ಜಿಮ್ ಕೇಂದ್ರಕ್ಕೆ ಚಾಲನೆ

7

ಜಿಮ್ ಕೇಂದ್ರಕ್ಕೆ ಚಾಲನೆ

Published:
Updated:
ಜಿಮ್ ಕೇಂದ್ರಕ್ಕೆ ಚಾಲನೆ

ಬೆಂಗಳೂರು:  ಮಲ್ಲೇಶ್ವರದ ಈಜುಕೊಳ ಬಡಾವಣೆಯಲ್ಲಿರುವ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಜಿಮ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು.ಎರಡು ಮಹಡಿಯ ಕಟ್ಟಡದಲ್ಲಿ ಮಹಿಳೆಯರು ಮತ್ತು ಪುರಷರಿಗೆ ಪ್ರತ್ಯೇಕಾವಧಿಯಲ್ಲಿ ವ್ಯಾಯಾಮ ತರಗತಿಗಳು ನಡೆಯಲಿವೆ. ವ್ಯಾಯಾಮ, ಏರೋಬಿಕ್ ಮತ್ತು ನೃತ್ಯ ತರಗತಿಗಳು ನಡೆಯಲಿವೆ. ಸದಾಶಿವನಗರದಲ್ಲಿರುವ ಅಫಿನಿಟಿ ಜಿಮ್ ಸಂಸ್ಥೆಯು ಈ ಜಿಮ್ ಕೇಂದ್ರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವುದಲ್ಲದೇ, ಈ ಸಂಸ್ಥೆಯ ಸದಸ್ಯರೇ ವ್ಯಾಯಾಮದ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರವೂ ಬೆಳಿಗ್ಗೆ ಮತ್ತು ಸಂಜೆ ಎರಡು ಕಾಲಾವಧಿಯಲ್ಲಿ ತರಬೇತಿ ನೀಡಲಿದೆ.ಕೇಂದ್ರವನ್ನು ಉದ್ಘಾಟಿಸಿದ ಮಲ್ಲೇಪುರ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, `ಈ ಆಧುನಿಕ ಜಗತ್ತಿನಲ್ಲಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಹಾಗಾಗಿ ಈ ವಿಧಾನಸಭಾ ಕ್ಷೇತ್ರದಲ್ಲಿನ ಜನರಿಗೆ ಜಿಮ್ ಕೇಂದ್ರ ಲಭ್ಯವಾಗಲಿ ಎನ್ನುವ ಕಾರಣದಿಂದ ಸುಸಜ್ಜಿತ ಜಿಮ್ ಕೇಂದ್ರವನ್ನು ತೆರೆಯಲಾಗಿದ್ದು, ಜನತೆ ಉಪಯೋಗಿಸಿಕೊಳ್ಳಬೇಕು' ಎಂದು ಮನವಿ ಮಾಡಿದರು.`ಆರೋಗ್ಯ ಮತ್ತು ದೇಹಧಾರ್ಡ್ಯವನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲು ಸತತ ವ್ಯಾಯಾಮ ಸಹಕಾರಿ. ಪಾಲಿಕೆ ವತಿಯಿಂದ ಉತ್ತಮ ಗುಣಮಟ್ಟದ ವ್ಯಾಯಾಮ ಯಂತ್ರಗಳನ್ನು ನೀಡಲಾಗಿದೆ' ಎಂದು ತಿಳಿಸಿದರು.ಜಿಮ್ ಕೇಂದ್ರವು ಬೆಳಿಗ್ಗೆ 6 ರಿಂದ 10, ಸಂಜೆ 5 ರಿಂದ 9.30ವರೆಗೆ ತೆರೆದಿದ್ದು, ಬೆಳಿಗ್ಗೆ 10 ರಿಂದ ಮ. 12.30ವರೆಗೂ ಮಹಿಳೆಯರಿಗೆ ಅವಕಾಶವಿರುತ್ತದೆ. ಕೇಂದ್ರದಲ್ಲಿ ಯಾವುದೇ ತರಬೇತಿ ಪಡೆಯಲು ವಾರ್ಷಿಕ ಶುಲ್ಕ ರೂ. 750.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry