ಜಿರಲೆ ತಿನ್ನುವ ಸ್ಪರ್ಧೆ: ಗೆದ್ದು ಸತ್ತ ಭೂಪ

7

ಜಿರಲೆ ತಿನ್ನುವ ಸ್ಪರ್ಧೆ: ಗೆದ್ದು ಸತ್ತ ಭೂಪ

Published:
Updated:

ವಾಷಿಂಗ್ಟನ್ (ಪಿಟಿಐ): ಜೀವಂತ ಜಿರಲೆ ಹಾಗೂ ಹುಳು ತಿನ್ನುವ ಸ್ಪರ್ಧೆಯಲ್ಲಿ ಗೆದ್ದ ನಂತರ ಯುವಕನೊಬ್ಬ ಮೃತಪಟ ಘಟನೆ ಅಮೆರಿಕದಲ್ಲಿ ನಡೆದಿದೆ.ಫ್ಲಾರಿಡಾದ ಸಮುದ್ರ ತೀರದಲ್ಲಿ ಕಳೆದ ಶುಕ್ರವಾರ ರಾತ್ರಿ ಜಿರಲೆ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಅತಿ ಹೆಚ್ಚು ಕೀಟ ಮತ್ತು ಹುಳು ತಿಂದವರಿಗೆ 850 ಡಾಲರ್ ಬಹುಮಾನ ಘೋಷಿಸಲಾಗಿತ್ತು.32 ವರ್ಷದ ಎಡ್ವರ್ಡ್ ಅರ್ಚ್‌ಬೋಲ್ಡ್ ಈ ಸ್ಪರ್ಧೆಯಲ್ಲಿ ಗೆದ್ದ. ಆದರೆ, ಕೂಡಲೇ ಅಸ್ವಸ್ಥನಾಗಿ ವಾಂತಿ ಮಾಡಿಕೊಳ್ಳಲು ಆರಂಭಿಸಿದ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry