ಜಿಲ್ಲೆಯಲ್ಲಿ ಮುಂದುವರಿದ ಮಳೆ

ಗುರುವಾರ , ಜೂಲೈ 18, 2019
22 °C

ಜಿಲ್ಲೆಯಲ್ಲಿ ಮುಂದುವರಿದ ಮಳೆ

Published:
Updated:

ಶಿವಮೊಗ್ಗ: ಜಿಲ್ಲೆಯ ಹೊಸನಗರದಲ್ಲಿ ಗುರುವಾರ ಮುಂಜಾನೆವರೆಗೂ 53.0 ಮಿ.ಮೀ. ಮಳೆಯಾಗಿದ್ದು, ಹುಲಿಕಲ್‌ನಲ್ಲಿ 78 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 63 ಮಿ.ಮೀ. ಹಾಗೂ ಯಡೂರುನಲ್ಲಿ 54 ಮಿ.ಮೀ. ಮಳೆ ಸುರಿದಿದೆ.ತೀರ್ಥಹಳ್ಳಿಯಲ್ಲಿ 11.6, ಶಿಕಾರಿಪುರ 1.0, ಸಾಗರ 2.6, ಶಿವಮೊಗ್ಗ 0.6, ಭದ್ರಾವತಿ 0.8, ಸೊರಬ 10.3 ಮಿ.ಮೀ. ಮಳೆಯಾಗಿದೆ.ಲಿಂಗನಮಕ್ಕಿ ಸುತ್ತಮುತ್ತ ಉತ್ತಮ ಮಳೆಯಾದ ಪರಿಣಾಮ ಒಳಹರಿವು 5,223 ಕ್ಯೂಸೆಕ್‌ಗೆ ಏರಿದೆ. ಅದೇ ರೀತಿ ಭದ್ರಾ ಜಲಾಶಯದ ಉತ್ತಮ ಮಳೆಯಾಗಿ, ಒಳಹರಿವು 4,013 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಹಾಗಾಗಿ, ನೀರಿನಮಟ್ಟ 144 ಅಡಿ 5 ಇಂಚಿಗೆ ಏರಿದೆ.ಸಸಿಗಳ ಮಾರಾಟ

ಮೈಸೂರು ಕಾಗದ ಕಾರ್ಖಾನೆಯ ಅರಣ್ಯ ವಿಭಾಗದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿವಿಧ ನರ್ಸರಿಗಳಲ್ಲಿ ಬೆಳೆಸಲಾಗಿರುವ ಅಧಿಕ ಇಳುವರಿ ನೀಡುವ ಉತ್ತಮ ತಳಿಯ ನೀಲಗಿರಿ, ಅಕೇಶಿಯಾ, ಅಕೇಶಿಯಾ ಹೈಬ್ರಿಡ್, ಗಾಳಿ ಮತ್ತು ಇತರೆ ಸಸಿಗಳನ್ನು ರೈತ ಬಾಂಧವರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುವುದು. ಅರ್ಹ ರೈತರಿಗೆ ರಿಯಾಯ್ತಿ ದರದಲ್ಲಿ ಅರ್ಧದಷ್ಟು ಬೆಲೆಯಲ್ಲಿ ಸಸಿಗಳನ್ನು ನೀಡಲಾಗುವುದು.ಆಸಕ್ತರು ಯಾವುದೇ ಅಂಗೀಕೃತ ಬ್ಯಾಂಕಿನಿಂದ ಎಂಪಿಎಂ ಭದ್ರಾವತಿ ಅವರಿಗೆ ಸಲ್ಲುವಂತೆ ಡಿ.ಡಿ. ಪಡೆದು, ಸಕ್ರೆಬೈಲು, ಕೆಳದಿ, ಬಟ್ಟೆಮಲ್ಲಪ್ಪ, ಸೊನಲೆ ಮತ್ತು ಕುಟ್ರ ನರ್ಸರಿಗಳ ಮುಖ್ಯಸ್ಥರಿಗೆ ಸಲ್ಲಿಸಿ ಸಸಿಗಳನ್ನು ಪಡೆಯಬಹುದು.ತಾಂತ್ರಿಕ ಸಲಹೆ, ಇತರೆ ಮಾಹಿತಿಗೆ ಭದ್ರಾವತಿ- ದೂ: 08282- 270094, 270472, ಸಾಗರ- 08183-226281, ಹೊಸನಗರ- 08185-221435, ತೀರ್ಥಹಳ್ಳಿ- 08181-228264 ಅಥವಾ ಎಂಪಿಎಂ ಅರಣ್ಯ ವಿಭಾಗದ ಹಿರಿಯ ವ್ಯವಸ್ಥಾಪಕರು- 08282- 270201-208, ವಿಸ್ತರಣೆ- 2585, ಮೊ: 99451 95462.ನೋಟ್‌ಬುಕ್ ಮೇಳ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯು ನೋಟ್‌ಬುಕ್‌ಗಳ ತಯಾರಿಕೆ ಮತ್ತು ಮಾರಾಟ ಕ್ಷೇತ್ರಕ್ಕೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ವಿವಿಧ ಶ್ರೇಣಿಯ ಗುಣಮಟ್ಟದ ನೋಟ್‌ಬುಕ್‌ಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸಲು ಉದ್ದೇಶಿಸಿದೆ.ಜೂನ್ 11ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಎಂಪಿಎಂ ನೋಟ್‌ಬುಕ್ ಮೇಳವನ್ನು ಆಯೋಜಿಸಲಾಗಿದ್ದು, ಈ ಮೇಳದಲ್ಲಿ ರಿಯಾಯ್ತಿ ದರದಲ್ಲಿ ನೋಟ್‌ಬುಕ್‌ಗಳನ್ನು ಮಾರಾಟ ಮಾಡಲಾಗುವುದು.ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ನೋಟ್‌ಬುಕ್ ಮೇಳದಲ್ಲಿ ಪಾಲ್ಗೊಂಡು ಪುಸ್ತಕಗಳನ್ನು ಖರೀದಿಸುವಂತೆ ಎಂಪಿಎಂನ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry