ಜಿಲ್ಲಾಮಟ್ಟದ ಮಕ್ಕಳ ಸಂಸತ್‌ ಅ.6ಕ್ಕೆ

7

ಜಿಲ್ಲಾಮಟ್ಟದ ಮಕ್ಕಳ ಸಂಸತ್‌ ಅ.6ಕ್ಕೆ

Published:
Updated:

ಬೀದರ್: ಜಿಲ್ಲಾಮಟ್ಟದ ಮಕ್ಕಳ ಸಂಸತ್‌ ಅಕ್ಟೋಬರ್‌ 6 ರಂದು ನಗರದಲ್ಲಿ ನಡೆಯಲಿದೆ. ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಮಕ್ಕಳ ಹಕ್ಕುಗಳ ಟ್ರಸ್ಟ್ ಹಾಗೂ ಸಮೃದ್ಧಿ ಚಾರಿಟೇಬಲ್‌ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿ ಸಲಾಗಿದೆ ಎಂದು ಟ್ರಸ್ಟ್‌ ಮುಖ್ಯಸ್ಥ ಪುನೀತ್‌ ಸಾಳೆ ತಿಳಿಸಿದ್ದಾರೆ.ಮಕ್ಕಳ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿ ಗಳ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಆಯಾ ಪ್ರೌಢಶಾಲೆಗಳ ತಲಾ ಇಬ್ಬರು ವಿದ್ಯಾರ್ಥಿಗಳು ಸಂಸತ್‌ ನಲ್ಲಿ ಪಾಲ್ಗೊಳ್ಳಬಹುದು. ಹೆಸರು ನೋಂದಾಯಿಸಲು ಸೆಪ್ಟೆಂಬರ್‌ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿ ತಿಗೆ 9740314771 ಸಂಪರ್ಕಿಸಿ.ಸಂಘದ ಸಭೆ

ಬೀದರ್: ಮುಕ್ತ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾ ಸಭೆ ನಗರದ ಶಾರದಾ ಗ್ರಾಮೀಣ ತರಬೇತಿ ಕೇಂದ್ರದಲ್ಲಿ ಈಚೆಗೆ ನಡೆಯಿತು. ಸಂಘದ ಬೆಳವಣಿಗೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.ಸಂಘದ ಅಧ್ಯಕ್ಷೆ ಗೀತಾ ಧನರಾಜ ಬರದಾಪುರೆ, ಉಪಾಧ್ಯಕ್ಷೆ ಸಾವಿತ್ರಿ ಘೋರಕನಾಥ, ನಿರ್ದೇಶಕರಾದ ಡಾ. ಮೇಘ, ರುಕ್ಮಿಣಿ, ನಾಗಮ್ಮ, ಸುರೇಖಾ, ನಿರ್ಮಲಾ, ರಾಜೇಶ್ವರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry