ಗುರುವಾರ , ನವೆಂಬರ್ 14, 2019
18 °C

ಜಿಲ್ಲೆಯ ಆರು ಕ್ಷೇತ್ರಗಳಿಗೆ 169 ನಾಮಪತ್ರ

Published:
Updated:

ಹಾವೇರಿ: ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕೊನೆಯ ದಿನವಾದ ಬುಧವಾರ ಒಟ್ಟು 69 ಅಭ್ಯರ್ಥಿಗಳು 92 ನಾಮಪತ್ರ ಸಲ್ಲಿಸಿದ್ದಾರೆ. ಜ್ಲ್ಲಿಲೆಯಲ್ಲಿ ಈವರೆಗೆ ಒಟ್ಟು 169 ನಾಮಪತ್ರಗಳು ಸಲ್ಲಿಸಿದಂತಾಗಿದೆ.ಬುಧವಾರ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ, ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಸೇರಿದಂತೆ 11 ಜನರು 13 ನಾಮಪತ್ರ ಸಲ್ಲಿಸಿದರೆ, ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹಾದಿಮನಿ ಸೇರಿದಂತೆ 10 ಜನರು 11 ನಾಮಪತ್ರ ಸಲ್ಲಿಸಿದ್ದಾರೆ.ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಬಾಪುಗೌಡ ಪಾಟೀಲ, ರಾಣಿಚನ್ನಮ್ಮ ಪಾರ್ಟಿಯಿಂದ ಎನ್.ಡಿ.ಮರಿಗೌಡರ 13 ಅಭ್ಯರ್ಥಿಗಳು 15 ನಾಮಪತ್ರ ಸಲ್ಲಿಸಿದರೆ, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು 17 ನಾಮಪತ್ರಗಳು ಸಲ್ಲಿಸಿದ್ದಾರೆ.ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಸಿ.ಪಾಟೀಲ, ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ.ಡಿ.ಬಸನಗೌಡರ ಸೇರಿದಂತೆ 8 ಅಭ್ಯರ್ಥಿಗಳು 11 ನಾಮಪತ್ರ ಸಲ್ಲಿಸಿದರೆ,  ರಾಣೆಬೆನ್ನೂರ ಕೆಜೆಪಿಯಿಂದ ಜಿ.ಶಿವಣ್ಣ, ಬಿಜೆಪಿಯಿಂದ ಅರುಣಕುಮಾರ ಪೂಜಾರ, ಜೆಡಿಎಸ್‌ನಿಂದ ಗೌಡಶಿವಣ್ಣನವರ ಸೇರಿದಂತೆ 14 ಅಭ್ಯರ್ಥಿಗಳು 25 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ನಾಮಪತ್ರ ಸಲ್ಲಿಸಿದವರು: ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ, ಕೆಜೆಪಿಯಿಂದ ನೆಹರೂ ಓಲೇಕಾರ, ಜೆಡಿಎಸ್‌ನಿಂದ ಪರಮೇಶಪ್ಪ ಮೇಗಳಮನಿ, ಬಿಎಸ್‌ಪಿಯಿಂದ ಶಂಕರಪ್ಪ ಕುನ್ನೂರ, ಬಿಎಸ್‌ಆರ್‌ಕಾಂಗ್ರೆಸ್‌ನಿಂದ ಕರಿಯಲ್ಲಪ್ಪ ಕೊರಗಾರ, ಜೆಡಿಯುನಿಂದ ಶಂಕರ ಎಸ್., ಪಕ್ಷೇತರರಾಗಿ ದುರಗೇಶ ಮೇಗಳಮನಿ, ಪ್ರಕಾಶ ಮೇಗಳಮನಿ, ರಾಜೇಶ್ವರಿ ಮೇಗಳಮನಿ, ಸಂಜಯ ಡಾಂಗೆ, ಶ್ರಿಪಾದ ಬೆಟಗೇರಿ ನಾಮಪತ್ರ ಸಲ್ಲಿಸಿದ್ದಾರೆ.ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಸವರಾಜ ಹಾದಿಮನಿ, ಬಿಎಸ್‌ಪಿಯಿಂದ ಕೃಷ್ಣಾ ಲಮಾಣಿ, ಜೆಡಿಎಸ್‌ನಿಂದ ಖಾಜಾವುದ್ದೀನ್ ಅಣ್ಣಿಗೇರಿ, ಮೋಹನಕುಮಾರ ಬಿ.ಕೆ, ಪಕ್ಷೇತರರಾಗಿ ಗುರುಮೂರ್ತಿ ತಟ್ಟಿ, ಮಾಲತೇಶ ಜಾಡರ, ಶಿವಶಂಕರಪ್ಪ ಬಾರ್ಕಿ, ಶ್ರೀನಿವಾಸ ಸಂಕಪ್ಲಿ, ಸಿದ್ದಪ್ಪ ಪೂಜಾರ, ಸುರೇಶ ನಾಯಕ ನಾಮಪತ್ರ ಸಲ್ಲಿಸಿದ್ದಾರೆ.ಬ್ಯಾಡಗಿಯಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಬಸವಂತಪ್ಪ ಗೋಣೆಮ್ಮನವರ, ಜೆಡಿಎಸ್‌ನಿಂದ ಚಂದ್ರಪ್ಪ ಕರ್ಜಗಿ, ಪಕ್ಷೇತರ ಅಭ್ಯರ್ಥಿಯಾಗಿ ಹಾಲಪ್ಪ ತಿಮ್ಮೇನಹಳ್ಳಿ ಸಲ್ಲಿಸಿದ್ದಾರೆ.ಶಿಗ್ಗಾವಿ ಕ್ಷೇತ್ರದಿಂದ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಅಜ್ಜಂಪೀರ್ ಖಾದ್ರಿ(2), ಕೆಜೆಪಿ ಅಭ್ಯರ್ಥಿ ಬಾಪುಗೌಡ ಪಾಟೀಲ(2), ಜೆಡಿಎಸ್‌ನಿಂದ ಸುಮಂಗಲಾ ಕಾಡಪ್ಪ ಮೈಸೂರ, ಯಲ್ಲಪ್ಪ ಯಲಹಂಕನವರ, ಬಿಎಸ್‌ಪಿಯಿಂದ ಓಂಕಾರ ಕೃಷ್ಣಾಜಿ ರಾಘವೇಂದ್ರ, ರಾಣಿ ಚನ್ನಮ್ಮ ಪಾರ್ಟಿಯಿಂದ ಎನ್.ಡಿ.ಮರಿಗೌಡರ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನಂದನ ಬಾಬುರಾವ್ ತಾಂಬೆ, ಪಕ್ಷೇತರರಾಗಿ ಮದನ ಗಂಗಪ್ಪ ಇಟ್ಟಣಗಿ, ಇಮ್ತಿಯಾಜ್‌ಅಹ್ಮದ್ ಅಜೀಜ್‌ಸಾಬ ಭಟ್ಟಿಪುರಿ, ಮೆಹೆಬೂಬ್‌ಸಾಬ ದಾದುಸಾಬ ಖಾಲೆಭಾಗ, ಸುರೇಶ ಕುನ್ನೂರ ನಾಮಪತ್ರ ಸಲ್ಲಿಸಿದ್ದಾರೆ.ಹಿರೇಕೆರೂರ ಕ್ಷೇತ್ರದಿಂದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ.ಡಿ.ಬಸನಗೌಡರ, ಜೆಡಿಎಸ್‌ನಿಂದ ಡಿ.ಎಂ.ಸಾಲಿ (2), ಕಾಂಗ್ರೆಸ್‌ನಿಂದ ಬಿ.ಸಿ.ಪಾಟೀಲ (2), ಪಕ್ಷೇತರರಾಗಿ ಚಂದ್ರಶೇಖರ ಬಾರಂಗಿ, ಬಿ.ಎಚ್. ಬನ್ನಿಕೋಡ, ಮಾರುತಿ ಮಣಕೂರು, ಎನ್.ಎಂ.ಈಟೇರ (2), ಎಚ್.ಎಂ.ಅಶೋಕ ನಾಮಪತ್ರ ಸಲ್ಲಿಸಿದ್ದಾರೆ.ರಾಣೆಬೆನ್ನೂರ ಕ್ಷೇತ್ರದಿಂದ ಬಿಜೆಪಿ ಅರುಣಕುಮಾರ ಗುತ್ತೂರ, ಬಿಎಸ್‌ಪಿ ಉಮೇಶ ಗುರುಲಿಂಗಪ್ಪಗೌಡ, ಬಿಎಸ್‌ಆರ್ ಕೊಟ್ರಪ್ಪ ಕೋರೇರ, ಜೆಡಿಎಸ್ ಮಂಜುನಾಥ್ ಗೌಡಶಿವಣ್ಣನವರ, ಎಸ್‌ಪಿ ರುದ್ರೇಶ ಹಡಗಲಿ, ಬಿಜೆಡಿ ಶಿವಯೋಗಿ ಮಹಾನುಭಾವಿಮಠ, ಜೆಡಿಯು ಸುನೀಲ ಬಣಕಾರ, ಪಕ್ಷೇತರ ಗುಡ್ಡಪ್ಪ ಡಿಳ್ಳೆಪ್ಪ ಓಲೇಕಾರ, ಪ್ರಕಾಶ ಜೈನ್, ಆರ್.ಶಂಕರ್, ಬಸಪ್ಪ ಬಣಕಾರ, ಮೋಹನ ಹಂಡೆ, ನೀಲಕಂಠಪ್ಪ ಗುಡಗೂರು, ಹನಮಂತಪ್ಪ ಕಬ್ಬಾರ ನಾಮಪತ್ರ ಸಲ್ಲಿಸಿದ್ದಾರೆ.ಬೃಹತ್ ಮೆರವಣಿಗೆ: ಹಾವೇರಿ ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಅವರು ಬುಧವಾರ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.ನಗರದ ಹುತಾತ್ಮ ಮೈಲಾರ ಮಹಾದೇವ ವೃತ್ತದಿಂದ ನೆಹರೂ ಓಲೇಕಾರ ಹಾಗೂ ಪಕ್ಷದ ಮುಖಂಡರು ತೆರೆದ ವಾಹನದಲ್ಲಿ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು.ಡೊಳ್ಳು ಕುಣಿತ, ಜಾಂಜ್ ಮೇಳದ ತಂಡಗಳು ಸುಡು ಬಿಸಿಲಿನಲ್ಲಿ ಮೆರವಣಿಗೆಗೆ ರಂಗ ತಂದವಲ್ಲದೇ, ನೂರಾರು ಮಹಿಳೆಯರು ಸೇರಿದಂತೆ ಸಾವಿರಾರರು ಕಾರ್ಯಕರ್ತರು ಪಕ್ಷ ಧ್ವಜ ಹಾಗೂ ಪಕ್ಷದ ಚಿಹ್ನೆಯಾದ ಟೆಂಗಿನಕಾಯಿ ಹಿಡಿದು ನೆಹರೂ ಓಲೇಕಾರ ಪರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಪರಮೇಶಪ್ಪ ಮೇಗಳಮನಿ ಕೂಡಾ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)