ಶುಕ್ರವಾರ, ಜೂನ್ 18, 2021
24 °C

ಜಿಲ್ಲಾ ಕಸಾಪ: ಮಹಾಂತೇಶ ಮಸ್ಕಿ ಅಭ್ಯರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಮಸ್ಕಿಯ ಸಾಹಿತಿ, ಪ್ರಾಧ್ಯಾಪಕ ಮಹಾಂತೇಶ ಮಸ್ಕಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಈ ಕುರಿತು ರಚನೆಗೊಂಡ ಸಮನ್ವಯ ಸಮಿತಿ ತೀರ್ಮಾನಿಸಿದೆ ಎಂದು ಸಿಂಧನೂರು ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ದೇವೇಂದ್ರಗೌಡ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಂತೇಶ ಮಸ್ಕಿ ಅವರು ಸಾಹಿತಿಗಳಾಗಿ ಸೇವೆ ಮಾಡುತ್ತಿದ್ದಾರೆ. ಲಿಂಗಸುಗೂರು ತಾಲ್ಲೂಕು ಕಸಾಪ ಅಧ್ಯಕ್ಷರಾಗಿದ್ದರು. ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಚೆಗೆ ಸಿರವಾರದಲ್ಲಿ ಎಲ್ಲ ತಾಲ್ಲೂಕಿನ ಕಸಾಪ ಪದಾಧಿಕಾರಿಗಳು, ಸಾಹಿತ್ಯ ವಲಯದ ಹಿರಿಯರು ಸೇರಿ ಸಭೆ ನಡೆಸಲಾಯಿತು. ಆ ಸಭೆಯಲ್ಲಿ ಸರ್ವಸಮ್ಮತವಾಗಿ ಹೊರಹೊಮ್ಮಿದ ಅಭಿಪ್ರಾಯ ಮಹಾಂತೇಶ ಮಸ್ಕಿ ಅವರನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ಎಂದು ತಿಳಿಸಿದರು.ಜಿಲ್ಲಾ ಕಸಾಪ ಚುನಾವಣೆ ಪ್ರಕ್ರಿಯೆ ಶುರುವಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಈವರೆಗೂ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಬಹಿರಂಗವಾಗಿ ವ್ಯಕ್ತವಾಗಿಲ್ಲ. ಯಾರೂ ಕೂಡಾ ತಾವು ಸ್ಪರ್ಧಿಸುತ್ತಿರುವ ಬಗ್ಗೆ ಚರ್ಚಿಸಿಯೂ ಇಲ್ಲ.ಆದರೆ, ತಾವು ನಾಲ್ಕೂ ತಾಲ್ಲೂಕಿನ ಕಸಾಪ ಘಟಕಗಳ ಪ್ರತಿನಿಧಿಗಳು, ಸಾಹಿತ್ಯ ವಲಯದ ಹಿರಿಯರು ಸೇರಿ ಸಮನ್ವಯ ಸಮಿತಿ ರಚಿಸಿಕೊಳ್ಳಲಾಗಿದೆ. ಸಮಿತಿ ಸಭೆ ನಡೆಸಿ ಜಿಲ್ಲಾ ಕಸಾಪ ಅಧ್ಯಕ್ಷ ಆಯ್ಕೆ ಕುರಿತು ಚರ್ಚಿಸಿದ ಸಂದರ್ಭದಲ್ಲಿ ಮಹಾಂತೇಶ ಮಸ್ಕಿ ಅವರ ಹೆಸರು ಸೂಚಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಹಲವು ಜನ ಆಕಾಂಕ್ಷಿಗಳು ಮುಂದೆ ಬರಬಹುದು. ಆಗ ಮತ್ತೆ ಸಭೆ ಸೇರಿ ಚರ್ಚಿಸಲಾಗುವುದು. ಇದಕ್ಕಾಗಿಯೇ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಶರಣೇಗೌಡ ನೇತೃತ್ವದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ಮಾಜಿ ಅಧ್ಯಕ್ಷ ಪಂಪಯ್ಯಶೆಟ್ಟಿ, ದೇವದುರ್ಗದ ರಂಗಣ್ಣ ಅಳ್ಳುಂಡಿ, ಗಿರಿರಾಜ ಹೊಸಮನಿ, ಬೀರಪ್ಪ ಶಂಭೋಜಿ, ಜಿ.ಸುರೇಶ ಅವರು ಈ ಸಮಿತಿಯಲ್ಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳು ಈ ಸಮಿತಿಯೊಂದಿಗೆ ಚರ್ಚಿಸಬಹುದು. ಅಂತಿಮವಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಹುದ್ದೆಗೆ ಅವಿರೋಧ ಆಯ್ಕೆ ನಡೆದರೆ ಸೂಕ್ತ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.ಸಿರವಾರದಲ್ಲಿ ನಡೆದ ಸಭೆಯಲ್ಲಿ ಹಿರಿಯರು, ಸಾಹಿತಿಗಳ ಒತ್ತಾಸೆಯ ಮೇರೆಗೆ ತಾವು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದ್ದು, ಕಸಾಪ ಚಟುವಟಿಕೆ ಜನತೆಯ ಬಳಿ ಒಯ್ಯುವ ಕಾರ್ಯವನ್ನು ತಾವು ಅಧ್ಯಕ್ಷರಾದರೆ ಮಾಡುವುದಾಗಿ ಹೇಳಿದರು.ಹತ್ತಿಪ್ಪತ್ತು ಸಾವಿರ ರೂಪಾಯಿ ಕೊಟ್ಟು ಸಾಹಿತ್ಯ ಕಾರ್ಯಕ್ರಮ ಪ್ರೋತ್ಸಾಹಿಸುವ ದತ್ತಿ ದಾನಿಗಳಿಗೂ ಕಸಾಪ ಸದಸ್ಯತ್ವ ಸ್ಥಾನ ಕಲ್ಪಿಸಿಕೊಡಬೇಕು,  ಜಿಲ್ಲೆಯ ಹಿರಿಯ ಸಾಹಿತಿಗಳು ಬರೆದ ಮಹತ್ವದ ಕೃತಿಗಳ ಮಹತ್ವವನ್ನು ಅಚ್ಚುಕಟ್ಟಾಗಿ ಜನತೆಗೆ ತಿಳಿಸಿಕೊಡುವ ಕಾರ್ಯ ಮಾಡುವುದಾಗಿ ಹೇಳಿದರು.ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಯಾರೇ ಅಧ್ಯಕ್ಷರಾಗಿ ಆಯ್ಕೆ ಆಗಲಿ. ಆದರೆ, ಅವಿರೋಧವಾಗಿ ಆಯ್ಕೆ ಆದರೆ ಹೆಚ್ಚು ಮಹತ್ವ ಇರುತ್ತದೆ ಎಂಬುದು ತಮ್ಮ ಅಭಿಪ್ರಾಯ ಎಂದು ಹೇಳಿದರು. ಶರಣೇಗೌಡ, ಮಂಜುನಾಥ, ರಂಗಣ್ಣ ಪಾಟೀಲ್ ಅಳ್ಳುಂಡಿ, ದಂಡಪ್ಪ, ಚನ್ನಬಸಯ್ಯ, ಶ್ರೀಶೈಲಗೌಡ, ತಾಯಪ್ಪ, ಶರಣಪ್ಪ, ಗಿರಿರಾಜ ಹೊಸಮನಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.