ಜಿಲ್ಲೆಗೆ ಗುಡಿಬಂಡೆ ಪ್ರಥಮ, ಚಿಂತಾಮಣಿಗೆ 3ನೇ ಸ್ಥಾನ

7

ಜಿಲ್ಲೆಗೆ ಗುಡಿಬಂಡೆ ಪ್ರಥಮ, ಚಿಂತಾಮಣಿಗೆ 3ನೇ ಸ್ಥಾನ

Published:
Updated:

ಗುಡಿಬಂಡೆ (ಚಿಕ್ಕಬಳ್ಳಾಪುರ): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು ಶೇ.92.08ರಷ್ಟು ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ. ಕಳೆದ ಸಾಲಿಗಿಂತ ಶೇ.2.22ರಷ್ಟು ಹೆಚ್ಚಿನ ಫಲಿತಾಂಶ ದಾಖಲಿಸಿದೆ. ಕಳೆದ ಬಾರಿ ತಾಲ್ಲೂಕು ಶೇ.89.46ರಷ್ಟು ಫಲಿತಾಂಶ ಗಳಿಸಿತ್ತು.ತಾಲ್ಲೂಕಿನಲ್ಲಿ ಒಟ್ಟು 11 ಸರ್ಕಾರಿ ಮತ್ತು ಒಂದು ಸರ್ಕಾರಿ ಪ್ರೌಢಶಾಲೆಯಿದೆ. ಮಾಚಹಳ್ಳಿ ಮತ್ತು ವರ‌್ಲಕೊಂಡ ಸರ್ಕಾರಿ ಪ್ರೌಢಶಾಲೆಗಳು ಮತ್ತು ಅರವಿಂದ ಶಾಲೆಯು ಶೇ 100ರಷ್ಟು ಫಲಿತಾಂಶ ಗಳಿಸಿವೆ.

ಸರ್ಕಾರಿ ಶಾಲೆ: ಬಾಲಕಿಯರ ಪ್ರೌಢಶಾಲೆ (ಶೇ.93.10), ಬಾಲಕರ ಪ್ರೌಢಶಾಲೆ (88.18), ಉಲ್ಲೋಡು (93.87), ಬೀಚಗಾನಹಳ್ಳಿ (98.5), ಚಂಡೂರು (84.84), ಯಲ್ಲೋಡು (96.77), ತಿರುಮಣಿ (94.11), ಹಂಪಸಂದ್ರ (97.43), ಸೋಮೇನಹಳ್ಳಿ (88.59) ಫಲಿತಾಂಶ ಗಳಿಸಿವೆ.ಪರೀಕ್ಷೆ ಬರೆದ ಒಟ್ಟು 816 ವಿದ್ಯಾರ್ಥಿಗಳ ಪೈಕಿ 748 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 12 ಮಂದಿ ಅತ್ಯುನ್ನತ ಶ್ರೇಣಿ, 267 ಮಂದಿ ಪ್ರಥಮ, 209 ಮಂದಿ ದ್ವಿತೀಯ ಮತ್ತು 259 ಮಂದಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಸುರಕ್ಷಾ 584 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಮತ್ತು ಅರವಿಂದ ಶಾಲೆಯ ಎ. ನಂದಿನಿ 549 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಚಿಂತಾಮಣೆ: ಮೂರನೇ ಸ್ಥಾನ

ಚಿಂತಾಮಣಿ:
ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಈ ಸಾರಿ ಶೇ.78.38ರಷ್ಟಾಗಿದೆ.

  24 ಸರ್ಕಾರಿ, 8 ಅನುದಾನಿತ, 29 ಅನುದಾನ ರಹಿತ ಸೇರಿ ಒಟ್ಟು 61 ಶಾಲೆಗಳಿಂದ 3664 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು.1844 ಬಾಲಕರ ಪೈಕಿ 1462 ಮಂದಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಶೇ.79.28 ರಷ್ಟು, 1820 ಬಾಲಕಿಯರ ಪೈಕಿ 1401 ಮಂದಿ ತೇರ್ಗಡೆಯಾಗುವ ಮೂಲಕ  ಶೇ.76.97 ಫಲಿತಾಂಶ ಗಳಿಸಿದ್ದಾರೆ.

249 ಅತ್ಯುತ್ತಮ, 1182 ಪ್ರಥಮ, 561 ದ್ವಿತೀಯ, 934 ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.100ರಷ್ಟು ಫಲಿತಾಂಶದ ಶಾಲೆಗಳು: ಬೂರಗಮಾಕಲಹಳ್ಳಿಯ ಸೂರ್ಯ ಪ್ರೌಢಶಾಲೆ, ಕುರುಟಹಳ್ಳಿಯ ಸುಮಶ್ರೀ ಪ್ರೌಢಶಾಲೆ, ಚಿಂತಾಮಣಿ ಕಿಶೋರ ವಿದ್ಯಾಭವನ, ರಾಯಲ್ ಪ್ರೌಢಶಾಲೆ, ಪ್ರಗತಿ ಪ್ರೌಢಶಾಲೆ, ಕೆಂಪೇಗೌಡ ಪ್ರೌಢಶಾಲೆ, ಡೆಲ್ಲಿ ಪಬ್ಲಿಕ್ ಶಾಲೆ, ಕೈವಾರದ ಭೈರವೇಶ್ವರ ಪ್ರೌಢಶಾಲೆ, ಅಂಬೇಡ್ಕರ್ ಪ್ರೌಢಶಾಲೆ, ಕೋನಪ್ಪಲ್ಲಿಯ ರವಿ ಪ್ರೌಢಶಾಲೆ, ಕುರುಬೂರಿನ ಎನ್.ವಿ.ಎಸ್ ಶಾಲೆ, ಕಡದನಮರಿ ಎನ್.ವಿ.ಎಸ್ ಶಾಲೆ ಸೇರಿ ಒಟ್ಟು 12 ಶಾಲೆಗಳು ಶೇ.100ರಷ್ಟು ಫಲಿತಾಂಶ ಗಳಿಸಿವೆ.ಸರ್ಕಾರಿ ಶಾಲೆಗಳುಲ್ಲಿ ತಿರುಮಳಾಪುರದ ಮೊರಾರ್ಜಿ ದೇಸಾಯಿ ಪ್ರೌಢಶಾಲೆ (94), ಚಿನ್ನಸಂದ್ರ (88.06), ಬೂರಗಮಾಕಲಹಳ್ಳಿ (86.57), ಕಾಗತಿ (86.49) ಉತ್ತಮ ಸಾದನೆ ಮಾಡಿವೆ. ತಳಗವಾರ ಪ್ರೌಢಶಾಲೆ (35.82), ಸಂತೆಕಲ್ಲಹಳ್ಳಿ(45), ಚಿಂತಾಮಣಿ ಬಾಲಕಿಯರ ಪದವಿ ಪೂರ್ವ ಕಾಲೇಜು (45.04) ಅತ್ಯಂತ ಕಡಿಮೆ ಫಲಿತಾಂಶ ಗಳಿಸಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನೇಯಪ್ಪ ತಿಳಿಸಿದ್ದಾರೆ.ರಾಯಲ್‌ಗೆ ಶೇ.100 ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ರಾಯಲ್ ವಿದ್ಯಾಸಂಸ್ಥೆ ಶೇ.100ರಷ್ಟು ಫಲಿತಾಂಶ ಗಳಿಸಿದೆ.  73 ಅತ್ಯುತ್ತಮ ಶ್ರೇಣಿ, 132 ಪ್ರಥಮ, 15 ದ್ವಿತೀಯ ಹಾಗೂ 5 ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಶಾಲೆಯ ಎಸ್.ನರ್ಮದಾ (609), ಬಿ.ಪ್ರಗತಿ (609), ಈ ತೇಜಶ್ವಿನಿ (609), ಎನ್.ಸವಿತಾ (606) ದ್ವಿತೀಯ, ತನು ಶ್ರೀರಾಮ್ (603)  ಅಂಕಗಳಿಸಿದ್ದಾರೆ.ನವೋದಯ ಪ್ರೌಢಶಾಲೆ ಕಡದನಮರಿ: ತಾಲ್ಲೂಕಿನ ಕಡದನಮರಿ ಗ್ರಾಮದ ನವೋದಯ ಸಂಯುಕ್ತ ಪ್ರೌಢಶಾಲೆಯು ಶೇ.100 ರಷ್ಟು ಫಲಿತಾಂಶ ಗಳಿಸಿದೆ. ಪರೀಕ್ಷೆಗೆ ಕುಳಿತಿದ್ದ 16 ಮಂದಿಯಲ್ಲಿ  9 ಪ್ರಥಮ, 2 ದ್ವಿತೀಯ ಹಾಗೂ 5 ತೃತೀಯ ಸ್ಥಾನ ಪಡೆದು ತೇರ್ಗಡೆಯಾಗಿದ್ದಾರೆ.ಬಾಗೇಪಲ್ಲಿ ಶೇ.73 ಫಲಿತಾಂಶ

ಬಾಗೇಪಲ್ಲಿ:
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು ಶೇ.73ರಷ್ಟು ಫಲಿತಾಂಶ ಗಳಿಸಿದೆ. ಕಳೆದ ಸಾಲಿಗಿಂತ ಈ ಬಾರಿ ತಾಲ್ಲೂಕು ಶೇ.2ರಷ್ಟು ಫಲಿತಾಂಶದಲ್ಲಿ ಇಳಿಮುಖ ಕಂಡಿದೆ. ತಾಲ್ಲೂಕಿನ 38 ಶಾಲೆಗಳ ಪೈಕಿ 7 ಖಾಸಗಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಗಳಿಸಿವೆ.ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 2060 ವಿದ್ಯಾರ್ಥಿಗಳ ಪೈಕಿ 1504 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದ 1061 ಬಾಲಕರ ಪೈಕಿ 781 ವಿದ್ಯಾರ್ಥಿಗಳು, 999 ಬಾಲಕಿಯರ ಪೈಕಿ 723 ಮಂದಿ ಉತ್ತೀರ್ಣರಾಗಿದ್ದಾರೆ.280 ಬಾಲಕರು ಮತ್ತು ಮತ್ತು 276 ಬಾಲಕಿಯರು ಅನುತ್ತೀರ್ಣರಾಗಿದ್ದಾರೆ.

ಪಟ್ಟಣದ ಯಂಗ್ ಇಂಡಿಯಾ ಶಾಲೆ ವಿದ್ಯಾರ್ಥಿ ಮಹಮ್ಮದ್ ಅತೀಕ್-598 ಅಂಕಗಳು ಮತ್ತು ಸತ್ಯಸಾಯಿ ವಿದ್ಯಾನಿಕೇತನದ ವಿದ್ಯಾರ್ಥಿ ಎನ್.ಎ.ಜಾನ್ಸಿ-597 ಅಂಕಗಳನ್ನು ಗಳಿಸಿದ್ದು, ತಾಲ್ಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಗೇಪಲ್ಲಿ ಟೌನ್ ಭಾರತಿ ವಿದ್ಯಾ ಸಂಸ್ಥೆ, ಸತ್ಯಸಾಯಿ ವಿದ್ಯಾನಿಕೇತನ, ಶಾಂತಿನಿಕೇತನ ಶಾಲೆ, ಚೇಳೂರಿನ ಪ್ರಶಾಂತಿ ವಿದ್ಯಾ ಸಂಸ್ಥೆ, ಅರವಿಂದ ಇಂಗ್ಲಿಷ್ ಮಾಧ್ಯಮ ಶಾಲೆ, ಅರವಿಂದ ಕನ್ನಡ ಮಾಧ್ಯಮ ಶಾಲೆ ಮತ್ತು ಸರ್ವೋದಯ ಶಾಲೆ ಶೇ.100ರಷ್ಟು ಅಂಕಗಳನ್ನು ಗಳಿಸಿವೆ.ಸರ್ಕಾರಿ ಪ್ರೌಢಶಾಲೆ:  ಘಂಟಂವಾರಿಪಲ್ಲಿ (96.15), ಬಾಗೇಪಲ್ಲಿ ಬಾಲಕರ ಪ್ರೌಢಶಾಲೆ (ಶೇ.51.53), ಬಾಲಕಿಯರ ಪ್ರೌಢಶಾಲೆ (ಶೇ.52), ಉರ್ದು ಪ್ರೌಢಶಾಲೆ (ಶೇ.58.33) ಪರಗೋಡು (68.57), ಯಲ್ಲಂಪಲ್ಲಿ (65.30), ಕಾನಗಮಾಕಲಪಲ್ಲಿ (65.38), ಮಿಟ್ಟೇಮರಿ (59.48), ಆಚಗಾನಪಲ್ಲಿ (71.42), ಪಾಳ್ಯಕೆರೆ (96.77), ಚೇಳೂರು (70.37), ನಲ್ಲಗುಟ್ಲಪಲ್ಲಿ (78.57), ಸೋಮನಾಥಪುರ (84.00), ಪಾತಪಾಳ್ಯ (78.61), ಆಚೇಪಲ್ಲಿ ಕ್ರಾಸ್ (80.00), ಮಾರ್ಗಾನುಕುಂಟೆ (69.02), ಗೂಳೂರು (73.11), ತಿಮ್ಮಂಪಲ್ಲಿ (69.00), ಬಿಳ್ಳೂರು (72.00), ಚಾಕವೇಲು (76.65),ಖಾಸಗಿ ಶಾಲೆಗಳು: ಜೂಲಪಾಳ್ಯ ಪೋಲೇರಮ್ಮ ಪ್ರೌಢಶಾಲೆ (71.64), ಬಾಗೇಪಲ್ಲಿ ನ್ಯೂಹಾರಿಝನ್ ಶಾಲೆ (85.00), ತೀಮಾಲಪಲ್ಲಿ ಪ್ರಗತಿ ವಿದ್ಯಾಸಂಸ್ಥೆ (94.72), ಸೆವನ್ ಹಿಲ್ಸ್ ಶಾಲೆ (42.00), ಯಂಗ್ ಇಂಡಿಯಾ ಶಾಲೆ (98.32), ಚೇಳೂರು ಕಿಶೋರ್ ಶಾಲೆ (90.32), ಜ್ಞಾನೋದಯ ಶಾಲೆ (98.00), ಚಾಕವೇಲು ಮದ್ದಮ್ಮ ಪ್ರೌಢಶಾಲೆ (94.11), ಜಚನಿ ಶಾಲೆ (40.00), ನಾರೇಮದ್ದೇಪಲ್ಲಿ ವಿನಾಯಕ ಪ್ರೌಢಶಾಲೆ (90.38) ಮತ್ತು ಪೂಲವಾರಿಪಲ್ಲಿ ಮೊರಾರ್ಜಿ ವಸತಿ ಸಹಿತ ಪ್ರೌಢಶಾಲೆ (61.11) ಫಲಿತಾಂಶ ಗಳಿಸಿವೆ.ಗೌರಿಬಿದನೂರಿಗೆ ಶೇ 67.23

ಗೌರಿಬಿದನೂರು:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು ಶೇ 67.23 ಫಲಿತಾಂಶ ದಾಖಲಿಸಿದೆ. ತಾಲ್ಲೂಕಿನ ಸರ್ಕಾರಿ ಶಾಲೆಗಳು ಶೇ 56.80, ಅನುದಾನಿತ ಶಾಲೆಗಳು ಶೇ 60.92 ಮತ್ತು ಅನುದಾನರಹಿತ ಶಾಲೆಗಳು ಶೇ 67.23ರಷ್ಟು ಫಲಿತಾಂಶ ದಾಖಲಿಸಿವೆ.ಪೋತೇನಹಳ್ಳಿಯ ನ್ಯಾಷನಲ್‌ಪ್ರೌಢಶಾಲೆ, ಅಲೀಪುರದ ಜೈನಭಿಯಾ ಪ್ರೌಢಶಾಲೆ, ಪಟ್ಟನದ ಸ್ಟೆಲ್ಲಾ ಕಾನ್ವೆಂಟ್ ಶಾಲೆ, ಬಿಜಿಎಸ್ ಪ್ರೌಢಶಾಲೆ ಮತ್ತು ಜಿ.ಕೊತ್ತೂರಿನ ಶಾರದಾದೇವಿ ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸಿವೆ.ಪಟ್ಟಣದ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಕುಶಾಲ್ 607 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದರೆ, ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಹರ್ಷಿತಾ 606 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲೀಪುರ ಜೈನಭಿಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಷ್ಮಿತಾ 603 ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

 

ಶಿಡ್ಲಘಟ್ಟ ದಾಖಲೆ ಫಲಿತಾಂಶ

ಶಿಡ್ಲಘಟ್ಟ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು ಶೇ.89.96ರಷ್ಟು ಫಲಿತಾಂಶ ಗಳಿಸಿದೆ. ಪರೀಕ್ಷೆ ಬರೆದ 2,501 ವಿದ್ಯಾರ್ಥಿಗಳು ಪೈಕಿ 2,250 ಮಂದಿ ಉತ್ತೀರ್ಣರಾಗಿದ್ದಾರೆ.ತಾಲ್ಲೂಕಿನಲ್ಲಿ ಹೆಚ್ಚು ಅಂಕಗಳನ್ನು ಪಡೆದು ನಡಿಪಿನಾಯಕನಹಳ್ಳಿ ನವೋದಯ ವಿದ್ಯಾಸಂಸ್ಥೆಯ ಎನ್.ಎ.ದಿವ್ಯಾ ಮತ್ತು ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಕೆ.ಸಿ.ಮೇಘನಾ (592 ಅಂಕ-ಶೇ.94.72) ಪ್ರಥಮ ಸ್ಥಾನ ಗಳಿಸಿದ್ದಾರೆ.ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಎಸ್.ಪ್ರೀತಿ (588 ಅಂಕ- ಶೇ.94.08) ದ್ವಿತೀಯ ಮತ್ತು ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಆರ್.ವರುಣ್ (586 ಅಂಕ- ಶೇ.93.76) ತೃತೀಯ ಸ್ಥಾನ ಗಳಿಸಿದ್ದಾರೆ.ಪಟ್ಟಣ ಸೇರಿದಂತೆ ತಾಲ್ಲೂಕಿನ 11 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಜಂಗಮಕೋಟೆಯ ಜ್ಯೋತಿ ಪ್ರೌಢಶಾಲೆ, ಎಚ್.ಕ್ರಾಸ್‌ನ ಜ್ಯೋತಿ ಪ್ರೌಢಶಾಲೆ, ಜಂಗಮಕೋಟೆ ಕ್ರಾಸ್‌ನ ಜ್ಞಾನಜ್ಯೋತಿ ಪ್ರೌಢಶಾಲೆ, ನಡಿಪಿನಾಯಕನಹಳ್ಳಿಯ ನವೋದಯ ಪ್ರೌಢಶಾಲೆ, ಹನುಮಂತಪುರದ ಬಿಜಿಎಸ್ ಪ್ರೌಢಶಾಲೆ, ಡಾಲ್ಫಿನ್ ಪ್ರೌಢಶಾಲೆ, ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಬಳುವನಹಳ್ಳಿಯ ಸೀತಾರಾಮಚಂದ್ರ ಪ್ರೌಢಶಾಲೆ, ಕ್ರೆಸೆಂಟ್ ವಿದ್ಯಾಸಂಸ್ಥೆ, ಆಶಾಕಿರಣ ಅಂಧಮಕ್ಕಳ ವಸತಿ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿವೆ.ಪರೀಕ್ಷೆ ಗೆದ್ದ ಅಂಧ ಮಕ್ಕಳು: ಆರು ಮಂದಿ ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಆರೂ ಮಂದಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 

ಬಡತನದ ಬೇಗೆಯಲ್ಲಿ ನಗೆ ಬೀರಿದ ಮಕ್ಕಳು..

