ಜಿಲ್ಲೆಯಲ್ಲಿ ನೂತನ ಮರಳು ನೀತಿ ಜಾರಿ

7

ಜಿಲ್ಲೆಯಲ್ಲಿ ನೂತನ ಮರಳು ನೀತಿ ಜಾರಿ

Published:
Updated:

ಚಾಮರಾಜನಗರ: ಜಿಲ್ಲೆಯಲ್ಲಿ ಹೊಸ ಮರಳು ನೀತಿ ಜಾರಿಗೊಂಡಿದ್ದು, ಮರಳು ಸಾಗಾಣಿಕೆ, ಸಂಗ್ರಹಣೆ ಹಾಗೂ ವಿತರಣೆಯ ನಿರ್ವಹಣೆಯನ್ನು ಜಿಲ್ಲಾ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ.ಕರ್ನಾಟಕ ರಾಜ್ಯ ಹೊಸ ಮರಳು ನೀತಿ- 2011ರ ಅನ್ವಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿ ಹರಿಯುವ ಕಾವೇರಿ ನದಿ ಪಾತ್ರದಲ್ಲಿ ಮರಳು ನಿಕ್ಷೇಪ ಗುರುತಿಸಿ, ನಿರ್ವಹಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಲೋಕೋಪ ಯೋಗಿ ಇಲಾಖೆಗೆ ನೀಡಲಾಗಿದೆ.ಲೋಕೋಪಯೋಗಿ ಇಲಾಖೆಯು ಮುಳ್ಳೂರು ಗ್ರಾಮದ ನದಿಪಾತ್ರದಲ್ಲಿ ಗಣಿಗಾರಿಕೆ ನಡೆಸಿ ಮರಳು ಸಂಗ್ರಹಿಸಿದೆ. ಮರಳು ಸಾಗಾಣಿಕೆಯನ್ನು ಫೆ. 15ರಿಂದಲೇ ಆರಂಭಿಸಲಾಗಿದೆ. ಲಭ್ಯವಿರುವ ಈ ಮರಳನ್ನು ಜಿಲ್ಲಾ ವ್ಯಾಪ್ತಿಯಲ್ಲಿಯೇ ಉಪಯೋಗಿಸಿಕೊಳ್ಳಲು ಜಿಲ್ಲಾಮಟ್ಟದ ಮರಳು ಗಣಿಗಾರಿಕೆ, ಉಸ್ತುವಾರಿ ಸಮಿತಿ ತೀರ್ಮಾನಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್ ತಿಳಿಸಿದ್ದಾರೆ.ಮುಳ್ಳೂರು ಗ್ರಾಮದ ಕಾವೇರಿ ನದಿ ಪ್ರದೇಶದಲ್ಲಿ ಮರಳು ಸಂಗ್ರಹಣೆ ಮಾಡಿರುವ ಸ್ಥಳ ದಿಂದ ಮರಳನ್ನು ನಿಯಮಾನುಸಾರ ವಿತರಿಸಲಾಗು ವುದು. ಆದ್ಯತೆ ಮೇರೆಗೆ ಸರ್ಕಾರಿ ಕಾಮಗಾರಿಗಳಿಗೆ, ನಂತರ ಸಾರ್ವಜನಿಕರಿಗೆ ವಿತರಿಸಲಾಗುವುದು.ಸಾಗಾಣಿಕೆ ವೆಚ್ಚ ಹೊರತುಪಡಿಸಿ ಲಾರಿಯೊಂದಕ್ಕೆ 4,500 ರೂ ರಾಜಧನ ನಿಗದಿಪಡಿಸಲಾಗಿದೆ. ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಅವರ ಹೆಸರಿಗೆ ಡಿಡಿ ರೂಪದಲ್ಲಿ ಈ ಮೊತ್ತ ಪಾವತಿಸಿ ಮರಳು ಸಾಗಾಣಿಕೆಗೆ ಪರವಾನಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.ಸಾಗಾಣಿಕೆಯ ಪರವಾನಗಿಯನ್ನು ಬೆಳಿಗ್ಗೆ 10.30ರಿಂದ ಸಂಜೆ 4ಗಂಟೆವರೆಗೆ ಮಾತ್ರ ವಿತರಿಸಲಾಗುವುದು. ಬೆಳಿಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಮಾತ್ರ ಮರಳು ಸಾಗಾಣಿಕೆ ಮಾಡಬೇಕು. ಪ್ರತಿ ಲಾರಿಯೊಂದಕ್ಕೆ 5.5 ಘ.ಮೀ.ನಷ್ಟು ಮರಳಿಗೆ ಮಾತ್ರ ಪರವಾನಗಿ ನೀಡಲಾಗುವುದು, ಸಂಜೆ 6 ಗಂಟೆ ನಂತರ ಮರಳು ಸಾಗಾಣಿಕೆ ನಿಷೇಧಿಸಲಾಗಿದೆ.6ಗಂಟೆಯ ನಂತರ ಮರಳು ಸಾಗಾಣಿಕೆ ಮಾಡುವುದು ಕಂಡುಬಂದರೆ ಅನಧಿಕೃತ ಸಾಗಾಣಿಕೆ ಎಂದು ಪರಿಗಣಿಸಿ ಮರಳನ್ನು ವಶಪಡಿಸಿಕೊಂಡು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮ 1994ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಲೋಕೋಪಯೋಗಿ ಇಲಾಖೆಯಿಂದ ಮಾತ್ರ ಗಣಿಗಾರಿಕೆ ಮಾಡಿ ಮರಳು ಸಂಗ್ರಹಿಸ ಬಹುದಾಗಿದೆ. ಬೇರೆ ಯಾರೂ ಸಹ ಮರಳು ಗಣಿಗಾರಿಕೆ, ಸಂಗ್ರಹಣೆ ಮಾಡುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಅಥವಾ ದೂ:  08226-222027 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry