ಶನಿವಾರ, ಏಪ್ರಿಲ್ 17, 2021
22 °C

ಜಿಲ್ಲೆಯಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ

ಶ್ರಮ ಸಂಸ್ಕೃತಿ ಅನಿವಾರ್ಯ

ಬೀಳಗಿ: ಶ್ರಮ ಸಂಸ್ಕೃತಿ ಮೈಗೂಡಿಸಿಕೊಂಡು ಅನಕ್ಷರತೆ, ಅನಾರೋಗ್ಯ, ಬಡತನ ನಿವಾರಣೆಯತ್ತ ಶ್ರಮಿಸಿದಾಗ ಮಾತ್ರ ಸ್ವಾತಂತ್ರ್ಯೋತ್ಸವದ ಕನಸು ನನಸಾಗಿಸಿದಂತೆ ಎಂದು ಜಿ.ಪಂ. ಸದಸ್ಯ ಎಚ್.ಆರ್. ನಿರಾಣಿ ಹೇಳಿದರು.ಇಲ್ಲಿನ ಮಿನಿ ವಿಧಾನ ಸೌಧದ ಹೊರಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.ತಹಶೀಲ್ದಾರ ಎಲ್.ಬಿ.ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು. ಪೋಲೀಸ್, ಗೃಹರಕ್ಷಕ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.ತಾ.ಪಂ. ಅಧ್ಯಕ್ಷೆ ಭಾರತಿ ಹದ್ಲಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ತುಂಗಾಬಾಯಿ ಮೊಕಾಶಿ, ಶೋಭಾ ತೋಟಗೇರ, ತಾ.ಪಂ. ಉಪಾಧ್ಯಕ್ಷೆ ಶಾಂತಾಬಾಯಿ ಮೇತ್ರಿ, ಪ.ಪಂ. ಉಪಾಧ್ಯಕ್ಷ ಮಹಾಂತೇಶ ಅಂಗಡಿ, ತಾ.ಪಂ. ಇಒ ಡಾ.ಆರ್.ಸಿ. ಕಮತ, ಸಿಪಿಐ ಅಮರೇಶ ಬಾರಕೇರ ಉಪಸ್ಥಿತರಿದ್ದರು.ಬಿಇಒ ಎಂ.ಜಿ. ದಾಸರ ವಂದಿಸಿದರು. ಗುರುರಾಜ ಲೂತಿ, ಹಿರೇನಿಂಗಪ್ಪನವರ ನಿರ್ವಹಿಸಿದರು.ಮಧ್ಯರಾತ್ರಿ ಧ್ವಜಾರೋಹಣ

ಮುಧೋಳ: ಮಂಗಳವಾರ ಮಧ್ಯರಾತ್ರಿ ಅಖಂಡಭಾರತ ಸಂಕಲ್ಪ ದಿನಾಚರಣೆ ನಿಮಿತ್ತ ವೇದಿಕೆಯ ಉತ್ತರ ಪ್ರಾಂತ್ಯ ಅಧ್ಯಕ್ಷ ಅಪ್ಪಾಸಾಹೇಬ ನಿಂಬಾಳಕರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಂತರ ಧ್ವಜಾರೋಹಣ ನೆರವೇರಿತು.ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜೀತ್, ತಾಲ್ಲೂಕು ಅಧ್ಯಕ್ಷ ಶಾಸಪ್ಪ ಲಕ್ಕಂ ಮಾತನಾಡಿದರು. ಸದಾಶಿವ ಜಾಧವ, ನ್ಯಾಯವಾದಿ ರಾಮಕೃಷ್ಣ ಬುದ್ನಿ, ಸಂದೀಪ ನಿಂಬಾಳಕರ, ರಮೇಶ ಜಾಧವ, ರಮೇಶ ದಾಸರ ಮುಂತಾದವರು ಉಪಸ್ಥಿತರಿದ್ದರು.ಉಚಿತ ಕ್ಷೌರ ಸೇವೆ

ಬೀಳಗಿ: ಇಲ್ಲಿನ `ಓಂ ಹೇರ್ ಕಟಿಂಗ್ ಸಲೂನ್~ನಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಉಚಿತವಾಗಿ ಕ್ಷೌರ ಸೇವೆ ನಡೆಸಿದರು.ಸಲೂನ್ ಮಾಲೀಕ ಮಲ್ಲಪ್ಪ ಹಡಪದ ಗ್ರಾಹಕರಿಗೆ ಸಿಹಿ ನೀಡಿ ಉಚಿತ ಕ್ಷೌರ ಸೇವೆ ಸಲ್ಲಿಸಿದರು. ಕಳೆದ 9 ವರ್ಷದಿಂದ ಈ ಸೇವೆ ನೀಡುತ್ತಿದ್ದಾರೆ.ಅಭಿಮಾನ ಇರಲಿ: ಪಟ್ಟಣಶೆಟ್ಟಿ

ಬಾದಾಮಿ: ರಾಷ್ಟ್ರಾಭಿಮಾನದಿಂದ ಹಿಂದಿನ ರಾಷ್ಟ್ರ ನಾಯಕರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಯುವಕರು ರಾಷ್ಟ್ರದ ಸಂಸ್ಕೃತಿ ಮತ್ತು ಇತಿಹಾಸವನ್ನು ಅರಿತು ದೇಶದ ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು ಎಂದು ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.ಅವರು ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ತಾಲ್ಲೂಕಾ ಆಡಳಿತದ ಆಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ತಹಶೀಲ್ದಾರ ಮಹೇಶ ಕರ್ಜಗಿ ಧ್ವಜಾರೋಹಣ ನೆರವೇರಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಶಾಂತಮ್ಮ ಅಮರಗೋಳ, ಉಪಾಧ್ಯಕ್ಷೆ ಅನಸೂಯಾ ಹುನಗುಂದ, ತಾ.ಪಂ. ಅಧ್ಯಕ್ಷೆ ಸುಶೀಲಾಬಾಯಿ ಹೆಬ್ಬಳ್ಳಿ, ಉಪಾಧ್ಯಕ್ಷ ತಾಯಪ್ಪ ಮಾದರ, ಜಿ.ಪಂ. ಸದಸ್ಯ ಎನ್.ಎಸ್. ಬೊಮ್ಮನಗೌಡರ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಂ. ಹಿರೇಮಠ ಉಪಸ್ಥಿತರಿದ್ದರು.ನೋಟ್‌ಬುಕ್ ವಿತರಣೆ

ಕೆರೂರ: ಪಟ್ಟಣದ ತರಕಾರಿ ಮಾರುಕಟ್ಟೆ ಆವರಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನಡೆಯಿತು. ಪ.ಪಂ ಅಧ್ಯಕ್ಷೆ ಯಲ್ಲೂಬಾಯಿ ಗ್ಯಾಟಿನ ಧ್ವಜಾರೋಹಣ ನೆರವೇರಿಸಿದರು. ಮಾಜಿ ಅಧ್ಯಕ್ಷ ಬಿ.ಬಿ ಸೂಳಿಕೇರಿ ಮಾತನಾಡಿದರು.ಪ.ಪಂ. ಉಪಾಧ್ಯಕ್ಷ ಶಂಕರ ಕಡಕೋಳ ಮತ್ತು ಸದಸ್ಯ ರಮೇಶ ಮತ್ತಿಕಟ್ಟಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್,  ಪೆನ್ ವಿತರಿಸಿದರು.ಪುತ್ಥಳಿಗೆ ಮಾಲಾರ್ಪಣೆ: ಇದಕ್ಕೂ ಮುನ್ನ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಬಿ.ಎಸ್ ಪಿ ಸಂಚಾಲಕ ವೈ.ಸಿ. ಕಾಂಬಳೆ, ಎಚ್.ಜಿ. ಪ್ರಭಾಕರ, ಬಿ.ಬಿ. ಸೂಳಿಕೇರಿ, ರಮೇಶ ಮತ್ತಿಕಟ್ಟಿ, ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ಧನಕೊಳ್ಳ, ಎಎಸ್‌ಐ ಡಿ.ಆರ್. ಬಿರಾದಾರ, ಉಪ ತಹಶೀಲ್ದಾರ ಬೊಮ್ಮನ್ನವರ, ಕಂದಾಯ ನಿರೀಕ್ಷಕ ವಿಜಯ ಕುಮಾರ ಗುಮಶೆಟ್ಟಿ ಪಾಲ್ಗೊಂಡಿದ್ದರು.ಪ.ಪಂ. ಕಾರ್ಯಾಲಯ: ಪಂಚಾಯಿತಿ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ದನಕೊಳ್ಳ ಧ್ವಜಾ ರೋಹಣ ನೆರವೇರಿಸಿದರು. ವೈ.ಎಸ್. ಪೂಜಾರ, ಸತೀಶ ಚವಡಿ, ಉಪಸ್ಥಿತರಿದ್ದರು.ಹೆಸ್ಕಾಂ ಕಚೇರಿ: ಸ್ಥಳೀಯ ಹೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿ ಚಂದ್ರು ಕೊಂತ ಧ್ವಜಾರೋಹಣ ನೆರವೇರಿಸಿದರು. ಲಾಕೋಪತಿ ಹೊಸಪೇಟೆ, ಅಶೋಕ ಜಾಲಿಹಾಳ ಉಪಸ್ಥಿತರಿದ್ದರು.ಪೊಲೀಸ್ ಠಾಣೆ: ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಡಿ.ಆರ್. ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಮತ್ತು ಗೃಹ ರಕ್ಷಕ ದಳದಿಂದ ಆಕರ್ಷಕ ಕವಾಯತು ನಡೆಯಿತು.ಕುಳಿಗೇರಿ ಕ್ರಾಸ್: ಇಲ್ಲಿಗೆ ಸಮೀಪದ ಕುಳಗೇರಿ ಕ್ರಾಸ್‌ನ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕ ಕೆ.ಎನ್. ಹಣ್ಣಿನವರ ಮಾತನಾಡಿದರು.ವೈದ್ಯಾಧಿಕಾರಿ ಡಾ. ಕಾಂತರಾಜ್ ಧ್ವಜಾರೋಹಣ ನೆರವೇರಿಸಿದರು, ಗ್ರಾ.ಪಂ. ಅಧ್ಯಕ್ಷೆ ತಿಪ್ಪವ್ವ ಮುಷ್ಟಿಗೇರಿ ಪಾಲ್ಗೊಂಡಿದ್ದರು. ವಿಶ್ವನಾಥ ಕುಳಗೇರಿ ಕಾರ್ಯಕ್ರಮ ನಿರೂಪಿಸಿದರು. ಸಾಧಕರಿಗೆ ಸನ್ಮಾನ

ಅಮೀನಗಡ: ಇಲ್ಲಿನ ಗ್ರಾ.ಪಂ. ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಅಧ್ಯಕ್ಷ ರಮೇಶ ಮುರಾಳ ಧ್ವಜಾರೋಹಣ ನೆರವೇರಿಸಿದರು.ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ರುದ್ರಪ್ಪ ಮುದ್ದೇಬಿಹಾಳ (ರಂಗಭೂಮಿ), ಮಂಜುಳಾ ಸಣಕಲ್ಲ (ಅಧ್ಯಾತ್ಮ ಪ್ರವಚನ), ಬಸವ್ವ ಹೊಕ್ರಾಣಿ (ಸ್ವಾತಂತ್ರ್ಯ ಯೋಧರ ಪತ್ನಿ), ಸಿ.ಕೆ. ಕಂಬಳಿ (ಶಿಕ್ಷಣ), ಎಸ್.ಎಂ. ಹೂಗಾರ, ಶಿವರಾಜ ಬೇವೂರ (ಪ್ರತಿಭಾನ್ವಿತರು), ಅಶೋಕ ಸಿಂಗದ (ಗೃಹರಕ್ಷಕ ದಳ), ಹನಮಂತ ಮಾಗಿ, ಸಣ್ಣಹನಮಪ್ಪ ಕೆಂಚನಗೌಡರ (ಕೃಷಿಕರು), ಆರ್. ನರಸಿಂಹಮೂರ್ತಿ (ಮಾಧ್ಯಮ), ಸಿದ್ರಾಮ ತತ್ರಾಣಿ (ಸಾಹಿತ್ಯ), ಮುಸರಿ (ನೇಕಾರಿಕೆ) ಅವರನ್ನು ಸನ್ಮಾನಿಸಲಾಯಿತು.ಉಪಾಧ್ಯಕ್ಷೆ ಕೌಶಲ್ಯ ಕಲ್ಲಕುಟಕರ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಸ್.ಎಸ್. ಚಳ್ಳಗಿಡದ, ತಾ.ಪಂ ಸದಸ್ಯೆ ಶೋಭಾ ಯರಗೇರ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಭಿವೃದ್ಧಿ ಅಧಿಕಾರಿ ಎಂ. ಎಚ್. ದೇಶಪಾಂಡೆ ನಿರೂಪಿಸಿ, ವಂದಿಸಿದರು.ಗ್ರಾಮದ 16 ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಶಿಸಿದರು.ಕ್ರಿಕೆಟ್ ಟೂರ್ನಿ: ಸಮೀಪದ ಸೂಳೇಭಾವಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸೂಳೇಭಾವಿ ಸ್ಪೋರ್ಟ್ಸ ಕ್ಲಬ್ ಏರ್ಪಡಿಸಿದ್ಧ ಆಹ್ವಾನಿತ ತಂಡಗಳ `ಸ್ವಾತಂತ್ರ್ಯ ಕಪ್~ ಕ್ರಿಕೆಟ್ ಟೂರ್ನಿ ನಡೆಯಿತು. ಪಿಎಸ್‌ಐ ಪಾಲಾಕ್ಷಯ್ಯ ಹಿರೇಮಠ ಟೂರ್ನಿಗೆ ಚಾಲನೆ ನೀಡಿದರು.ಪತ್ರಕರ್ತ ಆರ್. ನರಸಿಂಹಮೂರ್ತಿ, ಆರೋಗ್ಯ ಇಲಾಖೆಯ ಡಾ. ಕುಂಟೋಜಿ, ಅಶೋಕ, ಶಿಕ್ಷಕ ಮಲ್ಲಿಕಾರ್ಜುನ ಸಜ್ಜನ ಹಾಜರಿದ್ದರು. ದೇವರಾಜ್ ಕಮತಗಿ ನಿರೂಪಿಸಿದರು.ಕಮತಗಿ ಸ್ವಾತಂತ್ರ್ಯ ಸಂಭ್ರಮ

ಕಮತಗಿ (ಅಮೀನಗಡ): ಸ್ಥಳೀಯ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ  66ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಸಡಗರ-ಸಂಭ್ರಮದಿಂದ ಧ್ವಜಾರೋಹಣ ನೆರವೇರಿಸಲಾಯಿತು.ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹುಚ್ಚೇಶ್ವರ ಸ್ವಾಮೀಜಿ ಧ್ವಜಾರೋಹಣ ಮಾಡಿದರು. ಗ್ರಾ.ಪಂ ಕಾರ್ಯಾಲಯದಲ್ಲಿ ಅಧ್ಯಕ್ಷೆ ರತ್ನಾ ಹಳ್ಳದ ನೆರವೇರಿಸಿದರು. ಉಪಾಧ್ಯಕ್ಷೆ ಯಮನವ್ವ ಗದಿಗೆಪ್ಪ ಮಾದರ, ಪಿಡಿಒ ಎಸ್.ಜೆ. ಜಿತೂರಿ ಉಪಸ್ಥಿತರಿದ್ದರು. ಹೊಳೆಹುಚ್ಚೇಶ್ವರ ಸಹಕಾರ ಕ್ರೆಡಿಟ್ ಸೊಸೈಟಿ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಧ್ವಜಾರೋಹಣ ಮಾಡಿದರು.ಗಾಂಧಿ ಚೌಕದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಹುಚ್ಚಪ್ಪ ಜಯ್ಯೊ, ಕೆನರಾ ಬ್ಯಾಂಕ್‌ನಲ್ಲಿ ನೂರಂದಪ್ಪ ಗಂಗನಗೌಡರ, ಲಕ್ಷ್ಮೀ ಸಹಕಾರಿ ಬ್ಯಾಂಕ್‌ದಲ್ಲಿ ಸಲಹಾ ಸಮಿತಿ ನಿರ್ದೇಶಕ ಹುಚ್ಚಯ್ಯ ನಿಂಬಲಗುಂದಿ, ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಮಲ್ಲೆೀಶಪ್ಪ ಕುಪ್ಪಸ್ತ, ಅಂಚೆ ಕಚೇರಿಯಲ್ಲಿ ಎಸ್.ಎಸ್. ಮಠ, ಸೇವಾಲಾಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಘದ ಉಪಾಧ್ಯಕ್ಷ ಗುಂಡಪ್ಪ ರಾಠೋಡ, ಪಾರ್ವತಿ ಪರಮೇಶ್ವರ ಕೈಮಗ್ಗ ನೇಕಾರರ ಸಹಕಾರಿ ಸಂಘದಲ್ಲಿ ಶಿವಾಚಾರ ಹಟಗಾರ ಸಮಾಜದ ಅಧ್ಯಕ್ಷ ಈಶ್ವರಪ್ಪ ಮೇಲಪ್ಪ ಇಂಜಿನೇರಿ, ರೇಷ್ಮೆ ಇಲಾಖೆ ಕಚೇರಿಯಲ್ಲಿ ವಲಯಾಧಿಕಾರಿ ಎಸ್.ಎ.ಕುರ್ಲೆ, ಧ್ವಜಾರೋಹಣ ನೆರವೇರಿಸಿದರು.ಶ್ರೀವತ್ಸ ಸಹಕಾರ ಸಂಘದಲ್ಲಿ ಅಧ್ಯಕ್ಷ ವೆಂಕಟಭಟ್ಟ ಜೋಶಿ, ಶ್ರೀನಿವಾಸ ಸಹಕಾರ ಸಂಘದಲ್ಲಿ ಅಧ್ಯಕ್ಷ ಮಾರುತಿ ಕುಬೇರಪ್ಪ ಚಿತ್ರಗಾರ, ಕನಕದಾಸ ವಿ.ವಿ.ಸಹಕಾರಿ ಸಂಘದಲ್ಲಿ ಅಧ್ಯಕ್ಷ ಪರಸಪ್ಪ ಜಗ್ಗಲ, ಕಾಳಿದಾಸ ಸಹಕಾರ ಸಂಘದಲ್ಲಿ ನಿರ್ದೇಶಕ ಮಲ್ಲನಗೌಡ ಪಾಲ್ತಿ, ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಯಲ್ಲಪ್ಪ ಆಡಿನ, ಸರ್ಚ್ ಸಂಸ್ಥೆಯಲ್ಲಿ ಅಧ್ಯಕ್ಷೆ  ಜಿ.ಬಿ. ಹಲಗತ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಶ್ರೀಧರ ಪತ್ತಾರ, ಪಶು ಚಿಕಿತ್ಸಾಲಯದಲ್ಲಿ ಹಿರಿಯ ವೈದ್ಯಾಧಿಕಾರಿ ಎಚ್.ಆರ್. ದಾಸರ, ಸಮೃದ್ಧಿ ವಿ.ವಿ.ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬಸವರಾಜ ಕುಂಬಳಾವತಿ, ಕೆ.ಬಿ.ಎನ್. ಸಹಕಾರ ಸಂಘದಲ್ಲಿ ಅಧ್ಯಕ್ಷ ನಬಿಸಾಬ ತಹಶೀಲದಾರ, ಪಾರ್ವತಿ ಪರಮೇಶ್ವರ ಸಹಕಾರ ಸಂಘದಲ್ಲಿ ಈಶ್ವರಪ್ಪ ಇಂಜಿನೇರಿ ಧ್ವಜಾರೋಹಣ ನೆರವೇರಿಸಿದರು.`ಆತ್ಮಾವಲೋಕನ ಮಾಡಿಕೊಳ್ಳಿ~

ಬನಹಟ್ಟಿ: ಸ್ವಾತಂತ್ರ್ಯ ದಿನಾಚರಣೆಯನ್ನು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಆಚರಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ ತಿಳಿಸಿದರು.ಅವರು ಎಸ್.ಆರ್.ಎ. ಮೈದಾನದಲ್ಲಿ ರಬಕವಿ ಬನಹಟ್ಟಿ ತಾಲ್ಲೂಕು ನಿರ್ಮಾಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿದರು.ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ ನಡೆಯಿತು. ರಬಕವಿ ಬನಹಟ್ಟಿ ತಾಲ್ಲೂಕು ನಿರ್ಮಾಣ ಸಮಿತಿ ಅಧ್ಯಕ್ಷ ಭೀಮಶಿ ಮಗದುಮ್ ಸ್ವಾಗತಿಸಿದರು. ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದುಂಡಪ್ಪ ಮಾಚಕನೂರ ವಂದಿಸಿದರು.ಸಿಪಿಐ ಎಂ.ಬಿ. ಸಂಕದ, ಸಿದ್ಧನಗೌಡ ಪಾಟೀಲ, ಬಸವರಾಜ ತೆಗ್ಗಿ, ನಗರಸಭೆಯ ಅಧ್ಯಕ್ಷೆ ಕಲಾವತಿ ಬಾಣಕಾರ, ಸದಸ್ಯ ಅಪ್ಪು ಪಾಟೀಲ, ಅನುರಾಧ ಹೊರಟ್ಟಿ, ಶೈಲಜಾ ಹೊಸಕೋಟಿ, ನಿಂಗಪ್ಪ ಯಾದವಾಡ, ನಗರಸಭೆಯ ಪೌರಾಯುಕ್ತ ಆರ್.ಎಮ್. ಕೊಡಗೆ, ಪ್ರಾಚಾರ್ಯ ಶಶಿಧರ ಪೂಜಾರಿ,  ಶ್ರೀಶೈಲ ಯಾದವಾಡ, ಶಶಿಧರ ಕೋಲಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಭು ಪೂಜಾರಿ, ರವೀಂದ್ರ ಸಂಪಗಾಂವಿ ಭಾಗವಹಿಸಿದ್ದರು.ನ್ಯಾಯಾಲಯ ಆವರಣ: ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನ್ಯಾಯಾಧೀಶ ಈಶ್ವರ ಧ್ವಜಾರೋಹಣ ನೆರವೇರಿಸಿದರು.ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ ನಿಂಗಸಾನಿ ಅಧ್ಯಕ್ಷತೆ ವಹಿಸಿದ್ದರು.ದೇವನಹಳ್ಳಿ ನ್ಯಾಯಾಲಯದ ನ್ಯಾಯಾಧೀಶ ಜಿ.ಆರ್. ಶೆಟ್ಟರ್ ಮತ್ತು ಮೈಸೂರಿನ ಸರ್ಕಾರಿ ವಕೀಲ ಧರೇನ್ನವರ, ವಿಜಯ ಹೂಗಾರ, ಈಶ್ವರಚಂದ್ರ ಭೂತಿ, ಸಿದ್ದು ಗೌಡಪ್ಪನವರ, ಕೆ.ಡಿ. ತುಬಚಿ, ಹರ್ಷವರ್ಧನ ಪಟವರ್ಧನ, ಶ್ರೀನಿವಾಸ ಶೇಗುಣಶಿ  ಹಾಜರಿದ್ದರು.ಎಸ್.ಎಸ್. ಷಣ್ಮುಖ ಸ್ವಾಗತಿಸಿದರು. ರಾಘವೇಂದ್ರ ಗೊಳಸಂಗಿ ವಂದಿಸಿದರು. ಅಮುಲ ಬದಾಮಿಕರ ನಿರೂಪಿಸಿದರು.`ಸಂಘಟಿತ ಶ್ರಮ ಇರಲಿ~

ಹುನಗುಂದ: ಸ್ವಾತಂತ್ರ್ಯಾ ನಂತರ ಭಾರತ ನಿರೀಕ್ಷಿತ ಮಟ್ಟದ ಉನ್ನತಿ ಸಾಧಿಸಲಾಗಿಲ್ಲ. ಆರ್ಥಿಕ ಉನ್ನತಿಯಲ್ಲಿ ಇನ್ನೂ ಸಾಧಿಸಬೇಕಾಗಿದೆ. ಈ ದಿಸೆಯಲ್ಲಿ ಗಂಭೀರ ಚಿಂತನೆ ನಡೆಯಲಿ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಅವರು ಸ್ವಾತಂತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಶೀಲ್ದಾರ ಅಪರ್ಣಾ ಪಾವಟೆ ಧ್ವಜಾರೋಹಣ ಮಾಡಿ ಮಾತನಾಡಿದರು.ತಾ.ಪಂ. ಅಧ್ಯಕ್ಷೆ ಶರಣಮ್ಮ ಮಾಟೂರ, ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ಪ.ಪಂ. ಅಧ್ಯಕ್ಷ ಬಸಪ್ಪ ಆಲೂರ, ಉಪಾಧ್ಯಕ್ಷೆ ಮಲ್ಲಮ್ಮ ಬೆನಕನಡೋಣಿ, ತಾಪಂ ಇಒ ಆರ್.ವಿ.ತೋಟದ, ಸಿಪಿಐ ಯು. ಶರಣಪ್ಪ, ಬಿಇಒ ವಿಜಯಲಕ್ಷ್ಮಿ ಒಡೆಯರ ಮತ್ತು ಡಾ. ಎಚ್.ಡಿ. ವೈದ್ಯ ಉಪಸ್ಥಿತರಿದ್ದರು. ಲಲಿತಾ ಹೊಸಪ್ಯಾಟಿ ಸ್ವಾಗತಿಸಿದರು. ವಿ.ಬಿ.ಜೀರಗಿ ವಂದಿಸಿದರು. ರಮೇಶ ಭಜಂತ್ರಿ ನಿರೂಪಿಸಿದರು.ಆಕರ್ಷಕ ಪಥ ಸಂಚಲನ


ಮಹಾಲಿಂಗಪುರ: ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮಕ್ಕೆ ವಿದ್ಯಾರ್ಥಿಗಳು ನಡೆಸಿದ ಶಿಸ್ತಿನ ಆಕರ್ಷಕ ಪಥ ಸಂಚಲನ, ಒಂದೇ ಮಾತರಂ ಘೋಷಣೆ ಮೆರಗು ನೀಡಿದವು.ಪುರಸಭೆಯ ಅಧ್ಯಕ್ಷ ಜಿ.ಎಸ್.ಗೊಂಬಿ ಎಲ್ಲ ವಿದ್ಯಾರ್ಥಿಗಳ ಧ್ವಜವಂದನೆ ಸ್ವೀಕರಿಸಿದರು. ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ ಭಾಗವಹಿಸಿದ್ದರು.ಪಿಕೆಪಿಎಸ್‌ನಲ್ಲಿ ಆಚರಣೆ:

ಇಲ್ಲಿಯ ಪ್ರಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಸ್ವಾತಂತ್ರ್ಯೋತ್ಸವವನ್ನು ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಡಗರದಿಂದ ಆಚರಿಸಿದರು.ಪುರಸಭೆಯ ಹಿಂದಿನ ಅಧ್ಯಕ್ಷ ಬಸನಗೌಡ ಪಾಟೀಲ, ಪ್ರಕಾಶ ಅರಳೀಕಟ್ಟಿ, ಅಶೋಕ ಗೌಡ ಪಾಟೀಲ, ಮಹೇಶ ಬಡಿಗೇರ, ಮನೋಹರ ಶಿರೋಳ, ಮಹಾಲಿಂಗ ಕುಳ್ಳೊಳ್ಳಿ, ಶಿವಲಿಂಗ ಘಂಟಿ, ಈರಣ್ಣ ಬೆಟಗೇರಿ ಹಾಗೂ ಅನೇಕ ರೈತರು ಪಾಲ್ಗೊಂಡಿದ್ದರು.ಏರದ ಬಾವುಟ: ಪ್ರತಿಭಟನೆ

ಮಹಾಲಿಂಗಪುರ: ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವಾಗ ಇಲ್ಲಿಯ ಕರ್ನಾಟಕ ಬ್ಯಾಂಕ್, ಕ್ಯಾನರಾ ಬ್ಯಾಂಕ್ ಹಾಗೂ ಕೇಂದ್ರ ಸರಕಾರದ ನೇರ ಅಧೀನದಲ್ಲಿರುವ ಅಂಚೆ ಕಚೇರಿಯಲ್ಲಿ ಮಾತ್ರ ಮಹಾ ಮೌನ ಆವರಿಸಿತ್ತು.ಕರವೇ ಕಾರ್ಯಕರ್ತರು ವಿಷಯ ತಿಳಿದು ಧ್ವಜಾರೋಹಣ ನೆರವೇರಿಸದ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಕಿಡಿಕಾರಿ ಪ್ರತಿಭಟಿಸಿದರು.ಕರವೇ ಮುಖಂಡರಾದ ಅರವಿಂದ ಮಾಲಬಸರಿ, ಶಂಕರ ಮುಗಳಖೋಡ, ನಾಮದೇವ ಹೂಗಾರ, ಬಸವರಾಜ ಕುಂಬಾರ, ರಾಜೂ ಜಂಬಗಿ, ಅಶೋಕ ಕೊಣ್ಣೂರ, ಶೇಖರ ಅಂಗಡಿ ಹಾಗೂ ಚನಬಸು ಹುರಕಡ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪುರಸಭೆಯಲ್ಲಿ ಧ್ವಜ ಉಲ್ಟಾ

ಗುಳೇದಗುಡ್ಡ: ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರು ಏರಿಸಿದ ಧ್ವಜ ತಿರುವು ಮುರುವಾಗಿ ಹಾರಿದ ಘಟನೆ ಬುಧವಾರ ನಡೆದಿದೆ. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.ಮಕ್ಕಳ ನೃತ್ಯ ಪ್ರದರ್ಶನ

ಕೂಡಲಸಂಗಮ: ಇಲ್ಲಿಯ ಜಗದ್ಗುರು ಬಸವಜಯಮೃತ್ಯುಂಜಯ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮತ್ಯುಂಜಯ ಸ್ವಾಮೀಜಿ  ಧ್ವಜಾರೋಹಣ ನೆರವೇರಿಸಿದರು.ಶೇಖರಗೌಡ ಗೌಡರ, ಮಳಿಯಪ್ಪ ಚೌಧರಿ, ಆರ್.ಪಿ. ಬೂದೂರಿ, ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಅಮರಗೋಳ, ಚನ್ನಪ್ಪ ಇಜಾರದಾರ, ನೀಲಕಂಠಪ್ಪ ಬಾಗೇವಾಡಿ, ಶೇಖಪ್ಪ ದೇಶಿ, ಶರಣಪ್ಪ ಗಾಣಗೇರ, ಕೆ.ಎಸ್. ಜಾಲಗಿಡದ, ಸಂಗಪ್ಪ ಬಳಗಾನೂರ, ಮುಖ್ಯ ಶಿಕ್ಷಕಿ ಭುವನಾ ಕಡಕೋಳಮಠ, ಆದಪ್ಪ ಗೊರಚ್ಚಿಕನವರ ಉಪಸ್ಥಿತರಿದ್ದರು.ಮಕ್ಕಳಿಂದ ದೇಶಭಕ್ತಿ ಗೀತೆಯ ನೃತ್ಯರೂಪಕ ನಡೆಯಿತು. ಸುನಂದಾ ಮೇಣಸಿನಕಾಯಿ ಸ್ವಾಗತಿಸಿದರು. ಕೆ.ಆರ್. ದೇಶಪಾಂಡೆ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.