ಜಿಲ್ಲಾಧಿಕಾರಿ: ನಗರ ಸಂಚಾರ

7

ಜಿಲ್ಲಾಧಿಕಾರಿ: ನಗರ ಸಂಚಾರ

Published:
Updated:
ಜಿಲ್ಲಾಧಿಕಾರಿ: ನಗರ ಸಂಚಾರ

ಯಾದಗಿರಿ: ಜಿಲ್ಲಾಧಿಕಾರಿ ಗುರುನೀತ ತೇಜ್ ಮೆನನ್ ಮಂಗಳವಾರ ಯಾದಗಿರಿ ನಗರ ಸಂಚಾರ ನಡೆಸಿದರು.

ದಿಢೀರ್ ಕೈಗೊಂಡ ಸಂಚಾರದಿಂದ ನಗರ ಸಭೆ ಅಧಿಕಾರಿಗಳು ತಬ್ಬಿಬ್ಬಾದರು. ಯಾದಗಿರಿ ನಗರಸಭೆಯಲ್ಲಿ ಆಡಳಿತ ಮತ್ತು ಅಧಿಕಾರಿಗಳ ಗೊಂದಲದ ಮಧ್ಯೆ ನಗರಾಭಿವೃದ್ಧಿಗೆ ಆದ್ಯತೆ ನೀಡದೆ ಎಷ್ಟೋ ದಿನಗಳಾಗಿದ್ದವು. ಹಾಗಾಗಿ ನಗರದಲ್ಲೆಡೆ ಕಸದ ರಾಶಿ ತುಂಬಿ ನರಕ ಸದೃಶ ವಾತಾವರಣ ನಿರ್ಮಾಣವಾಗಿತ್ತು.ನಗರದ ವಾರ್ಡ ನಂ. 2 ಅನ್ನು ಬೇಟಿ ಮಾಡಿದ ಜಿಲ್ಲಾಧಿಕಾರಿ, ಎರಡು ವರ್ಷಗಳಿಂದ ನಿರ್ಮಿತಿ ಕೇಂದ್ರದ ವತಿಯಿಂದ ಶೌಚಾಲಯ ನಿರ್ಮಿಸಿ ಹಾಗೆ ಬಿಟ್ಟಿರುವುದನ್ನು ಜನರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಬಗ್ಗೆ ನಗರಸಭೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಕೇಳಿದರು.ಅಧಿಕಾರಿಗಳ ಉತ್ತರಕ್ಕೆ ಬೇಸತ್ತು `ಅದೇನೆ ಇರಲಿ ಅದರ ಪೈಲ್ ತೆಗೆದುಕೊಂಡು ಆಫೀಸ್‌ಗೆ ಬನ್ನಿ. ಬೇರೆ ವ್ಯವಸ್ಥೆ ಕಲ್ಪಿಸಿ ಪುನಃ ಅದನ್ನು ಪ್ರಾರಂಭಿಸುವಂತೆ ಕ್ರಮ ಕೈಗೊಳ್ಳಲಾಗುವುದು~ ಎಂದರು.

ನಗರಸಭೆ ಅದ್ಯಕ್ಷೆ ನಾಗರತ್ನ ಅನಪೂರ, ನಗರಸಭೆ ಅಧಿಕಾರಿಗಳು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry