ಮಂಗಳವಾರ, ಏಪ್ರಿಲ್ 13, 2021
31 °C

ಜಿಲ್ಲೆಯ ವಿವಿಧೆಡೆ ಉತ್ಸವ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಕುಂಡಿ (ಗದಗ): ಮುಂಬರುವ ವರ್ಷದಿಂದ ಜಿಲ್ಲೆಯ ವಿವಿಧೆಡೆ ಲಕ್ಕುಂಡಿ ಉತ್ಸವವನ್ನು ಆಚರಿಸಲಾಗುವುದು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.ಕಳೆದ ಎರಡು ದಿನಗಳಿಂದ ನಡೆದ ಲಕ್ಕುಂಡಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ಮುಂದಿನ ವರ್ಷದಿಂದ ಉತ್ಸವಕ್ಕೆ ರೂ. 50 ಲಕ್ಷ ನೀಡುವ ಭರವಸೆ ನೀಡಿರುವ ಹಿನ್ನಲೆಯಲ್ಲಿ ಉತ್ಸವವನ್ನು ಮೂರು ದಿನಗಳ ಕಾಲ ಮಾಡಲಾಗುತ್ತದೆ ಎಂದರು.ಲಕ್ಕುಂಡಿ ಉತ್ಸವ ಗದಗ ಜಿಲ್ಲೆಯ ಉತ್ಸವವಾಗಿದ್ದರಿಂದ ಈ ಉತ್ಸವವನ್ನು ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಾಡಲಾಗುತ್ತದೆ. ಉತ್ಸವದಲ್ಲಿ ರಾಜಕಾರಣಿಗಳಿಗೆ ಎಷ್ಟು ಪ್ರಾಶಸ್ತ್ಯ ನೀಡಬೇಕು ಎಂಬುದರ ಕುರಿತು ಟೀಕೆಗಳು ಬಂದಿದ್ದು, ಈ ಬಗ್ಗೆ ಮುಂದಿನ ಉತ್ಸವದಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ಸಚಿವ ಪಾಟೀಲ ಸ್ಪಷ್ಟಪಡಿಸಿದರು.ಪೈಲ್ವಾನರಿಗೆ ಮಾಸಾಶನ: ರಾಜ್ಯದಲ್ಲಿನ ಪೈಲ್ವಾನರ ಬಹು ದಿನಗಳ ಬೇಡಿಕೆಯಾಗಿದ್ದ ಮಾಸಾಶನ ವ್ಯವಸ್ಥೆಯನ್ನು ಮೊದಲ ಬಾರಿಗೆ ಬಿಜೆಪಿ ಸರ್ಕಾರ ಮಾಡಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.ಪೈಲ್ವಾನರ ಗರಡಿ ಮನೆಗಳ ದುರಸ್ತಿಗೆ ಬೇಕಾದ ಹಣಕಾಸಿನ ನೆರವನ್ನು ಶಾಸಕ ಮತ್ತು ಸಂಸದರ ಅನುದಾನದಲ್ಲಿ ದೊರಕಿಸಿ ಕೊಡುವುದಾಗಿ ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಪೈಲ್ವಾನರಿಗೆ ಮಾಸಾಶನದ ಚೆಕ್‌ಗಳನ್ನು ವಿತರಿಸಲಾಯಿತು.ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಉಪಾಧ್ಯಕ್ಷ ಬಿ.ಎಸ್.ಬಂಡಿ, ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೀರಣ್ಣ ತುರಮರಿ ಮತ್ತಿತರರು ಕಾರ್ಯ ಕ್ರಮದಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.