ಶುಕ್ರವಾರ, ಫೆಬ್ರವರಿ 26, 2021
25 °C

ಜಿಲ್ಲೆಯಲ್ಲಿ ಗರಿಷ್ಠ ಮತದಾನಕ್ಕೆ ಪ್ರಯತ್ನ:ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಗರಿಷ್ಠ ಮತದಾನಕ್ಕೆ ಪ್ರಯತ್ನ:ಇಬ್ರಾಹಿಂ

ಮಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ನಡೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ದಕ್ಷಿಣ ಕನ್ನಡ ಜಿಲ್ಲೆಗೆ ಇದ್ದು ಈವರೆಗೆ ಸರಾಸರಿ ಶೇ 75ರಷ್ಟು ಮತದಾನ ನಡೆಯುತ್ತಿತ್ತು. ಈ ಬಾರಿ ಶೇ 90ರಷ್ಟು ಮತದಾನ ನಡೆಸಲು  ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಎ. ಬಿ. ಇಬ್ರಾಹಿಂ ಹೇಳಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿ ಮಾಹಿತಿ ನೀಡಿದ ಅವರು, ಸುಸೂತ್ರವಾಗಿ ಚುನಾವಣೆ ನಡೆಯಲು ಪೂರಕವಾಗಿ ಮತದಾರರ ಜಾಗೃತಿ ಕಾರ್ಯಕ್ರಮ(ಸ್ವೀಪ್‌) ಮತ್ತು ವಿವಿಧ ರಾಜಕೀಯ ಪಕ್ಷಗಳಿಂದ ಬರುವ ದೂರುಗಳನ್ನು ಸ್ವೀಕರಿಸಲು ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ ಎಂದು ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಮತದಾರರ ಜಾಗೃತಿ ಅಭಿಯಾನದ ಅಧ್ಯಕ್ಷೆ ತುಳಸಿ ಮದ್ದಿನೇನಿ, ಮತದಾರರಲ್ಲಿ ಜಾಗೃತಿ ಮೂಡಿಸಲು ಭಿತ್ತಿಪತ್ರಗಳನ್ನು ಮುದ್ರಿ ಸಲಾಗಿದೆ. ಬಸ್‌ ಮತ್ತು ಕಾಲೇಜು ಕ್ಯಾಂಪಸ್‌ ಬಳಿ ಇವುಗಳನ್ನು ಹಾಕಲಾ ಗುವುದು. ಇದೇ 28ರಂದು ಮಂಗ ಳೂರು ವಿವಿ ಕಾಲೇಜು ಮುಂದೆ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ವಾಹನಗಳನ್ನು ನಿಲ್ಲಿಸಿ ಸ್ಟಿಕ್ಕರ್‌ ಗಳನ್ನು ಅಂಟಿಸುವರು.ಮತದಾನದ ಮಹತ್ವವನ್ನು ನಾಗರಿಕರಿಗೆ ತಿಳಿ ಹೇಳುವರು. ಈ ಅಭಿಯಾನವನ್ನು ಪೊಲೀಸ್‌ ಆಯುಕ್ತ ಹಿತೇಂದ್ರ ಉದ್ಘಾಟಿಸುವರು ಎಂದು ಹೇಳಿದರು.

ಸಾರ್ವಜನಿಕರೂ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಫ್ಲೆಕ್ಸ್‌ಗಳನ್ನು ಅಂಗಡಿ ಅಥವಾ ಸಾರ್ವಜನಿಕ ಸ್ಥಳ ಗಳಲ್ಲಿ ಹಾಕಬಹುದು. ಆದರೆ ಫ್ಲೆಕ್ಸ್‌ ಗಳು ಚುನಾವಣಾ ವೆಬ್‌ ಸೈಟ್‌ನಲ್ಲಿ ನೀಡಿದ ಮಾದರಿಯಂತೆ ಇರಬೇಕು.

ಅದರಲ್ಲಿ ಯಾರದೇ ಹೆಸರು ಇರಬಾ ರದು ಎಂದರು. ಅಲ್ಲದೆ ಮತದಾನದಲ್ಲಿ ಭಾಗವಹಿಸುವುದಾಗಿ ಈಗಾಗಲೇ ವಿದ್ಯಾರ್ಥಿಗಳಿಂದ 1ಲಕ್ಷಕ್ಕೂ ಅಧಿಕ ಪ್ರಮಾಣ ಪತ್ರಗಳು ಬಂದಿವೆ. ಆದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿರುವ ಪ್ರದೇಶಗಳ ಜನರನ್ನು ಓಲೈಸುವ ಕಾರ್ಯ ಮಾಡುವುದಿಲ್ಲ. ಅವರೆಲ್ಲರಿಗೂ ಮತದಾನದ ಮಹತ್ವದ ಅರಿವು ಇರುವುದರಿಂದ ಅವರು ಅಭಿವೃದ್ಧಿ ಅಥವಾ ಮತ್ಯಾವುದೋ ಬೇಡಿಕೆಗಾಗಿ ಮತಬಹಿಷ್ಕಾರಕ್ಕೆ ಮುಂ ದಾಗಿದ್ದಾರೆ. ಅವರು ಈ ಬಾರಿ ಹೊಸದಾಗಿ ಪರಿಚ ಯಿಸಲಾದ ‘ನೋಟಾ’ ಅವಕಾಶ ವನ್ನೂ ಬಳಸಿ ಕೊಳ್ಳಬಹುದು ಎಂದು ವಿವರಿಸಿದರು.ಅತೀ ಹೆಚ್ಚು ಕೋವಿ:ರಾಜ್ಯದಲ್ಲಿಯೇ ಅತೀ ಹೆಚ್ಚು ನೋಂದಾಯಿತ ಕೋವಿ ಗಳು ದಕ್ಷಿಣ ಕನ್ನಡದಲ್ಲಿ ಇವೆ. ಜಿಲ್ಲೆಯಲ್ಲಿ ಶೇ 85ರಷ್ಟು ಆಯುಧ ಗಳನ್ನು ಪೊಲೀಸ್‌ ಠಾಣೆಗೆ ಒಪ್ಪಿಸಲಾ ಗಿದ್ದು ನಗರದಲ್ಲಿ ಶೇ 95ರಷ್ಟು ಆಯುಧಗಳನ್ನು ಒಪ್ಪಿಸಲಾಗಿದೆ. ಗುರು ವಾರ ಸಂಜೆಯವರೆಗೂ ಆಯುಧ ಗಳನ್ನು ಒಪ್ಪಿಸುವ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.ನಿಯಂತ್ರಣ ಕೊಠಡಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ 23 ಪ್ರಕರಣಗಳು ದಾಖಲಾಗಿವೆ. ಅಬಕಾರಿ ವಿಭಾಗಕ್ಕೆ ಸಂಬಂಧಿಸಿದ 14 ಪ್ರಕರಣ ಗಳು ದಾಖಲಾಗಿದ್ದು 9 ಪ್ರಕರಣಗಳಲ್ಲಿ ಒಟ್ಟು ₨14.72 ಲಕ್ಷ ವನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.