ಜಿಲಾನಿ: ಹೊಸ ವಿದೇಶಾಂಗ ಕಾರ್ಯದರ್ಶಿ

7

ಜಿಲಾನಿ: ಹೊಸ ವಿದೇಶಾಂಗ ಕಾರ್ಯದರ್ಶಿ

Published:
Updated:

ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಹಣಕಾಸು ನೆರವನ್ನು ನೀಡಿದ್ದ ಆರೋಪದ ಮೇಲೆ 2003ರಲ್ಲಿ ಭಾರತದಿಂದ ಹೊರ ಹಾಕಲಾಗಿದ್ದ ಪಾಕಿಸ್ತಾನದ ರಾಜತಾಂತ್ರಿಕ ಜಲೀಲ್ ಅಬ್ಬಾಸ್ ಜಿಲಾನಿ ಅವರನ್ನು ಪಾಕ್‌ನ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ಹೇಳಿವೆ.ಈಗ ವಿದೇಶಾಂಗ ಕಾರ್ಯದರ್ಶಿಯಾಗಿರುವ ಸಲ್ಮಾನ್ ಬಶೀರ್ ಮಾರ್ಚ್ 3ರಂದು ನಿವೃತ್ತರಾಗಲಿದ್ದು ಅವರನ್ನು ಭಾರತದ ಹೊಸ ಹೈ ಕಮಿಶನರ್ ಆಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ಜಿಲಾನಿ ಪ್ರಧಾನಿ ಗಿಲಾನಿ ಅವರ ಸೋದರ ಸಂಬಂಧಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry