ಶುಕ್ರವಾರ, ಅಕ್ಟೋಬರ್ 18, 2019
28 °C

ಜಿಲ್ಲಾ ಜಾನಪದ ಸಮ್ಮೇಳನ ಸಮಿತಿ ರಚನೆ

Published:
Updated:

ಔರಾದ್: ಮುಂದಿನ ತಿಂಗಳು ಇಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣ ಯಶಸ್ವಿಗಾಗಿ ಸ್ವಾಗತ ಮತ್ತು ವಿವಿಧ ಉಪ ಸಮಿತಿಗಳು ರಚಿಸಲಾಗಿದೆ.ಶಾಸಕ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಡಾ. ಜಗನ್ನಾಥ ಹೆಬ್ಬಾಳೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಗುತ್ತೇದಾರ ಗುರುನಾಥ ಕೊಳ್ಳೂರ್ ಸ್ವಾಗತ ಸಮಿತಿ ಉಪಾಧ್ಯಕ್ಷರಾಗಿದ್ದಾರೆ.ತಹಸೀಲ್ದಾರ್ ಶಿವಕುಮಾರ ಶೀಲವಂತ ಸಮಿತಿ ಕಾರ್ಯಾಧ್ಯಕ್ಷರಾಗಿದ್ದು, ಪ್ರೇಮಸಿಂಗ್ ರಾಠೋಡ, ಅಶೋಕ ಕಾಳಗಿ, ಎಚ್.ಸಿ. ಚಂದ್ರಶೇಖರ, ವಿನೋದಕುಮಾರ ಮೊಕ್ತೆದಾರ, ಪಂಡಿತ ಪಾಟೀಲ ಸಮಿತಿ ಸಹ ಕಾರ್ಯದರ್ಶಿಗಳು. ಜಾನಪದ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸಂಜೀವಕುಮಾರ ಜುಮ್ಮಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ತಮ್ಮಣ್ಣ ದೇಗಲವಾಡೆ ಕೋಶಾಧ್ಯಕ್ಷ, ಸೂರ್ಯಕಾಂತ ಸಿಂಗೆ, ಪ್ರಕಾಶ ಅಲ್ಮಾಜೆ ಕಾರ್ಯದರ್ಶಿಗಳು ಮತ್ತು ವೈಜಿನಾಥ ಬುಟ್ಟೆ, ಬಂಡೆಪ್ಪ ಕಂಟೆ ಸಂಯೋಜಕರಾಗಿದ್ದಾರೆ. ಶಿವಾಜಿರಾವ ಪಾಟೀಲ ಅವರಿಗೆ ಸಂಚಾಲಕರ ಜವಾಬ್ದಾರಿ ವಹಿಸಿಕೊಡಲಾಗಿದೆ.ಉಪ ಸಮಿತಿಗಳು:  ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು ವಿವರ ಇಂತಿದೆ.

ಆಹಾರ ಸಮಿತಿ: ಶಿವಾಜಿರಾವ ಪಾಟೀಲ, ಶೇಷಾರಾವ ಕೋಳಿ. ಹಣಕಾಸು ಸಮಿತಿ: ಗುಂಡಯ್ಯ ಸ್ವಾಮಿ. ಕಲಾ ಪ್ರದರ್ಶನ: ಗುರುನಾಥ ತವಾಡೆ, ವಸತಿ ಸಮಿತಿ: ಬಸವರಾಜ ದೇಶಮುಖ, ಮೆರವಣಿಗೆ ಸಮಿತಿ: ಕಲ್ಲಪ್ಪ ದೇಶಮುಖ, ವೇದಿಕೆ ಸಮಿತಿ: ಮನ್ಮಥಪ್ಪ ಹುಗ್ಗೆ, ಸನ್ಮಾನ ಸಮಿತಿ: ಅಶೋಕ ಜೋಗುರ, ಅತಿಥಿ ಸತ್ಕಾರ: ಡಾ. ಮನ್ಮಥ ಡೋಳೆ, ರಾಮಣ್ಣ ವಡಿಯಾರ. ಸ್ಮರಣ ಸಂಚಿಕೆ: ಚನ್ನಬಸವ ಹೇಡೆ, ಪ್ರಚಾರ ಸಮಿತಿ: ಶರಣಪ್ಪ ಪಾಟೀಲ, ಮುಬಾಸಿರ, ಜಾಹಿರಾತು ಸಮಿತಿ: ಶಿವಶರಣಪ್ಪ ವಲ್ಲೆಪುರೆ, ಮಾರುತಿ ರಾಠೋಡ, ಸಾರಿಗೆ ಸಮಿತಿ: ಸಂಜೀವಕುಮಾರ ಶೆಟಕಾರ, ಆರೋಗ್ಯ ಸಮಿತಿ: ಡಾ. ಮಹೇಶ ಬಿರಾದಾರ, ನೊಂದಣಿ ಸಮಿತಿ: ಸಾಗರ ವೈಜಿನಾಥ.ಆಮಂತ್ರಣ ಪತ್ರಿಕಾ ವಿತರಣಾ ಸಮಿತಿ: ಬಸವರಾಜ ಶೆಟಕಾರ, ಬಿ.ಎಂ. ಅಮರವಾಡಿ, ಮಹಿಳಾ ಸಮಿತಿ: ಸಿದ್ದಮ್ಮ ಹಳಕಾಯಿ, ಜಗದೇವಿ ವಲ್ಲೇಪುರೆ. ಮಾಧ್ಯಮ ಸಮಿತಿ: ಶರಣಪ್ಪ ಚಿಟ್ಮೆ, ಶರಣಪ್ಪ ಬಿರಾದಾರ, ಮನ್ಮಥಪ್ಪ ಸ್ವಾಮಿ. ಧ್ವಜಾರೋಹಣ ಸಮಿತಿ: ಬಸಪ್ಪ ಮಡಿವಾಳ ಅವರಿಗೆ ವಹಿಸಿಕೊಡಲಾಗಿದೆ.

Post Comments (+)