ಜಿಲ್ಲಾಧಿಕಾರಿಗೆ ಸಾರ್ವಜನಿಕರಿಂದ ದೂರಿನ ಸುರಿಮಳೆ

7

ಜಿಲ್ಲಾಧಿಕಾರಿಗೆ ಸಾರ್ವಜನಿಕರಿಂದ ದೂರಿನ ಸುರಿಮಳೆ

Published:
Updated:

ಗಂಗಾವತಿ: ಕೊಪ್ಪಳ ಜಿಲ್ಲಾಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಕೆ.ಪಿ. ಮೋಹನರಾಜ್ ಮೊದಲ ಬಾರಿಗೆ ಗಂಗಾವತಿಗೆ ಶುಕ್ರವಾರ ಭೇಟಿ ನೀಡಿದರು.ನಗರಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗೆ ಸಾರ್ವಜನಿಕರಿಂದ ದೂರುಗಳ ಸುರಿಮಳೆ ಸಲ್ಲಿಕೆಯಾದವು. ಕರವೇಯ ಅಧ್ಯಕ್ಷ ಪಂಪಣ್ಣ ನಾಯಕ್ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿ ನಗರದ ಉದ್ಯಾನಗಳು ಬಲಾಢ್ಯರಿಂದ ಅತಿಕ್ರಮಣಕ್ಕೊಳಗಾಗಿವೆ. ಕೂಡಲೆ ತೆರವು ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.ನಗರಸಭಾ ಸದಸ್ಯ ರಾಮಚಂದ್ರ ಹಾಗೂ ಪಾಮಪ್ಪ ಪೂಜಾರಿ ನೇತೃತ್ವದಲ್ಲಿನ ಚಲುವಾದಿ ವಾರ್ಡ್‌ನ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕೆಎಂಎಫ್ ಆವರಣ ತೆರವು ಮಾಡಬೇಕು. ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಕೊಡಬೇಕು ಎಂದರು.ರಾಜಶೇಖರ್, ತುರ್ವಿಹಾಳ ಭಾಷಾಸಾಬ ಮತ್ತು ಪ್ರಸಾದ್ ನೇತೃತ್ವದಲ್ಲಿನ ಗುತ್ತಿಗೆದಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ 2011ರ ಡಿಸೆಂಬರ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಗರದಲ್ಲಿ ಹಲವು ಕಾಮಗಾರಿ ನಿರ್ವಹಿಸಿದ್ದೇವೆ.ಆದರೆ ಇದುವರೆಗೂ ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ. ಈ ಬಗ್ಗೆ ಸಾಕಷ್ಟು ಸಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ತಕ್ಷಣ ಗಮನಹರಿಸಿ ಸೂಕ್ತ ಕ್ರಮಕೈಗೊಂಡು ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿದರು.ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಕೆಲ ಸಮಸ್ಯೆಗಳಿಗೆ ದೂರವಾಣಿ ಮೂಲಕ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರು. ಇನ್ನು ಕೆಲ ಸಮಸ್ಯೆಗೆ ಪೌರಾಯಕ್ತರಿಗೆ ಸಲಹೆ ನೀಡಿ ಪರಿಹಾರಕ್ಕೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry