ಶುಕ್ರವಾರ, ಜೂನ್ 18, 2021
28 °C

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ಒಟ್ಟು 20 ಕೇಂದ್ರಗಳಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾದವು.

ಮೊದಲ ದಿನ ಜರುಗಿದ ರಾಜ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಒಟ್ಟು 6023 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.ಕಲಾ ವಿಭಾಗದಲ್ಲಿ ನೋಂದಣಿಯಾಗಿದ್ದ 6220 ಅಭ್ಯರ್ಥಿಗಳ ಪೈಕಿ 5768 ಅಭ್ಯರ್ಥಿಗಳು ಹಾಜರಾದರು. ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆಗೆ ನೋಂದಣಿಯಾಗಿದ್ದ 264 ಅಭ್ಯರ್ಥಿಗಳ ಪೈಕಿ 255 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು.ಮೊದಲ ದಿನದ ಪರೀಕ್ಷೆಯಲ್ಲಿ ಯಾವುದೇ ಅಭ್ಯರ್ಥಿಗಳು ನಕಲು ಮಾಡಿದ್ದು ಪತ್ತೆಯಾಗಿಲ್ಲ. ವಿಶೇಷ ತನಿಖಾ ದಳಗಳನ್ನು ರಚಿಸಿ, ಎಲ್ಲ ಕಡೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ತಿಮ್ಮರಾಯಪ್ಪ ತಿಳಿಸಿದ್ದಾರೆ.ಗುರುವಾರ ಜೀವಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್ ಪರೀಕ್ಷೆಗಳು ಜರುಗಲಿವೆ.ಪರೀಕ್ಷೆ ಬರೆದ ಅಂಗವಿಕಲ!

ಹೂವಿನಹಡಗಲಿ: ಇಲ್ಲಿನ ಜಿಬಿಆರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ತಾಲ್ಲೂಕಿನ ಗೊರವಗುಡ್ಡಿ ತಾಂಡದ ಹುಟ್ಟು ಅಂಗವಿಕಲ ಶಂಕರ್ ಲಂಬಾಣಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಗಮನ ಸೆಳೆದರು.ತನ್ನ ಇರುವ ಒಂದೇ ಕೈನ ಎರಡೇ ಬೆರಳಿನಲ್ಲಿ ಉತ್ಸುಕತೆಯಿಂದ ಪರೀಕ್ಷೆ ಬರೆದ ಶಂಕರ್, ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಅತೀಹೆಚ್ಚು ಹೆಚ್ಚುವರಿ ಪುಟಗಳನ್ನು ತುಂಬಿಸಿ ಪರೀಕ್ಷಾ ಸಿಬ್ಬಂದಿಗೆ ಅಚ್ಚರಿ ಮೂಡಿಸಿದರು.ಎಸ್ಎಸ್ಎಲ್್ಸಿಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಶಂಕರ್, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ, ಕೆಎಎಸ್, ಐಎಎಸ್ ಓದುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.ಪರೀಕ್ಷಾ ಕೇಂದ್ರದಲ್ಲಿ ಇಟ್ಟಿಗಿ ಗ್ರಾಮದ ಸಿದ್ದೇಶ್ವರ  ಪಪೂ ಕಾಲೇಜಿನ ಅಂಧ ವಿದ್ಯಾರ್ಥಿನಿ ಶಾರದಾ ಮತ್ತೊಬ್ಬರ ಸಹಾಯ ಪಡೆದು ಪರೀಕ್ಷೆ ಬರೆದರು. ಈ ಇಬ್ಬರು ಅಂಗವಿಕಲ ವಿದ್ಯಾರ್ಥಿಗಳಿಗೆ ನಿಯಮಾವಳಿ ಪ್ರಕಾರ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿ, ಒಂದು ಗಂಟೆ ಅವಧಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.ಇಲ್ಲಿನ ಏಕೈಕ ಪರೀಕ್ಷಾ ಕೇಂದ್ರದಲ್ಲಿ ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಪರೀಕ್ಷೆಗೆ 585ವಿದ್ಯಾರ್ಥಿಗಳು ಹಾಜರಾಗಿ, 23ವಿದ್ಯಾರ್ಥಿಗಳು ಗೈರಾಗಿದ್ದರು. ಈ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 979 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿ.ಬಿ.ಆರ್. ಕಾಲೇಜಿನ ಪ್ರಾಚಾರ್ಯ ಡಾ.ಎ.ಎಂ. ರಾಜಶೇಖರಯ್ಯ ತಿಳಿಸಿದರು.210 ವಿದ್ಯಾರ್ಥಿಗಳು ಹಾಜರು

ಕಂಪ್ಲಿ: ಸ್ಥಳೀಯ ಷಾಮಿಯಾಚಂದ್‌ ಸರ್ಕಾರಿ ಪಿಯು ಕಾಲೇಜ್‌ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ದಿನ 210ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಬುಧವಾರ ಜರುಗಿದ ರಾಜ್ಯಶಾಸ್ತ್ರ ಪರೀಕ್ಷೆಗೆ 224 ಮತ್ತು ಸಂಖ್ಯಾಶಾಸ್ತ್ರ ಪರೀಕ್ಷೆಗೆ 1 ಸೇರಿ ಒಟ್ಟು 225 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಆದರೆ 15ವಿದ್ಯಾರ್ಥಿಗಳು ಗೈರು ಆಗಿದ್ದರು.ಪರೀಕ್ಷಾ ಅಧೀಕ್ಷರಾಗಿ ಪ್ರಾಚಾರ್ಯ ಬಿ. ಓಬಳೇಶ್, ಜಂಟಿ ಅಧೀಕ್ಷಕರಾಗಿ ಗಾದಿಗನೂರಿನ ಸರ್ಕಾರಿ ಪಿಯು ಕಾಲೇಜ್‌ ಪ್ರಭಾರಿ ಪ್ರಾಚಾರ್ಯ ಶ್ರೀಹರಿ ಕಾರ್ಯನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.