ಬುಧವಾರ, ನವೆಂಬರ್ 20, 2019
27 °C
ಶೇ 8.4ರಷ್ಟು ಮತದಾರರ ಸಂಖ್ಯೆ ಏರಿಕೆ

ಜಿಲ್ಲೆಯ ಮತದಾರರ ಸಂಖ್ಯೆ 4.02 ಲಕ್ಷ!

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯ ಮತದಾರರ ಸಂಖ್ಯೆ 4,02,333ಕ್ಕೆ ತಲುಪಿದೆ. ಇದು ಕಳೆದ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿದ್ದ 3,71,056 ಮತದಾರರ ಸಂಖ್ಯೆಗಿಂತ ಶೇ 8.4ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಕೇವಲ 31,277 ಮತದಾರರ ಸಂಖ್ಯೆ ಏರಿಕೆಯಾಗಿದೆ.ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಿಸಿದ ನಂತರ ಹೊರಬಿದ್ದ ಮತದಾರರ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈಗ 4.02 ಲಕ್ಷ ಮತದಾರರಿದ್ದಾರೆ. ಇವರಲ್ಲಿ 2,00,523 ಪುರುಷರು ಹಾಗೂ 2,01,795 ಮಹಿಳೆಯರು ಇದ್ದಾರೆ (ಇತರೆ 15 ಜನರು ಇದ್ದಾರೆ).ಕಳೆದ ಐದು ವರ್ಷಗಳ ಅವಧಿಯಲ್ಲಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರ ಸಂಖ್ಯೆಯೂ ಶೇ 9.4ರಷ್ಟು ಹೆಚ್ಚಳವಾಗಿದೆ. ಪುರುಷ ಮತದಾರರ ಸಂಖ್ಯೆಯು 13,796ರಷ್ಟು (ಶೇ 7.3) ಏರಿಕೆಯಾಗಿದ್ದರೆ, ಮಹಿಳಾ ಮತದಾರರ ಸಂಖ್ಯೆಯು 17,466ಕ್ಕೆ ತಲುಪಿದೆ.ಕ್ಷೇತ್ರವಾರು ವಿವರ ಇಂತಿದೆ

ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿ ಹೊಂದಿರುವ ಮಡಿಕೇರಿ ಕ್ಷೇತ್ರದ ಮತದಾರರ ಸಂಖ್ಯೆಯು 2,02,074 ತಲುಪಿದೆ. 2008ರಲ್ಲಿ ಈ ಸಂಖ್ಯೆಯು 1,81,375ರಷ್ಟಿತ್ತು. ಐದು ವರ್ಷಗಳ ಅವಧಿಯಲ್ಲಿ 20,699 (ಶೇ 11.41) ಮತದಾರರ ಸಂಖ್ಯೆ ಏರಿಕೆಯಾಗಿದೆ.ಪುರುಷ ಮತದಾರರ ಸಂಖ್ಯೆಯು 1,00,235 ತಲುಪಿದ್ದು, ಐದು ವರ್ಷಗಳ ಅವಧಿಯಲ್ಲಿ ಹೊಸದಾಗಿ 9,257 ಸೇರ್ಪಡೆಯಾಗಿದ್ದಾರೆ. ಶೇ 10.17ರಷ್ಟು ಹೆಚ್ಚಳ ಇದಾಗಿದೆ.ಮಹಿಳಾ ಮತದಾರರ ಸಂಖ್ಯೆಯು ಕಳೆದ ಚುನಾವಣೆಯಲ್ಲಿ 90,397ರಷ್ಟಿದಿದ್ದು, ಈ ಬಾರಿ 1,01,832ಗೆ ತಲುಪಿದೆ. ಶೇಕಡವಾರು ಶೇ 12.64ರಷ್ಟು ಹೆಚ್ಚಳವಾಗಿದೆ.ವಿರಾಜಪೇಟೆ ಕ್ಷೇತ್ರ: ಕಳೆದ ಐದು ವರ್ಷಗಳ (2008) ಅವಧಿಯಲ್ಲಿ ಇಲ್ಲಿನ ಮತದಾರರ ಸಂಖ್ಯೆಯು ಕೇವಲ 10,578ರಷ್ಟು (ಶೇ 5.5) ಏರಿಕೆಯಾಗಿದ್ದು, ಮೂಲಕ ಒಟ್ಟು ಮತದಾರರ ಸಂಖ್ಯೆಯು 2,00,259ಗೆ ತಲುಪಿದೆ.ಇದರಲ್ಲಿ ಪುರುಷರ ಸಂಖ್ಯೆಯು 1,00,288 ರಷ್ಟಿದ್ದು ಹಿಂದಿನ ಚುನಾವಣೆಯಲ್ಲಿ 95,749 ರಷ್ಟಿತ್ತು. ಶೇ 4.7ರಷ್ಟು ಹೆಚ್ಚಳವಾಗಿದೆ. ಇದರಂತೆ ಮಹಿಳಾ ಮತದಾರರ ಸಂಖ್ಯೆಯು 99,963 ರಷ್ಟು ಇದ್ದು, ಹಿಂದಿನ ಚುನಾವಣೆಯಲ್ಲಿ 93,932ರಷ್ಟು ಮತದಾರರು ಇದ್ದರು. ಐದು ವರ್ಷದ ಅವಧಿಯಲ್ಲಿ ಶೇ 6.4ರಷ್ಟು ಹೆಚ್ಚಳವಾಗಿದೆ.

ಪ್ರತಿಕ್ರಿಯಿಸಿ (+)