ಶಿಡ್ಲಘಟ್ಟ: ಬಡತನ ಹಾಗೂ ಗ್ರಾಮೀಣ ಪರಿಸರದಲ್ಲಿದ್ದರೂ ತಾವು ಪ್ರತಿಭೆಯಲ್ಲಿ ಯಾವ ನಗರದ ವಿದ್ಯಾರ್ಥಿಗಳಿಗೂ ಕಮ್ಮಿಯಿಲ್ಲ ಎಂದು ತಾಲ್ಲೂಕಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೂಪಿಸಿದ್ದಾರೆ. ಗ್ರಾಮೀಣ ಪ್ರದೇಶದ ಕೆಳವರ್ಗದ ಅದರಲ್ಲೂ ಬಾಲಕಿಯರು ಈ ಬಾರಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮರಾಗಿ ಹೊರಹೊಮ್ಮಿದ್ದಾರೆ.ತಾಲ್ಲೂಕಿಗೆ ಪ್ರಥಮರಾಗಿರುವ ನಡಿಪಿನಾಯಕನಹಳ್ಳಿಯ ಎನ್.ಎ.ದಿವ್ಯಾ ಮತ್ತು ಕಾಚಹಳ್ಳಿಯ ಕೆ.ಸಿ.ಮೇಘನಾ ವ್ಯವಸಾಯದ ಕುಟುಂಬದವರಾದರೆ, ಮಳ್ಳೂರಿನ ಎಸ್.ಪ್ರೀತಿಯ ತಂದೆ ಆಟೊ ರಿಕ್ಷಾ ಚಾಲಕರು. ತೃತೀಯ ಸ್ಥಾನ ಪಡೆದಿರುವ ಮಳ್ಳೂರಿನ ಆರ್.ವರುಣ್ ಅವರು ವ್ಯವಸಾಯದ ಹಿನ್ನೆಲೆಯುಳ್ಳವರು.`ಪಟ್ಟಣದ ಶಾಲೆಗಳ ಮಕ್ಕಳಿಗಿಂತ ಹೆಚ್ಚು ಅಂಕಗಳನ್ನು ಮನೆ ಪಾಠಕ್ಕೆ ಹೋಗದೆ ಗ್ರಾಮೀಣ ಮಕ್ಕಳು ಪಡೆದಿರುವುದು ಅವರ ಪ್ರತಿಭೆಯನ್ನು ತೋರಿಸುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಮನೆಯ್ಲ್ಲಲಿ ತಂದೆ ತಾಯಿಯರಿಗೆ ಕೆಲಸದಲ್ಲಿ ಸಹಾಯ ಮಾಡಿ ಜೊತೆಯಲ್ಲಿ ಓದುತ್ತಾರೆ.ಇವರಿಗೆ ಪಟ್ಟಣದ ಮಕ್ಕಳಂತೆ ಮನೆಪಾಠಕ್ಕೆ ಹೋಗಲೂ ಸಾಧ್ಯವಿರುವುದಿಲ್ಲ. ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಶ್ರದ್ಧೆಯಿಂದ ಕೇಳಿ ಕಲಿಯುತ್ತಾರೆ. ಈ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ಹಾಗೂ ಅನುಕೂಲಗಳು ದೊರೆತರೆ ಇನ್ನಷ್ಟು ಸಾಧನೆಗಳನ್ನು ಮಾಡುತ್ತಾರೆ. ನಮ್ಮ ಶಾಲೆಗೆ ಬರುವವರೆಲ್ಲ ಗ್ರಾಮೀಣ ಮಕ್ಕಳೇ.

ಈ ಬಾರಿ ಪರೀಕ್ಷೆಯಲ್ಲಿ 21 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ~ ಎಂದು ಮಳ್ಳೂರಿನ ಸ್ವಾಮಿವಿವೇಕಾನಂದ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೃಷ್ಣಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry