ಭಾನುವಾರ, ಏಪ್ರಿಲ್ 11, 2021
32 °C

ಜಿಲ್ಲೆಗೆ ಕೃಷಿ ಯಾಂತ್ರೀಕರಣ ಯೋಜನೆಗೆ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೃಷಿ ಕಸಬುಗಳ ಶ್ರಮದಾಯಕ ದುಡಿಮೆಯನ್ನು ಕಡಿಮೆ ಮಾಡುವುದು, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು, ಅಭಾವರುವ ಕೃಷಿ ಕಾರ್ಮಿಕರ ಅವಲಂಬನೆ ಕಡಿಮೆ ಮಾಡುವುದು ಯಾಂತ್ರೀಕರಣ ಯೋಜನೆಯ ಪ್ರಮುಖ ಉದ್ದೇಶ. ಇವುಗಳನ್ನು ಈಡೇರಿಸಲು 2010-11ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆ, ಕೃಷಿ ಯಾಂತ್ರೀಕರಣ, ವರ್ಕ್‌ಪ್ಲಾನ್ ಕೃಷಿಯಾಂತ್ರೀಕರಣ ಯೋಜನೆಯಡಿ ಶೇ. 50ರ ಸಹಾಯಧನದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ ಒದಗಿಸಲು ಗುಲ್ಬರ್ಗ ಜಿಲ್ಲೆಗೆ ಒಟ್ಟಾರೆ ರೂ. 264.74 ಲಕ್ಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.ಈ ಯೋಜನೆಯಡಿ ಪವರ್ ಟಿಲ್ಲರ್, ಎಮ್.ಬಿ.ಪ್ಲೋ., ರೋಟೋವೇಟರ್, ಡಿಸ್ಕ್-ಪ್ಲೋ, ಡಿಸ್ಕ್-ಹ್ಯಾರೋ, ಕಲ್ಟಿವೇಟರ್, ಲೆವೆಲರ್ ಬ್ಲೇಡ್, ಕೇಜ್ ವೀಲ್, ಸೀಡ್ ಕಮ್ ಫರ್ಟಿಲೈಜರ್ ಡ್ರಿಲ್, ಶುಗರ್‌ಕೇನ್ ಸೆಟ್ ಕಟ್ಟರ್ ಮತ್ತು ಪ್ಲಾಂಟರ್, ಶುಗರಕೇನ್ ತ್ರ್ಯಾಶ್ ಕಟ್ಟರ್, ಫರ್ರೋ ಓಪನರ್, ಭತ್ತದ ನಾಟಿ ಯಂತ್ರ, ರಾಶಿ ಯಂತ್ರ, ಡೀಪ್ ಟ್ರೆಂಚರ್, ದಾಲಮಿಲ್ ಪ್ರೊಸೆಸರ್, ಶುಗರ್‌ಕೇನ್ ಕ್ರಷರ್, ಚಾಪ್ ಕಟ್ಟರ್, ಸಸ್ಯ ಸಂರಕ್ಷಣಾ ಉಪಕರಣಗಳು, ಗ್ರಾಸ್/ವೀಡ್ ಸ್ಲ್ಯಾಷರ್, ಶ್ಯಾವಿಗೆ ಮಿಶಿನ್, ಚಿಲ್ಲಿ ಪೌಂಡಿಂಗ್ ಮಶಿನ್, ರವಾ ಮಶಿನ್, ಪ್ಲೋರಮಿಲ್, ಡೀಸೆಲ್ ಪಂಪ್‌ಸೆಟ್ ಇತ್ಯಾದಿಗಳನ್ನು ರೈತರಿಗೆ ಒದಗಿಸಲು ಅವಕಾಶರುತ್ತದೆ.ಯಂತ್ರೋಪಕರಣಗಳನ್ನು ಶೇ. 50ರ ರಿಯಾಯಿತಿ ದರದಲ್ಲಿ ಪಡೆಯಲು ಇಚ್ಛಿಸುವ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಳಾದ ಅರ್ಜಿ, ಭೂ-ದಾಖಲಾತಿ, ಜಾತಿ ದೃಢೀಕರಣ ಪತ್ರ ಇತ್ಯಾದಿಗಳನ್ನು ಸಲ್ಲಿಸಿ ಸಹಾಯ ಸೌಲಭ್ಯ ನಿಯಮಾನುಸಾರ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.