ಶುಕ್ರವಾರ, ಏಪ್ರಿಲ್ 16, 2021
31 °C

ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗಿನಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಕಸಬಾ, ಶ್ರಿಮಂಗಲ  ಸೇರಿದಂತೆ ಇತರೆಡೆ ಉತ್ತಮ ಮಳೆಯಾಗಿದೆ.ಜಿಲ್ಲೆಯ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ, ಪರಕಟಗೇರಿ, ಬಿರುನಾಣಿ, ಪರಾಲು ಮತ್ತಿತರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೆಲ ಭಾಗಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಗುರುವಾರ ಸರಾಸರಿ ಮಳೆ 3.4 ಸೆ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 125.2 ಸೆ.ಮೀ. ಮಳೆ ದಾಖಲಾಗಿದೆ.ಮಡಿಕೇರಿ ತಾಲ್ಲೂಕಿನಲ್ಲಿ 6. 9 ಸೆ. ಮೀ., ವಿರಾಜ ಪೇಟೆ ತಾಲ್ಲೂಕಿನಲ್ಲಿ 2.2 ಸೆ.ಮೀ., ಸೋಮ ವಾರಪೇಟೆ ತಾಲ್ಲೂಕಿನಲ್ಲಿ 1.1 ಸೆ.ಮೀ. ಮಳೆಯಾಗಿದೆ.ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 5.2 ಸೆ.ಮೀ., ನಾಪೋಕ್ಲು 4.1 ಸೆ.ಮೀ., ಸಂಪಾಜೆ 1.16 ಸೆ. ಮೀ., ಭಾಗಮಂಡಲ 6.6 ಸೆ. ಮೀ., ವಿರಾಜಪೇಟೆ ಕಸಬಾ 2.4 ಸೆ. ಮೀ., ಹುದಿಕೇರಿ 1.4 ಸೆ. ಮೀ., ಶ್ರಿಮಂಗಲ 1.1 ಸೆ. ಮೀ., ಪೊನ್ನಂಪೇಟೆ 2.5, ಅಮ್ಮತಿ 4 ಸೆ. ಮೀ., ಬಾಳೆಲೆ 1.6 ಸೆ. ಮೀ., ಸೋಮವಾರಪೇಟೆ ಕಸಬಾ 6 ಸೆ. ಮೀ., ಶನಿವಾರಸಂತೆ 7 ಸೆ. ಮೀ., ಶಾತಂಳ್ಳಿ 2 ಸೆ. ಮೀ., ಕೊಡ್ಲಿಪೇಟೆ 1 ಸೆ. ಮೀ., ಕುಶಾಲನಗರ 5 ಸೆ. ಮೀ., ಸುಂಟಿಕೊಪ್ಪ 1.8 ಸೆ. ಮೀ. ಮಳೆಯಾಗಿದೆ.ಹಾರಂಗಿ ಜಲಾಶಯದ ನೀರಿನ ಮಟ್ಟ

 ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.01ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 9 ಸೆ. ಮೀ., ಇಂದಿನ ನೀರಿನ ಒಳ ಹರಿವು 7436 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 8153 ಕ್ಯೂಸೆಕ್ ಆಗಿತ್ತು. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 7337, ನಾಲೆಗೆ 1100ಕ್ಯೂಸೆಕ್‌ಆಗಿತ್ತು.ಇಂದಿನ ನೀರಿನ ಹೊರ ಹರಿವು ನದಿಗೆ 3612, ನಾಲೆಗೆ 1263 ಕ್ಯೂಸೆಕ್ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.