ಶನಿವಾರ, ಏಪ್ರಿಲ್ 17, 2021
30 °C

ಜಿಲ್ಲೆಯ ವಿವಿಧೆಡೆೆ ಕನ್ನಡ ರಾಜ್ಯೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ವಿವಿಧ ಸಂಘ-ಸಂಸ್ಥೆಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.ಜನಶಕ್ತಿ ಯುವಕ ಸಂಘ: ನಗರದ ಡಾ.ಬಾಬುಜಗಜೀವನರಾಂ ಕಲ್ಯಾಣ ಮಂಟಪದಲ್ಲಿ ಜನಶಕ್ತಿ ಯುವಕ ಸಂಘದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಾಣಿಕ ಪ್ರಭು ಅಂಧ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.ಅಧ್ಯಕ್ಷತೆಯನ್ನು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ವೆಂಕಟೇಶ ವಹಿಸಿದ್ದರು.

ಮಾದಿಗ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಆರ್.ರಾಮಸ್ವಾಮಿ, ಉಪನ್ಯಾಸಕ ಎ.ಶಂಕರ, ನಗರಸಭೆ ಎಂಜಿನಿಯರ್ ಮೋಹನರಾಜ್, ಜಿಪಂ ಎಂಜಿನಿಯರ್ ಪ್ರಕಾಶ, ಸಂಘದ ಅಧ್ಯಕ್ಷ ನರಸಿಂಹಲು, ಪ್ರಧಾನ ಕಾರ್ಯದರ್ಶಿ ರವಿಕುಮಾರ ಜೆ, ಸಂಘಟನಾ ಕಾರ್ಯದರ್ಶಿ ಪಿ.ರಾಜೇಶ, ಖಜಾಂಚಿ ಜೆ.ಈರಣ್ಣ, ಸಹ ಕಾರ್ಯದರ್ಶಿ ಪಿ.ಎನ್ ಪಾಂಡುರಂಗ, ಸದಸ್ಯರಾದ ಎಸ್.ವೀರೇಶ, ಎಂ.ರಾಘವೇಂದ್ರ, ಜೆ.ಸುರೇಶ, ಸಿ.ರಾಮು, ಎಸ್.ಎ ವೀರೇಶ ಹಾಗೂ ಮತ್ತಿತರರಿದ್ದರು.ಜೈಕರವೇ ಸಂಘಟನೆ:
ನಗರಸಭೆ ವ್ಯಾಪ್ತಿಯ ಯಕ್ಲಾಸಪುರ ಗ್ರಾಮದ ಐತಿಹಾಸಿಕ ಕೋಟೆಯಲ್ಲಿ ಜೈ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವಾರ್ಡ್ ಘಟಕದವತಿಯಿಂದ ರಾಜ್ಯಾಧ್ಯಕ್ಷ ಶರಣಪ್ಪ ಎನ್ ಧ್ವಜಾರೋಹಣ ಮಾಡಿದರು.ಗ್ರಾಮ ಮುಖಂಡರಾದ ಪರಶಪ್ಪ ತಾತ, ಮುಖ್ಯಾಧ್ಯಾಪಕ ಚಂದ್ರಶೇಖರ, ಶಿಕ್ಷಕರಾದ ಕಾಶಿನಾಥ, ರಾಘವೇಂದ್ರ ಉಪ್ಪಿ, ಶಿವಣ್ಣ, ರಾಘವೇಂದ್ರ, ಮಲ್ಲಿಕಾರ್ಜುನ, ಸದ್ದಾಂ, ಸೀನು, ವಿ.ಎಲ್ ಮಲ್ಲಿಕಾರ್ಜುನ, ಪ್ರವೀಣ, ನರಸಪ್ಪ, ತಿಮ್ಮಪ್ಪ, ವೀರೇಶ ಉಪಸ್ಥಿತರಿದ್ದರು.ವಿದ್ಯುತ್ ನೌಕರರ ಸಂಘ: ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ನೌಕರರ ಕನ್ನಡ ಸಂಘದವತಿಯಿಂದ ರಾಜ್ಯೋತ್ಸವ ಅಂಗವಾಗಿ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಟಿ ಮಿಟಗಾರ ಧ್ವಜಾರೋಹಣೆ ನೆರವೇರಿಸಿದರು.ಸ್ಥಳೀಯ ನೌಕರರ ಸಂಘದ ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಜೆ.ಎಲ್ ಗೋಪಿ, ವಿದ್ಯುತ್ ನೌಕರರ ಕನ್ನಡ ಸಂಘದ ಅಧ್ಯಕ್ಷ ಹುಲಿರಾಜ, ಸಹಕಾರ್ಯದರ್ಶಿ  ಪ್ರಕಾಶ ಅಸ್ಕಿಹಾಳ್, ಕೋಶಾಧ್ಯಕ್ಷ ಮಲ್ಲಿಕಾರ್ಜುನ, ಸಂಘಟನಾ ಕಾರ್ಯದರ್ಶಿ ಅಮರೇಶ, ಕನಕಿ ಮಹೇಶ, ಅಯ್ಯಣ್ಣ ಮಹಾಮನಿ ಹಾಗೂ ಮತ್ತಿತರರಿದ್ದರು.

ಅಸ್ಕಿಹಾಳ್ ಗ್ರಾಮ: ನಗರಸಭೆ ವ್ಯಾಪ್ತಿಯ ಅಸ್ಕಿಹಾಳ್ ಗ್ರಾಮದಲ್ಲಿ ಜೈ ಕನ್ನಡ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ತಿಮ್ಮಪ್ಪ ನಾಯಕ ಧ್ವಜಾರೋಹಣ ನೆರವೇರಿಸಿದರು.ಭೀಮನಗೌಡ ವಕೀಲ, ವೀರೇಶ ನಾಯಕ, ಸಿದ್ಧು ನಾಯಕ, ಎನ್,ತಾಯಪ್ಪ ನಾಯಕ, ವಿಜಯಕುಮಾರ, ಗಿರೀಶರೆಡ್ಡಿ(ಗೌಡ), ಮಲ್ಲೇಶ, ಪಿ.ನರಸಿಂಹಲು, ಮಹಾದೇವ, ನಾಗರಾಜ, ಸೂಗಪ್ಪ, ಎಂ.ವಸಂತಕುಮಾರ, ಶರಣಬಸವ ಹಾಗೂ ಗ್ರಾಮ ಮುಖಂಡರು ಇದ್ದರು.ಸಂಗೊಳ್ಳಿ ರಾಯಣ್ಣ ಯುವ ಸೇನೆ:
ಕನ್ನಡ ರಾಜ್ಯೋತ್ಸವ ದಿನದಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜೀವನ ಚರಿತ್ರೆಯ ಕುರಿತ ಸಂಗೊಳ್ಳಿ ರಾಯಣ್ಣ ಚಲನ ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸಂಗೊಳ್ಳಿರಾಯಣ್ಣ ಅವರ ಭಾವಚಿತ್ರಕ್ಕೆ 101 ಲೀಟರ್ ಹಾಲಿನ ಅಭಿಷೇಕ,ಸಿಹಿ ಹಂಚುವ ಮೂಲಕ ಸಂಭ್ರಮವನ್ನು ಪೂರ್ಣಿಮಾ ಚಿತ್ರದಲ್ಲಿ ಆಚರಿಸಲಾಯಿತು.ಜಿಲ್ಲಾಧ್ಯಕ್ಷ ಪೂಜಾರಿ ನರೇಂದ್ರ ಪ್ರಸಾದ ಕಟ್ಟಿಮನಿ, ಕೆ.ನೀಲಪ್ಪರೆಡ್ಡಿ, ಶಾಂತಪ್ಪ ಬೈರವ, ಕೆ.ಸುನೀಲ ಸಂಗವಾರ, ಸತೀಶ,ಸಚಿನ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.ಲಯನ್ಸ್ ಶಾಲೆ: ನಗರದ ಲಯನ್ಸ್ ಶಾಲೆಯಲ್ಲಿ  ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯ ಕಾರ್ಯದರ್ಶಿಶರಣ ಭೂಪಾಲ ನಾಡಗೌಡ ಅವರು ಧ್ವಜಾರೋಹಣ ನೆರವೇರಿಸಿದರು.ಶಾಲೆಯ ಖಜಾಂಚಿ ಬಿ.ಎ ರಾಯಚೂರು, ಟ್ರಸ್ಟಿಗಳಾದ ಎ.ಗುಂಡಪ್ಪ, ವಿ.ಹನುಮಂತರಾವ್, ಎಸ್.ಗೋವಿಂದರಾಜು, ಮುಖ್ಯಾಧ್ಯಾಪಕಿ ಚನ್ನಮ್ಮ ಒ.ಎ, ಆಡಳಿತಾಧಿಕಾರಿ ಎನ್.ವಿ.ಎನ್ ಕೃಷ್ಣಶಾಸ್ತ್ರಿ, ಸುಪ್ರಿಯಾ ಐಲಿ, ಅನಂತ ಅಕ್ಕಸಾಲಿ ಹಾಗೂ ಇತರರಿದ್ದರು.ಲಿಂಗಸುಗೂರ ವರದಿ

 ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಪಟ್ಟಣದ ಗುಡದನಾಳ ಕ್ರಾಸ್‌ದಿಂದ ಗಡಿಯಾರ ವೃತ್ತದ ವರೆಗೆ ಭವ್ಯ ಮೆರವಣಿಗೆ ನಡೆಸಿತು. ತೆರೆದ ಅಲಂಕೃತ ವಾಹನದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರ ಪ್ರತಿಷ್ಠಾಪಿಸುತ್ತಿದ್ದಂತೆ ತಂಪಾದ ಗಾಳಿ, ತುಂತುರು ಮಳೆಯಲ್ಲಿ ಮೆರವಣಿಗೆ ಸಾಗಿ ಬಂದಿತು.ಗುರುವಾರ ಆಯೋಜಿಸಿದ್ದ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಎಸ್‌ಎಲ್‌ವಿ ಲಾಡ್ಜ್, ಬಸ್ ನಿಲ್ದಾಣ ವೃತ್ತ, ರಾಘವೇಂದ್ರ ಮಠದ ಮುಂಭಾಗದಿಂದ ಅಂಚೆ ಕಚೇರಿ ಮಾರ್ಗವಾಗಿ ಗಡಿಯಾರ ವೃತ್ತಕ್ಕೆ ಆಗಮಿಸಿತು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ ಕೂಡ ಕನ್ನಡ ಹಾಡುಗಳಿಗೆ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಅಭಿಮಾನಿ ಕಾರ್ಯಕರ್ತರ ಚಪ್ಪಾಳೆ, ಕೇಕೆ, ಜಯಘೋಷಗಳು ಮುಗಿಲು ಮುಟ್ಟಿದ್ದವು. ಮುಖಂಡರಾದ ಆಂಜನೇಯ ಭಂಡಾರಿ, ಅಜೀಜಪಾಷ, ಶಿವು ನಾಯಕ, ರವಿಕುಮಾರ, ಜಿ.ಎಸ್. ನಾಯಕ, ಅಮರೇಶ ನಾಯಕ, ವಿಜಯ, ವಿರೇಶ ಸೇರಿದಂತೆ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಲಿಂಗಸುಗೂರ ತಾಲ್ಲೂಕು ಆಡಳಿತ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರ ತಾಲ್ಲೂಕು ಆಡಳಿತ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಆಯೋಜಿಸಿತ್ತು.ಶಾಸಕ ಮಾನಪ್ಪ ವಜ್ಜಲ ಹೊರತು ಪಡಿಸಿದರೆ ಸ್ಥಳೀಯ ಸಂಸ್ಥೆಗಳ ಯಾವೊಬ್ಬ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ. ತಾಲ್ಲೂಕು ಆಡಳಿತ ಅಥವಾ ಸರ್ಕಾರದ ಯಾವುದೇ ಇಲಾಖೆ ಕಾರ್ಯಕ್ರಮ ಆಯೋಜಿಸುವಾಗ ಪ್ರತಿನಿಧಿಗಳ ಹೆಸರು ಕೈಬಿಟ್ಟರೆ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂದು ಕಾರ್ಯಕ್ರಮ ರದ್ದುಗೊಳಿಸುವ ಪ್ರತಿನಿಧಿಗಳು ರಾಜ್ಯೋತ್ಸವದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಅಪಮಾನ ಮಾಡಿದ್ದಾರೆ ಎಂದು ಕರವೇ ವಿವಿಧ ಬಣಗಳ ಮುಖಂಡರು ಆರೋಪಿಸಿದ್ದಾರೆ.ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತಾಬಾಯಿ ಶಿವನಗೌಡ ಪಾಟೀಲ ಆಗಮಿಸಿದ್ದರು.

ಪುರಸಭೆ ಅಧ್ಯಕ್ಷೆ ದುರುಗಮ್ಮ ರಾಮಸ್ವಾಮಿ ಇದ್ದರು.ಮಾನ್ವಿ ವರದಿ

ಪಟ್ಟಣದ ವಿವಿಧೆಡೆ ಗುರುವಾರ 57ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.ಕರವೇ:
ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕರವೇ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಕಾಜಗಾರ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕರವೇ ತಾಲ್ಲೂಕು ಅಧ್ಯಕ್ಷ ಎಂ.ಡಿ.ಮೋಹಿನ್‌ಖಾನ್ ಧ್ವಜಾರೋಹಣ ನೆರವೇರಿಸಿದರು.

ತಾಲ್ಲೂಕು ಯುವ ಅಧ್ಯಕ್ಷ ಬಂದೇನವಾಜ್ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮನಗಳನ್ನು ವಿತರಿಸಲಾಯಿತು.ಕರವೇ ತಾಲ್ಲೂಕು ಗೌರವಾಧ್ಯಕ್ಷ ಸೈಯದ್ ಆರೀಫ್ ಮೌಲಾನಾ ಖಾದ್ರಿ, ನೇತಾಜಿ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ , ಕರವೇ ಕಾರ್ಯಾಧ್ಯಕ್ಷ ಶ್ರೀಧರ ಸ್ವಾಮಿ,ನಗರಾಧ್ಯಕ್ಷ ಕೆ.ಬೀರಪ್ಪ, ವಿದ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷ ಎಂ.ಜಗದೀಶ ಕುರ್ಡಿ, ನಗರ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿತಿನ್ ಸಿಂಗ್ ಮತ್ತಿತರರು ಇದ್ದರು.ಕಲ್ಮಠ ಕಾಲೇಜು: ಪಟ್ಟಣದ ಶ್ರೀಪಂಪಾ ವಿರೂಪಾಕ್ಷೇಶ್ವರ ಕಲ್ಮಠ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಮರಿದೇವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಕಲ್ಮಠ ಪದವಿ ಕಾಲೇಜು ಪ್ರಾಚಾರ್ಯ ಕೆ.ವಿ.ರಾಮಕೃಷ್ಣ, ಉಪನ್ಯಾಸಕರಾದ ಎಂ.ಎಂ.ಹಿರೇಮಠ  ಹಾಗೂ ಕೆ.ಶಂಕರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪಿಯು ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ, ಪ್ರಾಥಮಿಕ ಶಾಲೆ ಮುಖ್ಯ ಗುರು ಮಂಜುನಾಥ ಕಮತರ ವೇದಿಕೆಯಲ್ಲಿದ್ದರು.ಹನುಮಂತರಾವ್ ಸ್ವಾಗತಿಸಿದರು. ಎಂ.ನಾಗಭೂಷಣ ಸ್ವಾಮಿ ನಿರೂಪಿಸಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಸಿದ್ದನಗೌಡ ಪಾಟೀಲ್ ಭೂತಲದಿನ್ನಿ ವಂದಿಸಿದರು.ಚೌಡೇಶ್ವರಿ ಶಾಲೆ: ಪಟ್ಟಣದ ತೊಗಟವೀರ ಕ್ಷತ್ರಿಯ ವಿದ್ಯಾಸಂಸ್ಥೆಯ ಶ್ರಿಚೌಡೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಆರ್.ಸುಭಾಸ್‌ಚಂದ್ರ, ಉಪಾಧ್ಯಕ್ಷ ಸಿ.ಈರಣ್ಣ, ಖಜಾಂಚಿ ಕೆ.ಬಸವರಾಜ, ಕಾರ್ಯದರ್ಶಿ ಎಸ್.ಗುರುದಾಸ್, ಸದಸ್ಯರಾದ ಸಿ.ರಾಮು, ಸಲಹೆಗಾರ ಆರ್.ವೀರಭದ್ರ, ಸಿ.ಬಸವರಾಜ, ತೊಗಟವೀರ ಕ್ಷತ್ರಿಯ ಯುವಕ ಸಂಘದ ಅಧ್ಯಕ್ಷರಾದ ಸಿ.ದತ್ತಾತ್ರೇಯ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.ಉಮಳಿಹೊಸೂರು:
ತಾಲ್ಲೂಕಿನ ಉಮಳಿಹೊಸೂರು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಘಟಕದ ವತಿಯಿಂದ ಗುರುವಾರ 57ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.ಗ್ರಾಮ ಘಟಕದ ಅಧ್ಯಕ್ಷ ಪುರುಷೋತ್ತಮ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಕೃಷ್ಣಯ್ಯ ಮಾತನಾಡಿದರು. ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕರವೇ ಪದಾಧಿಕಾರಿಗಳಾದ ಸಿದ್ದಯ್ಯ ಮಡಿವಾಳ, ಗಂಗಾಧರ, ಮಹೇಳ ಮಡಿವಾಳ, ಬದ್ರಿನಾಥ ವಿಶ್ವಕರ್ಮ, ಕೆ.ಶಾಂತಕುಮಾರ, ಜೆ.ಶಿವುಕುಮಾರ, ರುದ್ರಗೌಡ, ಕೆ.ರುದ್ರಪ್ಪ, ಅಂಬಾರಿ ಯಂಕಪ್ಪ, ಎಂ.ಜಗದೀಶ, ಎಂ.ಶರಣಬಸವ, , ಎಚ್.ಪಂಪಣ್ಣ, ಮಹಾಂತೇಶ, ಗ್ರಾಪಂ ಅಧ್ಯಕ್ಷ ಸಣ್ಣ ಅಯ್ಯಪ್ಪ ಮತ್ತು ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.