ಶುಕ್ರವಾರ, ಮೇ 14, 2021
21 °C
ಮುಂಗಾರು ಹಂಗಾಮು

ಜಿಲ್ಲೆಯಲ್ಲಿ ಶೇ 42 ಪ್ರದೇಶದಲ್ಲಿ ಬಿತ್ತನೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ  ಮುಂಗಾರು ಹಂಗಾಮಿನಲ್ಲಿ ಒಟ್ಟು  ಶೇ 42ರಷ್ಟು ಕೃಷಿಭೂಮಿಯಲ್ಲಿ ಬೀಜಬಿತ್ತನೆ ಪೂರ್ಣಗೊಂಡಿದೆ.ಜಿಲ್ಲೆಯ ಒಟ್ಟು 4,20,195 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿಯಿದ್ದು, ಈವರೆಗೆ ಒಟ್ಟು 1,76,905 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಲ್ಲಿ ಒಟ್ಟು ಶೇ 42ರಷ್ಟು ಪ್ರಗತಿಯಾಗಿದೆ. ಇದರಲ್ಲಿ ಶೇ 58 ರಷ್ಟು ಅಂದರೆ 1,73,679 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಹಾಗೂ ಶೇ 3ರಷ್ಟು ಅಂದರೆ 3,226 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 26,687 ಹೆಕ್ಟೇರ್ ಪ್ರದೇಶದಲ್ಲಿ ತೃಣಧಾನ್ಯ(ಏಕದಳ ಧಾನ್ಯ), 39,467 ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳು, 7,060 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳ, 50,174 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯ ಬಿತ್ತನೆಯಾಗಿದೆ. ಇದಲ್ಲದೇ, 52,346 ಹೆಕ್ಟೇರ್ ಪ್ರದೇಶದಲ್ಲಿ ಹೊಗೆಸೊಪ್ಪಿನ ಹಾಗೂ 231 ಹೆಕ್ಟೇರ್ ಕ್ಷೇತ್ರದಲ್ಲಿ ಹೊಸ ಕಬ್ಬಿನ ನಾಟಿ ಕಾರ್ಯ ಪೂರ್ಣಗೊಂಡಿದೆ.ಜಿಲ್ಲೆಯಲ್ಲಿ ಮುಂಗಾರು ಮಳೆಯಾದ ಪ್ರದೇಶದಲ್ಲಿ ರೈತ ಸಮುದಾಯ ವಿವಿಧ ಬೆಳೆಗಳ ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸುತ್ತಿದ್ದು, ಕೊಟ್ಟಿಗೆ ಗೊಬ್ಬರ ಭೂಮಿಯಲ್ಲಿ ಹರಡುವ ಮತ್ತು ಅಗತ್ಯ ಬಿತ್ತನೆಬೀಜ ಮತ್ತು ಗೊಬ್ಬರ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಜೋಳ, ರಾಗಿ, ಮುಸುಕಿನ ಜೋಳ, ದ್ವಿದಳ ಧಾನ್ಯ ಬೆಳೆಗಳ, ನೆಲಗಡಲೆ, ಎಳ್ಳು, ಹರಳು, ಹತ್ತಿ ಬಿತ್ತನೆ ಹಾಗೂ ಹೊಗೆಸೊಪ್ಪಿನ ನಾಟಿ ಕಾರ್ಯ ಮುಂದುವರಿದಿದೆ.ಮೈಸೂರು ಜಿಲ್ಲೆಯ ಸರಾಸರಿ ವಾರ್ಷಿಕ ವಾಡಿಕೆ ಮಳೆ 766.7 ಮಿ.ಮೀ. ಇದ್ದು, ಜಿಲ್ಲೆಯಲ್ಲಿ 2013ರ ಜನವರಿಯಿಂದ ಜೂನ್ 6ರವರೆಗೆ 225.9 ಮಿ.ಮೀ. ವಾಡಿಕೆ ಮಳೆಗೆ ಸರಾಸರಿ 197.7 ಮಿ.ಮೀ. ಮಳೆಯಾಗಿದೆ. ಜೂನ್‌ನಲ್ಲಿ  ಈವರೆಗಿನ 20.7ಮಿ.ಮೀ. ವಾಡಿಕೆ ಮಳೆಗೆ ಸರಾಸರಿ 35.1 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.ರಸಗೊಬ್ಬರ ಮತ್ತು ಬಿತ್ತನೆಬೀಜ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಒಟ್ಟು 96,300 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮತ್ತು ಖಾಸಗಿಯವರ ಪ್ರಾರಂಭಿಕ ದಾಸ್ತಾನು ಸೇರಿದಂತೆ ಈವರೆಗೆ ಒಟ್ಟು 39,575 ಮೆ.ಟನ್ ರಸಗೊಬ್ಬರ ಸರಬರಾಜು ಆಗಿದೆ ಮತ್ತು 27,611 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ.ಜಿಲ್ಲೆಯಲ್ಲಿ ಸದರಿ ಹಂಗಾಮಿನಲ್ಲಿ ರಿಯಾಯಿತಿ ದರದ 30,421 ಕ್ವಿಂಟಲ್ ಬಿತ್ತನೆಬೀಜ ವಿತರಿಸುವ ಗುರಿುದೆ. ಈವರೆಗೆ ದಢೀಕತ ಹೈಬ್ರಿಡ್ ಜೋಳ ಮತ್ತು ದ್ವಿದಳ ಧಾನ್ಯ ಬೆಳೆಗಳ 2,624 ಕ್ವಿಂಟಲ್ ಬಿತ್ತನೆಬೀಜ ಸರಬರಾಜಾಗಿದ್ದು, 1,584 ಕ್ವಿಂಟಲ್ ಬಿತ್ತನೆಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗಿದೆ. ಕೆ.ಎಸ್.ಎಸ್.ಸಿ., ಎನ್.ಎಸ್.ಸಿ. ಮತ್ತು ಖಾಸಗಿಯವರಲ್ಲಿ ಒಟ್ಟು 50,120 ಕ್ವಿಂಟಲ್ ಬಿತ್ತನೆಬೀಜ ಲಭ್ಯವಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.