ಶುಕ್ರವಾರ, ನವೆಂಬರ್ 22, 2019
22 °C

ಜಿಲ್ಲೆಯಲ್ಲಿ 70 ಸಾವಿರ ಹೊಸ ಮತದಾರರು

Published:
Updated:

ಮೈಸೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 70 ಸಾವಿರ ಹೊಸ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, `ಹೊಸ ಮತದಾರರ ನೋಂದಣಿ ಪ್ರಕ್ರಿಯೆಯು ಮುಗಿದಿದ್ದರು. 84 ಸಾವಿರ ಹೊಸ ಮತದಾರರನ್ನು ನೋಂದಣಿ ಮಾಡಲಾಗಿದೆ. 10 ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆದ್ದರಿಂದ ಅಂತಿಮ ಪಟ್ಟಿಯಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಮತದಾರರು ಸೇರ್ಪಡೆಯಾಗುವರು. ಈಗಾಗಲೇ ಜಿಲ್ಲೆಯ 11 ಕ್ಷೇತ್ರಗಳಲ್ಲಿ 20,98,000 ಮತ ದಾರರು ಪಟ್ಟಿಯಲ್ಲಿದ್ದಾರೆ. ಅದರಲ್ಲಿ 10,65,513 ಪುರುಷರು ಮತ್ತು 10,33,065 ಮಹಿಳಾ ಮತದಾರರು ಇದ್ದಾರೆ. ಇದಲ್ಲದೇ 889 ಸೇವಾ ಮತದಾರರೂ ಇದ್ದಾರೆ' ಎಂದು ವಿವರಿಸಿದರು.`11 ಕ್ಷೇತ್ರಗಳಲ್ಲಿ ಒಟ್ಟು 2578 ಮತಗಟ್ಟೆಗಳಲ್ಲಿ ಮತದಾನ ನಡೆಯುವುದು. ಅದರಲ್ಲಿ  40 ಅಕ್ಸಿಲರಿ ಮತಗಟ್ಟೆಗಳು, 978 ಸೂಕ್ಷ್ಮ ಮತ್ತು 520 ಅತೀ ಸೂಕ್ಷ್ಮ ಮತಗಟ್ಟೆಗಳು ಸೇರಿವೆ.  ಪಿರಿಯಾಪಟ್ಟಣದಲ್ಲಿ 205, ಕೆ.ಆರ್.ನಗರದಲ್ಲಿ 246, ಹುಣಸೂರು 262, ಎಚ್.ಡಿ.ಕೋಟೆ 257, ನಂಜನಗೂಡು 232,  ಚಾಮುಂಡೇಶ್ವರಿ 266, ಕೃಷ್ಣರಾಜ 201, ಚಾಮರಾಜ 201, ನರಸಿಂಹರಾಜ 205, ವರುಣ 250, ತಿ.  ನರಸೀಪುರ 213 ಮತಗಟ್ಟೆಗಳು ಇವೆ' ಎಂದು ತಿಳಿಸಿದರು.`ಕಳೆದ ಬಾರಿಯ ಚುನಾವಣೆ ಯಲ್ಲಿ ಮೈಸೂರಿನಲ್ಲಿ ಶೇ 54ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣ ವನ್ನು ಹೆಚ್ಚಿಸಬೇಕು ಎಂಬ ಮಾರ್ಗದರ್ಶಿ ಸೂತ್ರದನ್ವಯ ವಿವಿಧ ಕಾರ್ಯ ಕ್ರಮಗಳ ಮೂಲಕ ಯುವಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾಲ್‌ಗಳು, ಜನನಿಬಿಡ ಪ್ರದೇಶಗಳಲ್ಲಿ ಗೊಂಬೆಯಾಟ, ಬೀದಿ ನಾಟಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮ ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ' ಎಂದರು.ನೀತಿ ಸಂಹಿತೆ ಉಲ್ಲಂಘನೆ: `ಮಾರ್ಚ್ 20ರಿಂದ ಜಾರಿಯಲ್ಲಿರುವ ಚುನಾವಣೆ ನೀತಿ ಸಂಹಿತೆಯ ಪ್ರಕಾರ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜಮೂರ್ತಿ ಅವರನ್ನು ಒಳಗೊಂಡ ತಂಡ ವನ್ನು ನೀತಿ ಸಂಹಿತೆ ಅನುಷ್ಠಾನಕ್ಕೆ ರಚಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಲಾಗಿದೆ' ಎಂದು ತಿಳಿಸಿದರು.`ವರುಣಾ ಕ್ಷೇತ್ರದಲ್ಲಿ ಅನುಮತಿಯಿಲ್ಲದೇ ಬೋರ್‌ವೆಲ್ ಕೊರೆಯುವ ಕಾಮಗಾರಿ, ತಿ. ನರ ಸೀಪುರದಲ್ಲಿ ಧ್ವನಿವರ್ಧಕಗಳನ್ನು ಹಂಚು ತ್ತಿದ್ದಾಗ, ಎಚ್.ಡಿ. ಕೋಟೆಯಲ್ಲಿ ಮಂದಿರಗಳು, ಸರ್ಕಾರಿ ಕಚೇರಿಗಳು ಮತ್ತಿತರ ಕಟ್ಟಡಗಳ ಮೇಲೆ ಭಿತ್ತಿಚಿತ್ರ ಅಂಟಿಸಿ ವಿರೂಪಗೊಳಿಸಿದ ಪ್ರಕರಣ ಮತ್ತು ಕೆ.ಆರ್. ನಗರದಲ್ಲಿ ಅನಧಿಕೃತ ಬೋರ್‌ವೆಲ್ ಕೊರೆಯಲು ಸಹಾಯ ಒದಗಿಸಿದ ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಲಾಗಿದೆ' ಎಂದರು.`ಒಟ್ಟು 44 ತುರ್ತು ವಿಚಕ್ಷಣ ದಳಗಳು, 49 ಕಣ್ಗಾವಲು ತಂಡಗಳು, 14 ವಿಡಿಯೋ ಕಣ್ಗಾ ವಲು ತಂಡಗಳು, 11 ವಿಡಿಯೋ ವೀಕ್ಷಕ ತಂಡಗಳು, 128 ಸೆಕ್ಟೋರಿಯಲ್ ಮ್ಯಾಜಿಸ್ಟ್ರಿ ಯಲ್ ತಂಡಗಳನ್ನು ರಚಿಸಲಾಗಿದೆ. ಯಾವುದೇ ಸಮಯದಲ್ಲಿಯೂ ಈ ತಂಡಗಳಿಗೆ ಅಥವಾ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ (ದೂರವಾಣಿ ಸಂಖ್ಯೆ 1077) ಅಥವಾ ಅಧಿಕಾ ರಿಗಳ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ಅಥವಾ ಕರೆಯ ಮೂಲಕ ದೂರು ನೀಡಬಹು ದಾಗಿದೆ. ಈಗಾಗಲೇ ದೂರುಗಳು ಬರುತ್ತಿದ್ದು ಪರಿಶೀಲನೆ ನಡೆಸುತ್ತಿದ್ದೇವೆ' ಎಂದರು.`ಮೈಸೂರು ನಗರ ವ್ಯಾಪ್ತಿಯ ಮೂರು ಕ್ಷೇತ್ರ ಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯ 12 ಪ್ರಕರ ಣಗಳನ್ನು ದಾಖಲಿಸಲಾಗಿದೆ. ಕೃಷ್ಣರಾಜ ಕ್ಷೇತ್ರ ದಲ್ಲಿ 12, ಚಾಮರಾಜ ಮತ್ತು ನರಸಿಂಹ ರಾಜ ಕ್ಷೇತ್ರಗಳಲ್ಲಿ ತಲಾ 2 ಪ್ರಕರಣಗಳನ್ನು ದಾಖಲಿಸ ಲಾಗಿದೆ' ಎಂದು ತಿಳಿಸಿದರು.ಶಸ್ತ್ರಾಸ್ತ್ರ ಠೇವಣಿ: `ಜಿಲ್ಲೆಯಲ್ಲಿ ಪರವಾನಿಗೆ ಪಡೆದ 2467 ಶಸ್ತ್ರಾಸ್ತ್ರಗಳ ಪೈಕಿ 2,100 ಶಸ್ತ್ರಗಳನ್ನು ಈಗಾಗಲೇ ಠೇವಣಿ ಪಡೆಯ ಲಾಗಿದೆ. ಇನ್ನೂ ಶೇ 20ರಷ್ಟು ಶಸ್ತ್ರಗಳು ಇನ್ನೂ ಸಲ್ಲಿಕೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮದ ಅಂಗವಾಗಿ 49 ಮಂದಿ ಸಮಾಜಘಾತುಕ ಶಕ್ತಿಗಳನ್ನು ಬಂಧಿಸಲಾಗಿದೆ' ಎಂದು ತಿಳಿಸಿದರು.ಅಧಿಕಾರಿಗಳ ನೇಮಕ: `ಚುನಾವಣಾ ಕರ್ತವ್ಯಕ್ಕೆ ಒಟ್ಟು 12, 417 ಮತದಾನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ಮೂವರು ಮತದಾನ ಅಧಿಕಾರಿ ಗಳು ಮತ್ತು ಶೇ 20ರಷ್ಟು ಹೆಚ್ಚುವರಿ ಮತದಾ ನಾಧಿಕಾರಿಗಳು ಇರುತ್ತಾರೆ' ಎಂದು ಶಿಖಾ ತಿಳಿಸಿದರು.`ಪ್ರತಿಯೊಂದು ಕ್ಷೇತ್ರಕ್ಕೂ ಉಪವಿಭಾಗಾಧಿಕಾರಿ ಮಟ್ಟದ ಅಧಿಕಾರಿಗಳನ್ನು ಚುನಾವಣಾ ಆಧಿಕಾ ರಿಗಳು  ಮತ್ತು ತಹಶೀಲ್ದಾರರನ್ನು ಸಹಾಯಕ ಚುನಾವಣೆ ಅಧಿಕಾರಿಗಳನ್ನಾಗಿ ನೇಮಕ ಮಾಡ ಲಾಗಿದೆ. ಮೈಸೂರು ನಗರದ ಚಾಮುಂಡೇಶ್ವರಿ ಕ್ಷೆತ್ರಕ್ಕೆ ಮೈಸೂರು ಉಪವಿಭಾಗಾಧಿಕಾರಿ ಮತ್ತು ಮೈಸೂರು ತಾಲ್ಲೂಕು ತಹಶೀಲ್ದಾರ್, ಕೃಷ್ಣರಾಜ ಕ್ಷೇತ್ರಕ್ಕೆ ಸೆಸ್ಕ್ ಮುಖ್ಯ ಪ್ರಬಂಧಕರಾದ ಕೆ.ಎಂ. ಗಾಯತ್ರಿ ಮತ್ತು ಮಹಾನಗರ ಪಾಲಿಕೆ ಕಂದಾಯ ಶಾಖೆ ಕಚೇರಿ ಸಹಾಯಕರು, ಚಾಮ ರಾಜ ಕ್ಷೇತ್ರಕ್ಕೆ ಪಾಲಿಕೆ ಆಯುಕ್ತರು, ನಗರಾ ಭಿವೃದ್ಧಿ ಪ್ರಾಧಿಕಾ ರದ ವಿಶೇಷ ತಹಶೀಲ್ದಾರರು, ನರಸಿಂಹರಾಜ ಕ್ಷೇತ್ರಕ್ಕೆ ಸಹಕಾರ ಇಲಾಖೆ ಉಪನಿಬಂಧಕರು ಮತ್ತು ಪಾಲಿಕೆ ಸಹಾಯಕ ಕಂದಾಯಾಧಿಕಾರಿ ಕಾರ್ಯನಿರ್ವಹಿಸುವರು. ಉಳಿದಂತೆ ಆಯಾ ತಾಲ್ಲೂಕುಗಳಲ್ಲಿ ಅಲ್ಲಿಯ ತಹಶೀಲ್ದಾರರು ಸಹಾಯಕ ಚುನಾವಣೆ ಅಧಿಕಾರಿಗಳಾಗಿದ್ದಾರೆ' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)