತವೆ. ಆದರೆ ಇಂದು ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚಾಗುತ್ತಿರುವ ಮೆಲೊಡ್ರಾಮಾ  ಟಿಆರ್‌ಪಿ ರೇಟ್ ಹೆಚ್ಚಿಸುವ ಒಂದು ತಂತ್ರ ಅಷ್ಟೆ.ಮುಂದಿನ ಯೋಜನೆ?

 ಸ್ವಂತ ಪ್ರೊಡಕ್ಷನ್ ಹೌಸ್‌ನಿಂದ ಹೊಸ ಫಿಕ್ಷನ್ ಆಧರಿತ ರಿಯಾಲಿಟಿ ಶೋ ಮಾಡುವುದು, ಇದರಲ್ಲಿ ಸೆಲೆಬ್ರಿಟಿಗಳನ್ನು ಸೇರಿಸಿಕೊಳ್ಳುವ  ಯೋಚನೆ ಇದೆ. ಈ ಬಗ್ಗೆ ಮಾತುಕತೆ ನಡೆದಿದೆ.ಸದ್ಯದಲ್ಲಿ ವಿವರ ಪ್ರಕಟಿಸಲಾಗುವುದು. ಎರಡು ಸಿನಿಮಾಗಳು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿವೆ. ಒಂದು ಬಂಗಾಳಿ ಸಿನಿಮಾದ ಬಗ್ಗೆ ಮಾತುಕತೆ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry