ಶುಕ್ರವಾರ, ಮೇ 27, 2022
30 °C

ಜಿಲ್ಲೆಗೆ ಸದ್ದಿಲ್ಲದೆ ಬಂದು ಸುದ್ದಿಯಾದ ಅರಣ್ಯ ಸಚಿವರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾವರ: ಪಟ್ಟಣಕ್ಕೆ  ಸೋಮವಾರ ಬಂದಿದ್ದ ಅರಣ್ಯ ಹಾಗೂ ಪರಿಸರ ಖಾತೆ ಸಚಿವರು ತಮ್ಮ ಸದ್ದಿಲ್ಲದ ಭೇಟಿಯಿಂದ ಹೆಚ್ಚು ಸುದ್ದಿಯಾಗುವಂತಾಗಿದ್ದಾರೆ.ಸೋಮವಾರ ಮಂಕಿಯಲ್ಲಿ ಭಟ್ಕಳ ಮೂಲದ ಬ್ಯಾಂಕ್ ಶಾಖೆಯೊಂದರ ಉದ್ಘಾಟನೆಗೆಂದು ಬಂದಿದ್ದ ಅರಣ್ಯ ಸಚಿವ ರಮಾನಾಥ ರೈ ರಾತ್ರಿ ಇಲ್ಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಬಂದಾಗ ಬರೋಬ್ಬರಿ 9 ಗಂಟೆಯಾಗಿತ್ತು. ನಂತರ ಸಚಿವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಕೆನರಾ ವೃತ್ತದ ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಹಾಗೂ ಇತರ ಕೆಳ ಹಂತದ ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರೆನ್ನಲಾಗಿದೆ.ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಈ ಸಭೆಯನ್ನು ಗೋಪ್ಯವಾಗಿ ನಡೆಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇಲಾಖೆಯ ಸ್ಥಳೀಯ ಅಧಿಕಾರಿಗಳೂ ಸೇರಿದಂತೆ ಯಾರೊಬ್ಬರೂ ಸಚಿವರ ಈ ಅಧಿಕೃತ ಭೇಟಿಯ ಬಗ್ಗೆ ತುಟಿ ಪಿಟಕ್ಕೆನ್ನದಿರುವುದು ಆಶ್ಚರ್ಯ ಉಂಟುಮಾಡಿದ್ದು ರಾಜ್ಯ ಕ್ಯಾಬಿನಟ್ ಸಚಿವರೊಬ್ಬರ ಭೇಟಿಯನ್ನು ಮಾಧ್ಯಮದವರ ಗಮನಕ್ಕೂ ತರದೆ ರಾತ್ರೋರಾತ್ರಿ ಮುಗಿಸಿದ್ದು ಯಾಕೆ ಎಂದು ಪ್ರಶ್ನಿಸುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.