ಮಂಗಳವಾರ, ಮೇ 18, 2021
30 °C

ಜಿಲ್ಲೆಯ ವಿವಿಧೆಡೆ ಅಂಬೇಡ್ಕರ್ ಜನ್ಮ ದಿನಾಚರಣೆ, ಸೌಲಭ್ಯ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜ್ಲ್ಲಿಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶನಿವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು.ಹೊಸನಗರ ವರದಿಅಂಬೇಡ್ಕರ್ ಜನ್ಮದಿನಾಚರಣೆ ಕೇವಲ ಅಧಿಕಾರಿ, ಜನಪ್ರತಿನಿಧಿಗಳ ಸಭೆ ಆಗಬಾರದು. ದಲಿತರೂ ಸೇರಿದಂತೆ ಸಾರ್ವಜನಿಕರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರ ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಇವರ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಒಂದು ವರ್ಗದ ನಾಯಕರು ಎಂದು ಸೃಷ್ಟಿಸುವುದು ಸರಿ ಅಲ್ಲ. ಅವರು ವಿಶ್ವದ ನಾಯಕರು ಎಂದು  ಅವರು ಅಭಿಪ್ರಾಯಪಟ್ಟರು.ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್. ಸತ್ಯನಾರಾಯಣ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ವ್ಯಕ್ತಿತ್ವ ಹಾಗೂ ಬದುಕು ಕುರಿತು ಉಪನ್ಯಾಸ ನೀಡಿದರು.ಪ.ಪಂ. ಅಧ್ಯಕ್ಷ ಅರುಣ್‌ಕುಮಾರ್ ವಿವಿಧ ಇಲಾಖೆಗಳ ಶೇ. 22 ಅನುದಾನದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ತಾ.ಪಂ. ಉಪಾಧ್ಯಕ್ಷೆ ಶಾಂತಾ ಶೇಖರಪ್ಪ, ಸದಸ್ಯರಾದ ವೀರೇಶ್, ಜಯಲಕ್ಷ್ಮೀ ಆಚಾರ್, ಗೀತಾ ಪೂರ್ಣಿಮಾ ಮೂರ್ತಿ, ನಾಗರತ್ನಾ ದೇವರಾಜ್, ತಹಶೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ,  ಪ.ಪಂ. ಉಪಾಧ್ಯಕ್ಷೆ ಗುಲಾಬಿ ಮರಿಯಪ್ಪ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಇದ್ದರು.

ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಮಣಿ ಸ್ವಾಗತಿಸಿದರು. ಲಲಿತಾಬಾಯಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ನಿರ್ದೇಶಕ ಈಶ್ವರಪ್ಪ ವಂದಿಸಿದರು.ರಿಪ್ಪನ್‌ಪೇಟೆ ವರದಿಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ್ ಕೇವಲ ದಲಿತ ನಾಯಕನಲ್ಲ. ಅವರು ರಾಷ್ಟ್ರ ನಾಯಕ. ಸರ್ವರಿಗೂ ಸಮಬಾಳು- ಸಮಪಾಲು ಎಂಬಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಾರಿದ ಅವರು ದೇಶಕಂಡ ಅಸಾಮಾನ್ಯ ವ್ಯಕ್ತಿ ಎಂದು ಗ್ರಾ.ಪಂ. ಅಧ್ಯಕ್ಷೆ ಪದ್ಮಾ ಸುರೇಶ ಬಣ್ಣಿಸಿದರು.

ಇಲ್ಲಿನ ಗ್ರಾ.ಪಂ. ಅವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮುಖಂಡ ಟಿ.ಆರ್. ಕೃಷ್ಣಪ್ಪ ಮಾತನಾಡಿ, ದಲಿತರ ಬಗ್ಗೆ ಪ್ರಾಮಾಣಿಕ ಕಾಳಜಿ ಇರಲಿ, ಬೂಟಾಟಿಕೆ ಬೇಡ. ಹದಗೆಟ್ಟ  ರಾಜಕೀಯ ವ್ಯವಸ್ಥೆಯಲ್ಲಿ ದಲಿತರ ಶೋಷಣೆ ನಡೆಯುವುದು ನಿಲ್ಲಬೇಕು ಎಂದರು.

