ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

7
ಶೈಕ್ಷಣಿಕ ಅಂಗಳ

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Published:
Updated:

ಹಾಸನ: ಈಚೆಗೆ ನಡೆದ ಹಾಸನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅನೇಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಯುನೈಟೆಡ್ ಶಾಲೆ: ಹಾಸನದ ಯುನೈಟೆಡ್ ಶಾಲೆಯ ವಿದ್ಯಾರ್ಥಿ ಅಭಿಷೇಕ್ 100ಮೀ, 200ಮೀ, 4*100ಮೀ ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳಾದ ಹರ್ಷಿತ್ ಯು.ಎನ್, ಚೇತನ್ ಜಿ.ಎಸ್. ಶಶಾಂಕ್ ಅವರು ಸಹ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವೆಂಕಟೇಶ್ವರ ಶಾಲೆಹಾಸನ ತಾಲ್ಲೂಕು ಪ್ರೌಢಶಾಲೆಗಳ ಕ್ರೀಡಾಕೂಟದ 400ಮೀ ಓಟದಲ್ಲಿ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಮಿಂಚು ಕುಮಾರ್ ದ್ವಿತೀಯ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ನಗರ ಬಿ - ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಾಲೆ ವಿದ್ಯಾರ್ಥಿಗಳಾದ ಬಿ.ಎಸ್. ನಾಗರಾಜು 3000ಮೀ. ಓಟದಲ್ಲಿ ತೃತೀಯ, ಕೆ.ಎನ್. ರವಿಚಂದ್ರ 1500ಮೀ ಓಟದಲ್ಲಿ ದ್ವಿತೀಯ, ಎಚ್.ಎನ್. ಅಶೋಕ್ 800ಮೀನಲ್ಲಿ ದ್ವಿತೀಯ, ಚೇತನ್ 200ಮೀ ದ್ವಿತೀಯ, 100ಮೀ ಪ್ರಥಮ, ಮಿಂಚು ಕುಮಾರ್ 400ಮೀ ಪ್ರಥಮ, 200ಮೀ ಪ್ರಥಮ, ಎನ್.ಕೆ. ರಾಜೇಶ್ ಎತ್ತರ ಜಿಗಿತ ಸ್ಪರ್ಧೆ ತೃತೀಯ ಹಾಗೂ ಶಶಾಂಕ್ ಟಿ.ಡಿ. ರಿಲೇಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.ಯಗಚಿ ಪ್ರೌಢಶಾಲೆ

ಶಾಲೆಯ ವಿದ್ಯಾರ್ಥಿ ಕೆ.ಕೆ. ಕೌಶಿಕ್ ಈಚೆಗೆ ನಡೆದ ದಕ್ಷಿಣ ವಲಯ ಕ್ರೀಡಾಕೂಟದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅವರು ಗುಂಡು ಎಸೆತ ಹಾಗೂಭರ್ಜಿಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಎಸ್.ಎನ್. ದರ್ಶನ್ 100ಮೀ ಹಾಗೂ200 ಮೀ. ಓಟದಲ್ಲಿ ದ್ವಿತೀಯ, ಕೆ.ಎಲ್. ಭುವನ 800ಮೀ ಓಟ ಪ್ರಥಮ, 1500ಮೀ ದ್ವಿತೀಯ, ಡಿ.ಟಿ. ಜೀವನ್ ಎತ್ತರ ಜಿಗಿತ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ 4 *100ಮೀ ರಿಲೇಯಲ್ಲಿ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಸರ್ಕಾರಿ ಪ್ರೌಢಶಾಲೆ ಸಾಧನೆ: 2013-14ನೇ ಸಾಲಿನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಾಸನ ತಾಲ್ಲೂಕಿನ ಬೈಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವರಲಕ್ಷ್ಮಿ 800ಮೀ, 1500ಮೀ, 4*100 ಮೀ ಓಟ ಪ್ರಥಮ ಹಾಗೂ 300 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಶಾಲೆಯ ವಿದ್ಯಾರ್ಥಿಗಳಾದ ಬಿ.ಜೆ. ಕವಿತಾ 100ಮೀ, 4*100 ಮೀ ಓಟದಲ್ಲಿ ಪ್ರಥಮ ಹಾಗೂ 200ಮೀ ದ್ವಿತೀಯ, ರಮ್ಯಾ 400ಮೀ, 4*100 ಮೀ ಓಟ ಪ್ರಥಮ ಹಾಗೂ ಉದ್ದ ಜಿಗಿತ ದ್ವಿತೀಯ, ಕೆ.ಟಿ. ಸಂಧ್ಯಾ 400ಮೀ, 200ಮೀ, 100ಮೀ ಓಟ ತೃತೀಯ, ಪುಷ್ಪಲತಾ 800ಮೀ ಓಟ ತೃತೀಯ, ಸಿ.ಆರ್. ಪ್ರತಾಪ್ 400ಮೀ ಪ್ರಥಮ, 200ಮೀ, 4*100ಮೀ ತೃತೀಯ ಹಾಗೂ ರುದ್ರೇಶ್ 800ಮೀ, 1500ಮೀ ದ್ವಿತೀಯ 4*100ಮೀ, 300ಮೀ ಓಟದ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.ಚಿನ್ನದ ಹುಡುಗಿ

ಹಾಸನ:
ಮಂಗಳೂರಿನಲ್ಲಿ ಈಚೆಗೆ ನಡೆದ ಕೇಂದ್ರಿಯ ವಿದ್ಯಾಲಯದ ಪ್ರಾಂತೀಯ ವಿಭಾಗದ ಈಜು ಸ್ಪರ್ಧೆಯಲ್ಲಿ ಹಾಸನದ ಕೇಂದ್ರಿಯ ವಿದ್ಯಾಲ ಯದ ವಿದ್ಯಾರ್ಥಿ ವಿ.ಎಸ್. ರಾಣಿ ಒಂದು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಅವರು 200ಮೀ ಬಟರ್ ಪ್ಲೈ ಸ್ಟ್ರೋಕ್ ವಿಭಾಗದಲ್ಲಿ ಚಿನ್ನದ ಪದಕ, 800ಮೀ ಫ್ರೀ ಸ್ಟೈಲ್ ಬೆಳ್ಳಿ ಪದಕ, 400ಮೀ ಇಂಡಿವಿಜುಯಲ್ ಮಿಡ್ಲೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry