ಬುಧವಾರ, ಮೇ 12, 2021
18 °C

ಜಿಲ್ಲೆಯಲ್ಲಿ ಬಾಲ ನ್ಯಾಯ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಬಾಲ ನ್ಯಾಯ ಮಂಡಳಿ

ಹಾವೇರಿ: `ಇಲ್ಲಿಯವರೆಗೆ ಧಾರವಾಡ ದಲ್ಲಿದ್ದ ಬಾಲನ್ಯಾಯ ಮಂಡಳಿಯನ್ನು ಈಗ ಹಾವೇರಿ ನಗರದಲ್ಲಿಯೇ ಸ್ಥಾಪಿಸ ಲಾಗಿದೆ. ಇದರಿಂದ ಬಾಲನ್ಯಾಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗಲಿದೆ~ ಎಂದು ನ್ಯಾಯ ಮಂಡಳಿ ಅಧ್ಯಕ್ಷ ಹಾಗೂ ನ್ಯಾಯಾ ಧೀಶ ಬಿ.ವೆಂಕಟೇಶ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರಕರಣಗಳನ್ನು ಧಾರವಾಡದ ಬಾಲ ನ್ಯಾಯ ಮಂಡಳಿಗೆ ಕಳುಹಿಸುವ ಹಾಗೂ ವಿಚಾರಣೆ ಮಾಡಬೇಕಿತ್ತು. ಈಗ ಅದಕ್ಕೆ ಕೊನೆಯಾದಂತಾಯಿತು ಎಂದರು.ಜಿಲ್ಲೆಯಲ್ಲಿ ನೂತನವಾಗಿ ಬಾಲ ನ್ಯಾಯ ಮಂಡಳಿ ಸ್ಥಾಪನೆಯಾದ ಹಿನ್ನೆಲೆಯಲ್ಲಿ ಧಾರವಾಡದ ನ್ಯಾಯ ಮಂಡಳಿಯಲ್ಲಿದ್ದ ಜಿಲ್ಲೆಯ 46 ಪ್ರಕರಣಗಳನ್ನು ಇಲ್ಲಿಗೆ ವರ್ಗಾಯಿಸ ಲಾಗಿದೆ. ಹೊಸದಾಗಿ ಮತ್ತೆ 12 ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 58 ಪ್ರಕರಣಗಳು ದಾಖಲು ಆದಂತಾಗಿವೆ. ಇದರಲ್ಲಿ ಒಂದು ಬಾಲಕಿಗೆ ಸಂಬಂಧಪಟ್ಟಿದ್ದು ಇದ್ದರೆ, ಉಳಿದ 57 ಪ್ರಕರಣಗಳು ಬಾಲಕರಿಗೆ ಸಂಬಂಧಪಟ್ಟಿವೆ ಎಂದು ತಿಳಿಸಿದರು.ಈಗ ದಾಖಲಾಗಿರುವ ಪ್ರಕರಣ ಗಳಲ್ಲಿ ಬಹುತೇಕ ಕಳ್ಳತನ ಪ್ರಕರಣಗಳು ಆಗಿವೆ. ಇದರಲ್ಲಿ ಒಂದು ಕೊಲೆಗೆ ಸಂಬಂಧಪಟ್ಟ ಪ್ರಕರಣವೂ ಇದೆ. ಮಕ್ಕಳು ತಿಳಿಯದೇ ಕೆಲವೊಂದು ಅಪ ರಾಧಗಳಲ್ಲಿ ಪಾಲ್ಗೊಂಡಿರುತ್ತಾರೆ. ಅಂತಹ ಮಕ್ಕಳ ವಿಚಾರಣೆ ಮಾಡಿ ಸರಿ ದಾರಿಗೆ ತರುವುದರ ಜೊತೆಗೆ ಅವರಿಗೆ ಪುನರ್‌ವಸತಿ ಕಲ್ಪಿಸುವುದೇ ಈ ನ್ಯಾಯ ಮಂಡಳಿಯ ಉದ್ದೆೀಶ ಎಂದು ಹೇಳಿದರು.ಬಾಲನ್ಯಾಯ ಮಂಡಳಿ ಕಾಯ್ದೆ 2000ರಲ್ಲಿ ಜಾರಿಗೆ ಬಂದಿದೆ. 6 ರಿಂದ 18 ವರ್ಷದೊಳಗಿನ ಕಾನೂನಿನ ಸಂಘ ರ್ಷಕ್ಕೆ ಒಳಪಟ್ಟ ಮಕ್ಕಳ ಪ್ರಕರಣ ಗಳನ್ನು ಬಾಲ ನ್ಯಾಯ ಮಂಡಳಿಯು ಇತ್ಯರ್ಥ ಪಡಿಸುತ್ತದೆ. ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳನ್ನು ಪೊಲೀಸ್ ಇಲಾಖೆಯ ಮುಖಾಂತರ ಬಾಲ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಹೇಳಿದರು.ನ್ಯಾಯ ಮಂಡಳಿಯ ಸಭೆ ಪ್ರತಿ ಶುಕ್ರವಾರ ನಡೆಸಲಾಗುವುದು ಎಂದು ತಿಳಿಸಿದ ಅವರು, ಮಕ್ಕಳ ವಿಚಾರಣೆ ವೇಳೆ ಕೋರ್ಟ್‌ನ ವಾತಾವರಣ ಇರ ಬಾರದೆಂಬ ಉದ್ದೆೀಶದಿಂದ ನ್ಯಾಯಾ ಧೀಶರು ಕೂಡಾ ಸಿವಿಲ್ ಬಟ್ಟೆ ಯಲ್ಲಿಯೇ ವಿಚಾರಣೆ ನಡೆಸಬೇಕಾ ಗುತ್ತದೆ ಎಂದು ತಿಳಿಸಿದರು.ನ್ಯಾಯ ಮಂಡಳಿಗೆ ಒಬ್ಬರು ಅಧ್ಯಕ್ಷರು, ಸರ್ಕಾರೇತರ ಸದಸ್ಯರಾಗಿ ಇಬ್ಬರನ್ನು ನಾಮನಿರ್ದೇಶನ ಮಾಡ ಲಾಗಿರುತ್ತದೆ. ಈ ಮೂವರು ಸೇರಿ ಕೊಂಡು ಮಕ್ಕಳ ವಿಚಾರಣೆ ಮಾಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸು ತ್ತಾರೆ. ಇದಕ್ಕೆ ತಾವು ಅಧ್ಯಕ್ಷರಾಗಿದ್ದು, ಶೈನಾಜ್ ಮಹ್ಮದಅಲಿ ಖಲೀಫ್, ಹನುಮಪ್ಪ ಜೆಟ್ಟೆಪ್ಪ ಜಾಡರ ಸದಸ್ಯ ರಾಗಿದ್ದಾರೆ ಎಂದು ಹೇಳಿದರು.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ರಾಜಕುಮಾರ ಮರೋಳ ಮಾತ ನಾಡಿ, ಇದೇ ಕಟ್ಟಡದಲ್ಲಿ ಸರ್ಕಾರಿ ಬಾಲಕಿಯರ ಬಾಲಮಂದಿರ ಸ್ಥಾಪಿಸ ಲಾಗಿದೆ. ಈ ಬಾಲ ಮಂದಿರ ದಲ್ಲಿ 50 ಜನ ಬಾಲಕಿಯರ ಪ್ರವೇಶಕ್ಕೆ ಅವಕಾಶ ವಿದೆ. ಕಳೆದ 15 ದಿನಗಳಿಂದ ರಾಣೆ ಬೆನ್ನೂರಲ್ಲಿ ಬಾಲಕರ ಬಾಲ ಮಂದಿರ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 26 ಜನ ಮಕ್ಕಳು ಅಲ್ಲಿದ್ದಾರೆ ಎಂದು ಹೇಳಿದರು.15ರಿಂದ 18 ವರ್ಷದೊಳಗಿನ ಅನಾಥ, ತಂದೆ ತಾಯಿಗಳಿಂದ ನಿರ್ಲ ಕ್ಷ್ಯಕ್ಕೆ ಒಳಗಾದ ಅಥವಾ ಮೋಸಕ್ಕೊ ಳಗಾದ, ಏಕ ಪೋಷಕ ಮಕ್ಕಳನ್ನು ಈ ಮಂದಿರದಲ್ಲಿ ದಾಖಲು ಮಾಡಬಹು ದಾಗಿದೆ. ಅವರಿಗೆ ಮನೆ ವಾತಾ ವರಣದ ಜೊತೆಗೆ ಶಿಕ್ಷಣವನ್ನು ನೀಡ ಲಾಗುತ್ತದೆ ಎಂದು ತಿಳಿಸಿದರು.15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಹುಬ್ಬಳ್ಳಿಯಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ಕಳುಹಿ ಸಲಾಗುತ್ತದೆ ಎಂದು ತಿಳಿಸಿದರು. ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಪಾಲನೆ, ಪೋಷಣೆ, ರಕ್ಷಣೆ ಹಾಗೂ ಪುನರ್‌ವಸತಿ ಕಲ್ಪಿಸುವ ಉದ್ದೆೀಶವನ್ನು ಹೊಂದಿದೆ. ರಾಣೆ ಬೆನ್ನೂರಲ್ಲಿನ ಬಾಲಕರ ಬಾಲ ಮಂದಿರ ದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ 3 ರಿಂದ 6ರವರೆಗೆ ಸಭೆ ನಡೆಸಲಾಗು ತ್ತದೆ. ಹಾವೇರಿಯಲ್ಲಿ ಪ್ರತಿ ಬುಧವಾರ ಮಧ್ಯಾಹ್ನ 3ರಿಂದ 6ರವರೆಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ 10,998 ಮಕ್ಕಳು ಅನಾಥವಾಗಿದ್ದು, ಇದರಲ್ಲಿ 1 ಸಾವಿರ ಮಕ್ಕಳಿಗೆ ತಂದೆ ತಾಯಿ ಇಬ್ಬರು ಇಲ್ಲ. 3,586 ಮಕ್ಕಳಿಗೆ ತಾಯಿಯಿಲ್ಲ. 6,412 ತಂದೆ ಇಲ್ಲದಂತಹ ಮಕ್ಕ ಳಿದ್ದಾರೆ ಎಂದು ತಿಳಿಸಿದ ಅವರು, ಎಲ್ಲಿಯಾದರೂ ಅನಾಥ ಮಕ್ಕಳು ಇದ್ದರೆ, ಮಕ್ಕಳ ಕಲ್ಯಾಣ ಸಮಿತಿಯ ಮೊ: 94481-09997ಗೆ  ತಿಳಿಸ ಬೇಕೆಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರಭಾವತಿ ಕರ್ನಿಂಗ್, ಶೈನಾಜ್ ಮಹ್ಮದಅಲಿ ಖಲೀಫ್, ಹನುಮಪ್ಪ ಜೆಟ್ಟೆಪ್ಪ, ಜಾಡರ ಸೇರಿ ದಂತೆ ಇಲಾಖೆಯ ಇತರೆ ಅಧಿಕಾರಿ ಗಳು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.