ಆರ್.ಎ. ಚಾಬುಸಾಬು ಮಾತನಾಡಿ, ದಲಿತರಿಂದಲೇ ದಲಿತರ ಶೋಷಣೆ ನಡೆಯುತ್ತಿರುವುದು ವಿಷಾದಕರ ಎಂದರು.ಎಂ.ಬಿ. ಲಕ್ಷಣ್ ಗೌಡ, ಕೆ. ಮುದ್ದುಭಂಡಾರಿ, ಆರ್.ಟಿ. ಗೋಪಾಲ, ಆರ್. ರಾಘವೇಂದ್ರ, ಗ್ರಾ.ಪಂ. ಸದಸ್ಯರಾದ ಯುವರಾಜ, ರವೀಂದ್ರ ಕೆರೆಹಳ್ಳಿ,  ಎಲ್. ವೆಂಕಟೇಶ, ಬಿ.ಕೆ. ನಾಗರಾಜ ಹಾಗೂ ಮುಖಂಡರಾದ ತ.ಮಾ. ನರಸಿಂಹ, ಪರಶುರಾಮ್, ನಿತ್ಯಾನಂದ ಹೆಗಡೆ, ಜಿ.ಟಿ ಯೋಗೀಶ್ವರಗೌಡ  ಹಾಗೂ ಪಿಡಿಒ  ಇತರರು ಹಾಜರಿದ್ದರು.ಸಾಗರ ವರದಿ

ಭಾರತೀಯ ಸಮಾಜದಲ್ಲಿನ ಧ್ವನಿ ಇಲ್ಲದ ಜನರನ್ನು ಸಂವಿಧಾನದ ಚೌಕಟ್ಟಿನೊಳಗೆ ತಂದ ಕಾರಣಕ್ಕೆ ಅಂಬೇಡ್ಕರ್ ಇವತ್ತಿಗೂ ಭಾರತದ ಪ್ರಮುಖ ಸಾಮಾಜಿಕ ಹಾಗೂ ರಾಜಕೀಯ ವ್ಯಕ್ತಿಯಾಗಿ ಕಾಣುತ್ತಾರೆ ಎಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಟಿ. ಅವಿನಾಶ್ ಹೇಳಿದರು.ಇಲ್ಲಿನ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘರ್ಷ ಸಮಿತಿಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಭಾರತದಲ್ಲಿ ಸಮಾನತೆಯುಳ್ಳ ಸಮಾಜ ನಿರ್ಮಾಣ ಆಗಬೇಕು ಎಂಬ ಅಂಬೇಡ್ಕರ್ ಅವರ ಆಶಯ ಇಂದಿಗೂ ಈಡೇರಿಲ್ಲ. ಈ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ ಎಂದರು.ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಎಂ. ಶಿವಣ್ಣ ಮಾತನಾಡಿ, ಮಹಿಳೆಗೂ ವಿಚ್ಛೇದನದ ಹಕ್ಕು ಇರಬೇಕು ಎಂದು ಕೇಂದ್ರದ ಕಾನೂನು ಸಚಿವರಾಗಿ ಅಂಬೇಡ್ಕರ್ ಮಂಡಿಸಿದ ವಾದಕ್ಕೆ ಮೂಲಭೂತವಾದಿಗಳಿಂದ ವಿರೋಧ ವ್ಯಕ್ತವಾಯಿತು. ಈ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬದ್ಧತೆ ಪ್ರದರ್ಶಿಸಿದ ಅಪರೂಪದ ನಾಯಕ ಅಂಬೇಡ್ಕರ್ ಎಂದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಷಣ್ಮುಖಪ್ಪ, ಉಪಾಧ್ಯಕ್ಷೆ ಶ್ಯಾಮಲಾ ದೇವರಾಜ್, ಸದಸ್ಯೆ ಜ್ಯೋತಿ ಮುರಳಿಧರ್, ನಗರಸಭಾ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಉಪಾಧ್ಯಕ್ಷ ಡಿ. ರವಿ, ಸದಸ್ಯರಾದ ಸುಂದರ್‌ಸಿಂಗ್, ಕವಿತಾ ಜಯಣ್ಣ, ಗಂಗಮ್ಮ, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ರಾಜೇಂದ್ರ ಬಂದಗದ್ದೆ, ಮಂಜುನಾಥ ಚಿಪ್ಳಿ, ಲಕ್ಷ್ಮಣ್ ಸಾಗರ್, ಉಪ ವಿಭಾಗಾಧಿಕಾರಿ ಡಾ.ಜಿ.ಎಲ್. ಪ್ರವೀಣ್‌ಕುಮಾರ್, ತಹಶೀಲ್ದಾರ್ ಯೋಗೇಶ್ವರ್ ಹಾಜರಿದ್ದರು.ಸೊರಬ ವರದಿಸರ್ಕಾರದಿಂದ ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗಿ ಉತ್ತಮ ಜೀವನ ರೂಪಿಸಿಕೊಂಡಾಗ ಮಾತ್ರ ಯೋಜನೆಗಳು ಸಫಲತೆ ಕಾಣಲು ಸಾಧ್ಯ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ದಿನಕರಭಟ್ ಭಾವೆ ತಿಳಿಸಿದರು.ಪಟ್ಟಣ ಪಂಚಾಯ್ತಿ ವತಿಯಿಂದ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಚಿ ಸೋಮಪ್ಪ ಮಾತನಾಡಿ, ಡಾ.ಅಂಬೇಡ್ಕರ್ ಅವರು ಯಾವುದೇ ಒಂದು ಜನಾಂಗದ ನಾಯಕರಾಗಿರದೇ ಇಡೀ ಭಾರತ ದೇಶದ ಎಲ್ಲಾ ಜನಾಂಗದ ನಾಯಕರಾಗಿದ್ದರು. ಹಿಂದುಳಿದವರ ಅಭಿವದ್ಧಿಯ ಕನಸನ್ನು ಕಂಡಂತಹ ಧೀಮಂತ ನಾಯಕರಾಗಿದ್ದರು ಎಂದರು.ಅಧ್ಯಕ್ಷೆ ವಿಜಯ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಪ್ರಶಾಂತ ಮೇಸ್ತ್ರಿ, ಸದಸ್ಯರಾದ ಸಮಿವುಲ್ಲಾ, ಪದ್ಮಾವತಿ ಎಲ್.ಎನ್,  ಮಹೇಶ್ ಗೌಳಿ, ಬೇಬಿ ಜುಲೇಕಾ, ಸರಸ್ವತಿ ಜೆ. ನಾವುಡ, ನಾಮನಿರ್ದೇಶಿತ ಸದಸ್ಯರಾದ ರತ್ನಮ್ಮ, ಜನಾರ್ದನ, ಜಿ.ಅಣ್ಣಪ್ಪ ಪ. ಪಂಚಾಯ್ತಿ ಮುಖ್ಯಾಧಿಕಾರಿ ಜಿ.ಟಿ. ವೀರೇಶ್‌ಕುಮಾರ್, ರಮೇಶ್ ಉಪಸ್ಥಿತರಿದ್ದರು.ಭದ್ರಾವತಿ ವರದಿಅಂಬೇಡ್ಕರ್ ಸಾಮಾಜಿಕ ಸಮಾನತೆ ಸಾರಿದ ಮಹಾನ್ ರಾಷ್ಟ್ರ ನಾಯಕ~ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಕುಮಾರಸ್ವಾಮಿ ಹೇಳಿದರು.ಇಲ್ಲಿನ ರಾಷ್ಟ್ರೀಯ ಹಬ್ಬಗಳ ಸಮಿತಿ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೇಣಿಕೃತ ಸಮಾಜ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ಜಗಜೀವನರಾಂ ತಮ್ಮ ಬದುಕಿನ ರಾಜಕೀಯ ರಂಗದಲ್ಲಿ ಸಮಾನತೆ ತರುವ ಹೋರಾಟ ಮಾಡಿದರು ಎಂದು ಕುವೆಂಪು ವಿ.ವಿ ಕನ್ನಡ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನ ಮನಿ ಹೇಳಿದರು.ಸಾಗರ ಪದವಿ ಕಾಲೇಜಿನ ಪ್ರಾಧ್ಯಾಪಕ ಬಿ.ಎಲ್. ರಾಜು ಮಾತನಾಡಿ `ಮೀಸಲಾತಿ ಪಡೆದ ಜನರು ಬಾಬಾಸಾಹೇಬ್ ಅವರನ್ನು ತಮ್ಮ ಮನೆಗೆ, ಮನಸ್ಸಿಗೆ ತೆಗೆದು ಕೊಳ್ಳುವ ಕೆಲಸ ಮಾಡಬೇಕು ಎಂದರು.

