ಜಿಯಾ ಅಭಿನಯ ಸೊನ್ನೆಯಂತೆ...

7

ಜಿಯಾ ಅಭಿನಯ ಸೊನ್ನೆಯಂತೆ...

Published:
Updated:

`ಮಹಾರಾಣಿ~ ಚಿತ್ರದಿಂದ ಜಿಯಾ ಖಾನ್ ಹೊರಬಿದ್ದಿದ್ದಾರೆ. ಜಿಯಾಗೆ ಅಭಿನಯ ಬರುವುದಿಲ್ಲ ಎನ್ನುವುದು ನಿರ್ದೇಶಕರ ದೂರು.`ನಿಶ್ಶಬ್ದ್~ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದ ಜಿಯಾಗೆ ಹೇಳಿಕೊಳ್ಳುವಂಥ ಅವಕಾಶಗಳು ಬರಲೇ ಇಲ್ಲ. `ಘಜಿನಿ~ಯಲ್ಲಿ ಎರಡನೇ ನಾಯಕಿ ಮತ್ತು `ಹೌಸ್‌ಫುಲ್~ ಚಿತ್ರದಲ್ಲಿ ಬಹುತಾರಾಗಣದೊಂದಿಗೆ ಜೊತೆಗಿದ್ದರು, ಅಷ್ಟೇ.ವಿಲಿಯಂ ಡಾಲ್‌ರಿಂಪಲ್ ಅವರ `ಸೀಕ್ರೆಟ್ ಡೈರೀಸ್~ ಕಾದಂಬರಿ ಆಧರಿಸಿದ `ಮಹಾರಾಣಿ~ ಸಿನಿಮಾಗೆ ಜಿಯಾ ಆಯ್ಕೆಯಾಗಿದ್ದರಷ್ಟೇ. 17ನೇ ಶತಮಾನದಲ್ಲಿ ನಡೆಯುವ ಈ ಕತೆಯನ್ನು ನಿರ್ದೇಶಕಿ ಮಧುರಿತಾ ಆನಂದ್, ಚಿತ್ರವಾಗಿ ರೂಪಿಸುವ ಹೊಣೆ ಹೊತ್ತಿದ್ದಾರೆ.

 

ಚಿತ್ರದ ತಾಲೀಮಿನ ಸಂದರ್ಭದಲ್ಲಿ, ಜಿಯಾರ ನಿಸ್ಸಾರ ಅಭಿನಯ ಕಂಡು ನಿರ್ದೇಶಕರು ಆಕೆಯನ್ನು ಚಿತ್ರದಿಂದ ಹೊರಹಾಕಿದ್ದಾರೆ. ಆ ಕುರಿತು ಕೇಳಿದರೆ ಜಿಯಾ ಹೇಳುವುದು- `ನಾನು `ಮಹಾರಾಣಿ~ ಹೆಸರಿನ ಸಿನಿಮಾವನ್ನೇ ಒಪ್ಪಿಕೊಂಡಿರಲಿಲ್ಲ~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry