ಭಾನುವಾರ, ಅಕ್ಟೋಬರ್ 20, 2019
22 °C

ಜಿಲ್ಲಾಡಳಿತ ಬ್‌ಸೈಟ್ ನಲ್ಲಿ ಗೊಂದಲ

Published:
Updated:
ಜಿಲ್ಲಾಡಳಿತ ಬ್‌ಸೈಟ್ ನಲ್ಲಿ ಗೊಂದಲ

ಗದಗ: ಗದುಗಿನ ಉಸ್ತುವಾರಿ ಸಚಿವರು ಯಾರು? ಸದ್ಯಕ್ಕಂತೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಸಿ.ಸಿ. ಪಾಟೀಲರೇ ಹೌದು. ಆದರೆ ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಮಾತ್ರ ಒಂದು ಕಡೆ ಸಿ.ಸಿ. ಪಾಟೀಲರ ಹೆಸರಿದ್ದರೆ, ಮತ್ತೊಂದು ಕಡೆ ಇನ್ನೂ ಶ್ರೀರಾಮುಲು ಅವರೇ ಮುಂದುವರಿದಿದ್ದಾರೆ.ಜಿಲ್ಲಾಡಳಿತದ ವೆಬ್‌ಸೈಟ್‌ಗೆ ಸದ್ಯ ಹೊಸರೂಪ ದೊರೆತಿದೆ. ಇನ್ನೊಂದೆಡೆ ಹಳೇಯ ವೆಬ್‌ತಾಣವೂ ಹಾಗೆಯೇ ಚಾಲ್ತಿಯಲ್ಲಿದೆ. ಯಾವ ವೆಬ್‌ತಾಣದಲ್ಲಿ ಸೂಕ್ತ ಮಾಹಿತಿ ಇದೆ ಎನ್ನುವುದೇ ಗೊಂದಲಮಯವಾಗಿದೆ.ಗೂಗಲ್‌ನ ಒಳಹೊಕ್ಕು ನೀವು ಜಿಲ್ಲಾಡಳಿತದ ಬಗ್ಗೆ ಮಾಹಿತಿ ಹುಡುಕಿದ್ದಲ್ಲಿ ಈ ಎರಡೂ ವೆಬ್‌ತಾಣಗಳ ಲಿಂಕ್ ತೆರೆದುಕೊಳ್ಳುತ್ತದೆ. ಎರಡೂ ತಾಣಗಳೂ ಅಧಿಕೃತ ಎಂದೇ ಬಿಂಬಿತವಾಗಿವೆ. ಹೊಸ ವೆಬ್‌ತಾಣದಲ್ಲಿ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರು ಉಪಾಧ್ಯಕ್ಷರ ಹೆಸರಿಲ್ಲ.ಹಳೇ ವೆಬ್ ತಾಣದಲ್ಲಿ ಎರಡು ವರ್ಷದ ಹಿಂದೆ ಅಧ್ಯಕ್ಷರು ಹಾಗೂ ಸದಸ್ಯರ ಹೆಸರೇ ಇವೆ. ಹೊಸ  ಚುನಾಯಿತ ಪ್ರತಿನಿಧಿಗಳು ಬಂದು, ಆ ಪೈಕಿ ಇಬ್ಬರು ಅಧ್ಯಕ್ಷರು ಆಡಳಿತ ನಡೆಸಿದ್ದರೂ ಮಾಹಿತಿ ಬದಲಾಗಿಲ್ಲ.  ಮಾಹಿತಿಗಳು ಔಟ್‌ಡೇಡೆಡ್ ಆಗಿವೆ.

 

Post Comments (+)