ಶಾಸಕ ಬಿ.ಕೆ. ಸಂಗಮೇಶ್ವರ ಅಧ್ಯಕ್ಷತೆ ವಹಿಸಿದ್ದರು.

 

ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್, ಉಪಾಧ್ಯಕ್ಷೆ ಕೆ.ಬಿ. ಲಕ್ಷ್ಮೀ,  ತಾ.ಪಂ ಅಧ್ಯಕ್ಷ ಆರ್. ಹಾಲಪ್ಪ, ಉಪಾಧ್ಯಕ್ಷ ಶಾಂತಕುಮಾರ್, ಸದಸ್ಯರಾದ ಗೌರಮ್ಮ, ಭುವನೇಶ್ವರಿ, ಎಚ್.ಎಲ್. ಷಡಾಕ್ಷರಿ, ಜಿ. ಸುಜಾತಾ, ತಹಶೀಲ್ದಾರ್ ರೇಶ್ಮಿ, ತಾ.ಪಂ ಅಧಿಕಾರಿ ಎಂ. ಮಲ್ಲೇಶಪ್ಪ, ಡಿವೈಎಸ್‌ಪಿ ಟಿ. ಶ್ರೀಧರ್, ಡಿಎಫ್‌ಒ ಲಿಂಗರಾಜ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.