ಜಿಲ್ಲೆಯಲ್ಲಿ ಸಡಗರದ ಮಿಲಾದುನ್ನಬಿ

7

ಜಿಲ್ಲೆಯಲ್ಲಿ ಸಡಗರದ ಮಿಲಾದುನ್ನಬಿ

Published:
Updated:

ಸಿಂಧನೂರು: ಮಹ್ಮದ್ ಪೈಗಂಬರ  ಜನ್ಮದಿನಾಚರಣೆಯ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಿಲಾದುನ್ನಬಿ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.ಮೆಹಬೂಬ ಕಾಲೋನಿಯಲ್ಲಿರುವ ನೂರಾರಿ ಮಸ್ಜೀದ್ ಆವರಣದಲ್ಲಿ ಬಡಿಬೇಸ್, ಕೋಟೆ, ಖದರೀಯಾ ಕಾಲೊನಿ, ಎ.ಕೆ.ಗೋಪಾಲನಗರ, ಇಂದಿರಾನಗರ, ಟಿಪ್ಪುಸುಲ್ತಾನ ಕಾಲೊನಿ, ಗಂಗಾನಗರ, ಪಿಡಬ್ಲ್ಯುಡಿ ಕ್ಯಾಂಪ್ ಮತ್ತಿತರ ಬಡಾವಣೆಗಳಿಂದ ಬೆಳಗ್ಗೆ 9ಗಂಟೆಗೆ ತಂಡೋಪತಂಡವಾಗಿ ಆಗಮಿಸಿ ಸಮಾವೇಶಗೊಂಡರು.ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಬಡಿಗೇರ, ಬಸವಕೇಂದ್ರದ ತಾಲ್ಲೂಕು ಅಧ್ಯಕ್ಷ ಶಿವಣ್ಣ ಹ.ಸಣ್ಣಪ್ಪನವರ್, ಬಿ.ಅಬ್ದುಲ್‌ಗನಿ ವಕೀಲ, ಜಿಲಾನಿಪಾಷ ವಕೀಲ ಮಾತನಾಡಿ ಮಹ್ಮದ್ ಪೈಗಂಬರರು ವಿಶ್ವದ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡಿದ್ದು ಅವರ ಆದರ್ಶಗಳನ್ನು ಪ್ರತಿಯೊಂದು ಜನಾಂಗದವರು ಪಾಲಿಸಬೇಕಾಗಿದೆ ಎಂದು ಕರೆ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಕಾರ್ಯದರ್ಶಿ ಖಾಜಿಮಲಿಕ್ ವಕೀಲ, ಗಿರಾಮಿಪಾಷ ಜಾಗೀರದಾರ, ಬಾಬರ್‌ಪಾಷ ಜಾಗೀರದಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಬಸವರಾಜಗೌಡ ಬಾದರ್ಲಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಹೀರುಲ್ಲಾ ಹಸನ್, ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ನಗರಸಭೆ ಉಪಾಧ್ಯಕ್ಷ ಎಂ.ಡಿ.ನದೀಮ್‌ಮುಲ್ಲಾ, ಲಿಂಗನಗೌಡ ಶಿರಸ್ತೇದಾರ, ಹಾಜಿಮಸ್ತಾನ್, ಕೆ.ಗರೀಬ್‌ಸಾಬ, ಫಾರೂಕ್, ಸಾದಿಕ್‌ಮುನ್ನಾ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮುರ್ತುಜಾ, ಜೆಡಿಎಸ್ ನಗರಾಧ್ಯಕ್ಷ ಶಬ್ಬೀರಹುಸೇನ, ಅಬ್ದುಲ್‌ಸತ್ತರ್ ಖಾದ್ರಿ, ಬಾಬರ್, ಶಾಕೀರ್, ಅಜಿತ್ ಓಸ್ತವಾಲ್ ಮತ್ತಿತರರು ಭಾಗವಹಿಸಿದ್ದರು.ಮೆರವಣಿಗೆ: ಮೆಹಬೂಬ ಕಾಲೊನಿಯಲ್ಲಿ ಕಾರ್ಯಕ್ರಮ ಮುಗಿದ ನಂತರ ಪ್ರಾರಂಭವಾದ ಮೆರವಣಿಗೆ ಗಾಂಧಿವೃತ್ತ, ಕುಷ್ಟಗಿ ರಸ್ತೆ, ಬಸವ ವೃತ್ತ, ನಟರಾಜ ಕಾಲೊನಿ ರಸ್ತೆ, ಟಿಪ್ಪುಸುಲ್ತಾನ ವೃತ್ತ, ಹಳೆಬಜಾರ ಮೂಲಕ ಕೋಟೆಯಲ್ಲಿರುವ ಕಿಲ್ಲಾ ಮಸೀದಿಗೆ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry