ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರಕಟ

7

ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರಕಟ

Published:
Updated:

ಚಾಮರಾಜನಗರ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟಿಸಿದೆ.ಸೆ. 5ರಂದು ಬೆಳಿಗ್ಗೆ 11ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರೇಗೌಡ ಕೋರಿದ್ದಾರೆ.ಪ್ರಶಸ್ತಿ ವಿಜೇತ ಶಿಕ್ಷಕರು (ಪ್ರಾಥಮಿಕ ಶಾಲಾ ವಿಭಾಗ):

* ಜೆ.ಎಂ. ರಂಗಸ್ವಾಮಿ, ಸಹಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಳಿಕಾಂಬ ಕಾಲೊನಿ, ಚಾಮರಾಜನಗರ ತಾ.

* ಸಿದ್ದಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಣ್ಣೂರುಕೇರಿ, ಗುಂಡ್ಲುಪೇಟೆ ತಾ.

* ವಿಜಯಲಕ್ಷ್ಮೀ, ಸಹಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಳ್ಯ, ಕೊಳ್ಳೇಗಾಲ ತಾ.

* ನಂಜುಂಡಾಚಾರ್, ಸಹಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೋಪಿನಾಥಂ, ಹನೂರು ಶೈಕ್ಷಣಿಕ ವಲಯ.

* ಜಯಶಂಕರ, ಸಹಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಳಂದೂರು.ಪ್ರಶಸ್ತಿ ವಿಜೇತ ಶಿಕ್ಷಕರು (ಪ್ರೌಢಶಾಲಾ ವಿಭಾಗ):

* ಆರ್. ಸುರೇಶ್, ಸಹ ಶಿಕ್ಷಕ, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಚಾಮರಾಜನಗರ.

* ಕೃಷ್ಣಪ್ರಸಾದ್, ತೋಟಗಾರಿಕೆ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಗರಗನಹಳ್ಳಿ, ಗುಂಡ್ಲುಪೇಟೆ ತಾ.

* ಎಂ. ಸಿದ್ದಪ್ಪ, ಸಹಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೂಡಲೂರು, ಹನೂರು ಶೈಕ್ಷಣಿಕ ವಲಯ.

* ಜಿ. ಪಳನಿಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಸೂರಪುರ, ಕೊಳ್ಳೇಗಾಲ ತಾ.

* ಪುಟ್ಟಸ್ವಾಮಿ, ಸಹಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಅಗರ, ಯಳಂದೂರು ತಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry