ಜಿಲ್ಲಾ ಕಾನೂನು-ಸುವ್ಯವಸ್ಥೆ: ಐಜಿಪಿ ರಾಮಚಂದ್ರರಾವ್ ಮೆಚ್ಚುಗೆ

7

ಜಿಲ್ಲಾ ಕಾನೂನು-ಸುವ್ಯವಸ್ಥೆ: ಐಜಿಪಿ ರಾಮಚಂದ್ರರಾವ್ ಮೆಚ್ಚುಗೆ

Published:
Updated:

ಚಾಮರಾಜನಗರ: `ಜಿಲ್ಲೆಯಲ್ಲಿ ಕಾನೂನು- ಸುವ್ಯವಸ್ಥೆ ಉತ್ತಮ ವಾಗಿದೆ. ಹೀಗಾಗಿ, ಯಾವುದೇ ಆತಂಕ ಇಲ್ಲ' ಎಂದು ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿಮಾತನಾಡಿದರು.ಜಿಲ್ಲಾ ಕೇಂದ್ರದ ಕ್ರೀಡಾಕೂಟ ಶಿಸ್ತುಬದ್ಧವಾಗಿ ನಡೆದಿದೆ. ಕ್ರೀಡಾ ಕೂಟದಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರೆ ಉತ್ತಮವಾದ ಸಂಬಂಧ ಬೆಳೆಯುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ಪ್ರಮಾಣವೂ ಕಡಿಮೆಯಾಗಿದೆ ಎಂದರು.ಪೊಲೀಸರು ಆಟೋಟಗಳಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಜಿಲ್ಲಾಮಟ್ಟದ ವಾಲಿಬಾಲ್, ಕಬಡ್ಡಿ ಸೇರಿದಂತೆ ಇತರೆ ಕ್ರೀಡಾ ತಂಡಗಳನ್ನು ಆಯ್ಕೆ ಮಾಡಲಾಗುವುದು. ನಂತರ, ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಚಂದ್ರಶೇಖರ್, ಡಿವೈಎಸ್‌ಪಿಗಳಾದ ಮುತ್ತುಸ್ವಾಮಿನಾಯ್ಡು, ಎಸ್.ಎಲ್. ಚೆನ್ನಬಸವಣ್ಣ ಹಾಜರಿದ್ದರು.ಕ್ರೀಡಾಕೂಟದ ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದ ರಾಣಿ ಹಾಗೂ 11ನೇ ಬಾರಿಗೆ ಚಾಂಪಿಯನ್ ಆದ ಕೃಷ್ಣಪ್ಪ ಅವರಿಗೆ ಬಹುಮಾನ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry