ಮಂಗಳವಾರ, ಮೇ 18, 2021
30 °C

ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ:26 ಮನೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ 26 ಮನೆಗಳು ಭಾಗಶಃ ಕುಸಿದಿದ್ದು, ನದಿಗಳ ಒಳ ಹರಿವು ಹೆಚ್ಚಾಗಿದೆ. ಆದರೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.ಕಳೆದ 24ಗಂಟೆಗಳಲ್ಲಿ 153. 1 ಮಿ.ಮೀ. ಮಳೆಯಾಗಿದೆ. ಹಾವೇರಿ ತಾಲ್ಲೂಕಿನಲ್ಲಿ 11.8ಮಿ.ಮೀ, ರಾಣೆ ಬೆನ್ನೂರು ತಾಲ್ಲೂಕಿನಲ್ಲಿ 24 ಮಿ.ಮೀ., ಬ್ಯಾಡಗಿ ತಾಲ್ಲೂಕಿನಲ್ಲಿ 26.8 ಮಿ.ಮೀ., ಹಿರೇಕೆರೂರು ತಾಲ್ಲೂಕಿನಲ್ಲಿ 18ಮಿ.ಮೀ., ಸವಣೂರು ತಾಲ್ಲೂಕಿ ನಲ್ಲಿ 14.2ಮಿ.ಮೀ., ಶಿಗ್ಗಾಂವ ತಾಲ್ಲೂಕಿನಲ್ಲಿ 25.8ಮಿ.ಮೀ., ಹಾನಗಲ್ಲ ತಾಲ್ಲೂಕಿನಲ್ಲಿ 30.5 ಮಿ.ಮೀ. ಮಳೆಯಾಗಿದೆ. ಸರಾಸರಿ 21.9 ಮಿ.ಮೀ. ಮಳೆಯಾಗಿದೆ. ಇನ್ನು 48 ಗಂಟೆಗಳ ಕಾಲ ನಿರಂತರವಾಗಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಜಿಲ್ಲೆಯಲ್ಲಿ 26 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಹಾವೇರಿ ತಾಲ್ಲೂಕಿ ನಲ್ಲಿ 4, ರಾಣೆಬೆನ್ನೂರು ತಾಲ್ಲೂಕಿನಲ್ಲಿ 7, ಬ್ಯಾಡಗಿ ತಾಲ್ಲೂಕಿನಲ್ಲಿ 1, ಹಿರೇ ಕೆರೂರು ತಾಲ್ಲೂಕಿನಲ್ಲಿ 1, ಹಾನಗಲ್ಲ ತಾಲ್ಲೂಕಿನಲ್ಲಿ 13 ಸೇರಿದಂತೆ ಒಟ್ಟು 26 ಮನೆಗಳು ಭಾಗಶಃ ಕುಸಿದಿವೆ.ಜಿಲ್ಲೆಯಲ್ಲಿ ಹರಿದಿರುವ ಕುಮದ್ವತಿ, ವರದಾ, ಧರ್ಮಾ, ತುಂಗಭದ್ರಾ ನದಿಗಳಲ್ಲಿ ಒಳಹರಿವು ಹೆಚ್ಚಳವಾಗಿದೆ. ನದಿ ಪಾತ್ರಗಳ ಗ್ರಾಮಗಳಲ್ಲಿನ ನದಿ ಪಾತ್ರದಲ್ಲಿರುವ ಜನರು, ಜಾನುವಾರು ಗಳನ್ನು ನದಿಗಳತ್ತ ಬಿಡದಂತೆ ಸೂಚನೆ ನೀಡಲಾಗಿದೆ.ಹಾವೇರಿ ನಗರದಲ್ಲಿ ಮಳೆ ನಾಗರಿಕರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಗುರುವಾರ ಗಣೇಶನನ್ನು ಪ್ರತಿಷ್ಠಾಪಿಸಲು ಮಳೆ ಅಡ್ಡಿ ಮಾಡಿದ್ದರಿಂದ ಸಂಜೆವರೆಗೆ ಗಣೇಶ ಪ್ರತಿಷ್ಠಾಪನಾ ಕಾರ್ಯ ಮುಂದುವರೆ ದಿತ್ತು. ಮಳೆಯಿಂದ ರಾತ್ರಿ ಸಾರ್ವಜ ನಿಕರು ಗಣೇಶನನ್ನು ನೋಡಲು ಸಹ ತೆರಳಲು ಸಾಧ್ಯವಾಗಲಿಲ್ಲ.

ಸತತ ಮಳೆ ಗಣೇಶನ ವಿವಿಧ ಕಾರ್ಯಕ್ರಮಗಳಿಗೂ ಅಡ್ಡಿಯನ್ನುಂಟು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.