ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ 18ರಂದು

7

ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ 18ರಂದು

Published:
Updated:

ಕಾರವಾರ: ಭ್ರಷ್ಟಾಚಾರ ವಿರುದ್ಧದ ಚಳವಳಿ ಹಾಗೂ ಅಭಿಯಾನವನ್ನು ಮುಂದುವರಿಸಿ ದೇಶವನ್ನು ಭ್ರಷ್ಟಾ ಚಾರದಿಂದ ಮುಕ್ತಗೊಳಿಸಲು ಯುವ ಜನರನ್ನು ಜಾಗೃತಗೊ ಮಾಡಲು ಹಮ್ಮಿ ಕೊಂಡಿರುವ ಪಿ.ಎಸ್.ಸ್ಮರಣಾರ್ಥ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯ ಅಂತಿಮ ಸುತ್ತು ಫೆ. 18ರಂದು 11ಕ್ಕೆ ಇಲ್ಲಿಯ ಕೋಡಿ ಬಾಗದ ದಿವೇಕರ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಉಪನ್ಯಾಸಕ ಎಂ.ಎಚ್.ನಾಯ್ಕ ಹೇಳಿದರು.ಕಾಲೇಜಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರದ ಹೆಚ್ಚುವರಿ ಪ್ರಧಾನ ಕಾನೂನು ಸಲಹೆಗಾರ ವಿವೇಕ ತನ್‌ಖಾ ಸ್ಪರ್ಧೆಯನ್ನು ಉದ್ಘಾಟಿಸ ಲಿದ್ದಾರೆ ಎಂದರು.

ಯುವ ಜನಾಂಗಕ್ಕೆ ಶಿಕ್ಷಣ ಕೊಡುವು ದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಅನ್ಯಾಯಗಳ ವಿರುದ್ಧ ಜಾಗೃತಿ ಮೂಡಿಸುವ, ಅವರನ್ನು ಸಮರ್ಥ ನಾಯಕರನ್ನಾಗಿ ರೂಪಿಸುವ ಕೆನರಾ ವೆಲ್‌ಫೆರ್ ಟ್ರಸ್ಟ್‌ನ ಶಿಲ್ಪಿ, ಹೋರಾಟಗಾರ ದಿ. ಡಾ. ದಿನಕರ ದೇಸಾಯಿ ಅವರ ಧೈಯಗಳಿಗೆ ಅನುಗುಣವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.ಒಂಬತ್ತು ತಾಲ್ಲೂಕು ಕೇಂದ್ರದಿಂದ ಒಟ್ಟು 18 ವಿದ್ಯಾರ್ಥಿಗಳು ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ದೇವದತ್ ಕಾಮತ್ ಸ್ಪರ್ಧೆಯನ್ನು ಪ್ರಾಯೋಜಿಸಿದ್ದಾರೆ.ಭ್ರಷ್ಟಾಚಾರದ ವಿರುದ್ಧ ಅಭಿಯಾನ ಮುಂದುವರಿಸುವ ಗುರಿಯಿಟ್ಟುಕೊಂಡು ಹಮ್ಮಿಕೊಂಡಿರುವ ಈ ಚರ್ಚಾ ಸ್ಪರ್ಧೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ಮನವಿ       ಮಾಡಿದ್ದಾರೆ.ದಿವೇಕರ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಜಿ.ಗುಂದಿ, ಎಸ್.ಡಿ.ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry