ಮಂಗಳವಾರ, ಅಕ್ಟೋಬರ್ 15, 2019
29 °C

ಜಿಲ್ಲಾಧಿಕಾರಿ ಆದೇಶ: ಹೈಕೋರ್ಟ್ ರದ್ದು

Published:
Updated:

ಸಾಗರ (ಶಿವಮೊಗ್ಗ ಜಿಲ್ಲೆ):  ತಾಲ್ಲೂಕಿನ ಕಾರ್ಗಲ್ ಜೋಗ್ ಪಟ್ಟಣ ಪಂಚಾಯ್ತಿ ಸದಸ್ಯತ್ವ ಹಾಗೂ ಅಧ್ಯಕ್ಷ ಸ್ಥಾನದಿಂದ ಹರೀಶ್ ಗೌಡ ಅವರನ್ನು ವಜಾಗೊಳಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ವಂಚನೆ ಪ್ರಕರಣವೊಂದರಲ್ಲಿ ಹರೀಶ್‌ಗೌಡ ಅವರಿಗೆ ಸಾಗರದ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ ಶಿಕ್ಷೆ ವಿಧಿಸಿದ ಕಾರಣಕ್ಕೆ ಜಿಲ್ಲಾಧಿಕಾರಿ, ಅವರನ್ನು ಸದಸ್ಯತ್ವ ಹಾಗೂ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದರು. ಈ ಆದೇಶವನ್ನು ಪೌರಾಡಳಿತ ನಿರ್ದೇಶಕರು ಕೂಡ ಎತ್ತಿ ಹಿಡಿದಿದ್ದರು. ಇದನ್ನು ಹರೀಶ್ ಗೌಡ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದೇಶ ಹೊರಡಿಸುವ ಸಂದರ್ಭದಲ್ಲಿ ಕಾನೂನಿನ ನಿಯಮಗಳ ಪ್ರಕಾರ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ನಡೆಸದೆ ಇರುವ ಕಾರಣಕ್ಕೆ ಹೈಕೋರ್ಟ್ ಜಿಲ್ಲಾಧಿಕಾರಿ ಆದೇಶವನ್ನು ರದ್ದುಗೊಳಿಸಿದೆ.

ಇದರ ಜೊತೆಗೆ ನೂತನ ಸದಸ್ಯರ ಹಾಗೂ ಅಧ್ಯಕ್ಷರ ಆಯ್ಕೆಗೆ ತಹಶೀಲ್ದಾರರು ಪ್ರಕಟಿಸಿದ ಅಧಿಸೂಚನೆಯನ್ನು ಸಹ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Post Comments (+)