ಜಿಲ್ಲಾ ಉತ್ಸವ ಯಾವ ಪುರುಷಾರ್ಥಕ್ಕೆ

7

ಜಿಲ್ಲಾ ಉತ್ಸವ ಯಾವ ಪುರುಷಾರ್ಥಕ್ಕೆ

Published:
Updated:

ಹಾವೇರಿ: ಇಡೀ ಜಿಲ್ಲೆ ಬರಗಾಲ ಪೀಡಿತವೆಂದು ಘೋಷಿಸಲ್ಪಟ್ಟ ನಂತರವೂ ಉತ್ಸವದ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಸುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿರುವ ಮಾಜಿ ಸಂಸದ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕುನ್ನೂರ ಅವರು,  ಜಿಲ್ಲಾ ಉತ್ಸವ ರದ್ದುಗೊಳಿ ಸಬೇಕೆಂದು ಮುಖ್ಯಮಂತ್ರಿ ಗಳನ್ನು ಒತ್ತಾಯಿಸಿದ್ದಾರೆ.ಸೋಮವಾರ ಈ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಗೆ ಪತ್ರ ಬರೆದಿರುವ ಕುನ್ನೂರ ಅವರು, ಮೊದಲು ಜಿಲ್ಲೆಯ ರಾಣೆ ಬೆನ್ನೂರ ಹಾಗೂ ಶಿಗ್ಗಾವಿ ತಾಲ್ಲೂಕು ಗಳನ್ನು ಬರ ಪೀಡಿತವೆಂದು ಘೋಷಿಸ ಲಾಗಿತ್ತು. ಫೆ. 1 ರಂದು ಸರ್ಕಾರವೇ ಜಿಲ್ಲೆಯ ಉಳಿದ ಐದು ತಾಲ್ಲೂಕು ಗಳಲ್ಲಿ ಬರವಿದೆ ಎಂದು ಘೋಷಿಸಿದೆ.

 

ಜಿಲ್ಲೆಯಲ್ಲಿ ಈವರೆಗೆ ಯಾವುದೇ ಬರ ಪರಿಹಾರ ಕಾಮಗಾರಿ ನಡೆಸದ ಜಿಲ್ಲಾಡಳಿತ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿ ಗಳು ಜಿಲ್ಲಾ ಉತ್ಸವ ನಡೆಸಲು ಉತ್ಸುಕರಾಗಿರುವುದು ಹಾಸ್ಯಾಸ್ಪದ ಎಂದು ಆರೋಪಿಸಿದ್ದಾರೆ.ರಾಜ್ಯದಲ್ಲಿ ಆವರಿಸಿರುವ ಬರದ ಛಾಯೆಯನ್ನು ಗಮನದಲ್ಲಿಟ್ಟು ಕೊಂಡು ರಾಜ್ಯದಲ್ಲಿ ನಡೆಯುವ ಉತ್ಸವಗಳನ್ನು ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗ ತಾರ್ಹ. ಆದರೆ, ಸರ್ಕಾರ ಉತ್ಸವ ಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ ಮೇಲೆಯೂ ಜಿಲ್ಲಾಧಿಕಾರಿಗಳು ಫೆ. 1 ರಂದು ಜಿಲ್ಲಾ ಉತ್ಸವ ನಡೆಸಲು ಹಣ ಮಂಜೂರು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿರುವುದು ಹಾಗೂ ಸರ್ಕಾರ ಉತ್ಸವಗಳನ್ನು ರದ್ದುಗೊಳಿಸಿ ಹೊರಡಿಸಿ ಆದೇಶ ಇದ್ದಾಗಲೂ ಇಲಾಖೆ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಬಂದ ಒಂದೇ ದಿನದಲ್ಲಿ ಸರ್ಕಾರದಿಂದಲೇ ವಿನಾ ಯಿತಿ ಪಡೆದು ಉತ್ಸವಕ್ಕಾಗಿ 20 ಲಕ್ಷ ರೂ. ಮಂಜೂರು ಮಾಡಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.ಬರಗಾಲದಿಂದ ಇಡೀ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಕೈಗೆ ಬಂದ ಅಲ್ಪ ಸ್ವಲ್ಪ ಬೆಳೆಗೂ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಇಂತಹ ಸಂದರ್ಭ ದಲ್ಲಿ ಸರ್ಕಾರ ಹಣ ಪೋಲು ಮಾಡುವುದು ದುರದೃಷ್ಟಕರ ಎಂದಿರುವ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಉತ್ಸವ ನಡೆಸಲು ಉತ್ಸಕರಾಗಿದ್ದನ್ನು ಗಮನಿಸಿದರೆ, ಸರ್ಕಾರದ ಹಣದಲ್ಲಿಯೇ ಮುಂಬರುವ ವಿಧಾನ ಸಭಾ ಚುನಾವಣೆಯ ಪೂರ್ವ ತಯಾರಿ ನಡೆಸಿದಂತೆ ಹಾಗೂ ಉತ್ಸವದ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆದಿದೆ ಎಂಬ ಸಂಶಯ ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ.ಬರದಿಂದ ಜನ ಸಂಕಷ್ಟದಲ್ಲಿರ ವಾಗ ಅವರ ನೆರವಿಗೆ ಧಾವಿಸುವುದನ್ನು ಬಿಟ್ಟು ಉತ್ಸವದ ಹೆಸರಿನಲ್ಲಿ ಹಣವನ್ನು ಅಪವ್ಯಯ ಗೊಳಿಸುವುದಕ್ಕೆ ಸರಿಯಲ್ಲ. ಉತ್ಸವಕ್ಕೆ ಬಳಕೆ ಮಾಡುವ ಹಣವನ್ನು ಬರ ಪರಿಹಾರ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಇಲ್ಲವೇ ದನಕರುಗಳಿಗೆ ಮೇವು ಸಂಗ್ರಹ ಮಾಡಲು ವಿನಿಯೋಗ ಮಾಡಬೇಕೆಂದು ಎಂದು ಮಂಜುನಾಥ ಕುನ್ನೂರ  ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ  ಆಗ್ರಹ ಮಾಡಿದ್ದಾರೆ.ಅವರು, ಫೆ. 11 ರಿಂದ 13 ರವರೆಗೆ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆಯುವ ಐದನೇ ಹಾವೇರಿ ಜಿಲ್ಲಾ ಉತ್ಸವವನ್ನು ರದ್ದುಗೊಳಿಸಬೇಕು ಎಂದು ಸಿ.ಎಂ.ಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry